ವಿಟ್ಲ: Tulu Times | ವಿಟ್ಲ ಬಸ್ ನಿಲ್ದಾಣದ ಬಳಿ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಟ್ಲ ಮುಡೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ (68) ಮೃತರಾಗಿರುವ ದುರ್ಧೈವಿ. ಇನ್ನು ಬೈಕ್ ಮಹಿಳೆಗೆ ಡಿಕ್ಕಿ ಹೊಡೆದಿರುವ ಪರಿಣಾಮ ಬೈಕ್ ನಲ್ಲಿದ್ದ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ಸ್ಥಳೀಯರು ಹೇಳಿರುವ ಮಾಹಿತಿಯ ಪ್ರಕಾರ, ಅಪಘಾತದ ತೀವ್ರತೆಗೆ ಬೈಕ್ ಸುಮಾರು 50 ಮೀಟರ್ ದೂರ ರಸ್ತೆಯಲ್ಲಿ ಎಳೆಯುತ್ತ ಹೋಗಿ ಬಿದ್ದಿದೆ ಎಂದಿದ್ದಾರೆ. ಕಾಶಿಮಠ ನಿವಾಸಿ ಪ್ರತಾಪ್ ಅವರು ಮಾನವೀಯತೆ ಮೆರೆದಿದ್ದು, ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನನ್ನು ಯಾರೂ ಮುಟ್ಟದೆ ಇದ್ದ ಸಂದರ್ಭ ತಮ್ಮ ದ್ವಿಚಕ್ರ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ: ವಿದ್ಯಾರ್ಥಿನಿಯನ್ನು ಹಾಡಹಗಲೇ ಕಿಡ್ನಾಪ್ ಮಾಡುವ ಯತ್ನ
ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಹಾಡಹಗಲೇ ಕಿಡ್ನಾಪ್ ಕೇಸ್ ಹೆಚ್ಚಾಗ್ತಾ ಇದೆ. ಸ್ಕೂಟರ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಕಾಶಿಬೆಟ್ಟು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಂದಿನಂತೆ ಫೆ.9 ರಂದು ಬೆಳಗ್ಗೆ ಸುಮಾರು 8:30 ಕ್ಕೆ ತಂದೆಯ ಸ್ಕೂಟರ್ ನಲ್ಲಿ ಸಂತೆಕಟ್ಟೆ ಬಸ್ ಹತ್ತಲು ಹೋಗುವಾಗ ಈ ಘಟನೆ ನಡೆದಿರುವುದು ವರದಿಯಾಗಿದೆ.
ಅಪರಿಚಿತ ನಂಬರ್ ಪ್ಲೇಟ್ ಗೆ ಬಟ್ಟೆಯನ್ನು ಕಟ್ಟಿ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಸ್ಕೂಟರ್ ಅಡ್ಡಗಟ್ಟಿ, ವಿದ್ಯಾರ್ಥಿನಿಯನ್ನು ಕಾರಿನೊಳಗೆ ಎಳೆದು ತಂದಾಗ ಬೊಬ್ಬೆ ಹೊಡೆದು ವಿರೋಧ ವ್ಯಕ್ತಪಡಿಸಿ ಹೊರಬಂದಾಗ ಹಿಂಭಾಗದಿಂದ ಸ್ಕೂಟರ್ ಬರುವುದನ್ನು ನೋಡಿ ಚೂರಿಯಿಂದ ಕೈಗೆ, ಬೆರಳಿಗೆ ಚುಚ್ಚಿ ಕಾಲೇಜು ಬ್ಯಾಗ್ ಹಿಡಿದುಕೊಂಡು ಮತ್ತೆ ಕಾರಿನೊಂದಿಗೆ ಅಪರಿಚಿತರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿನಿ ಬಳಿಯಿಂದ ಮಾಹಿತಿ ಪಡೆದುಕೊಂಡು ತನಿಖೆ ಚುರುಕುಗೊಳಿಸಿರುವುದು ತಿಳಿದು ಬಂದಿದೆ.
A bike hit a woman in Vitla; the woman died on the spot!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











