ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಡುಪಿ ಕಾಂಗ್ರೆಸ್‌ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

ಉಡುಪಿ: Tulu Times | ಉಡುಪಿಯ ಕಲ್ಸಂಕ ಬಳಿಯಲ್ಲಿ ಕಾಂಗ್ರೆಸ್ ನ NSUI ಉಪಾಧ್ಯಕ್ಷ ಶರತ್ ಕುಂದರ್ ಮೇಲೆ ತಲ್ವಾರ್ ದಾಳಿ ನಡೆಸಲಾಗಿದೆ.ತಲವಾರು ಮತ್ತು ಕಬ್ಬಿಣದ ಚಯರ್‌ನಿಂದ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ:‌ ಕಾರಿಂಜ ಬ್ರಹ್ಮಕಲಶ- ಚಪ್ಪರ ಮೂಹೂರ್ತ,ಆಮಂತ್ರಣ ಪತ್ರಿಕೆ ಬಿಡುಗಡೆ

ಘಟನೆ ನಡೆದದ್ದು ಹೇಗೆ..?

ಸಂಜೆ 9 ಗಂಟೆ ಸುಮಾರಿಗೆ ಸ್ನೇಹಿತನ ಗ್ರಾಂಡ್ ವಿಟಾರಾ ಕಾರಿನಲ್ಲಿ ಮಣಿಪಾಲದ ಹಕುನಾ ಮಟಾಟ ಹೋಟೆಲ್‌ಗೆ ಊಟಕ್ಕೆ ತೆರಳುತ್ತಿದ್ದ.  ವೇಳೆ ಹೋಟೆಲ್‌ನಲ್ಲಿ ನನ್ನ ಕೈ ಆರೋಪಿಗಳ ಪೈಕಿ ಒಬ್ಬರ ಕೈಗೆ ತಾಗಿದ್ದು,  ಇದರಿಂದ ಮಾತು ಮಾತು ಬೆಳೆದಿದೆ.  ನಂತರ ಊಟ ಮುಗಿಸಿ ಮನೆಗೆ ತೆರಳುವ ವೇಳೆ ಕಲ್ಸಂಕ ಬಳಿ ತಲುಪುವಾಗ ಅಕ್ಷತ್ ಪೈ ಎಂಬಾತ ಫೋನ್ ಮಾಡಿ ಹೋಟೆಲ್‌ನಲ್ಲಿ ನಡೆದ ಗಲಾಟೆಯ ಬಗ್ಗೆ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ತಿಳಿಸಿದ್ದಾನೆ ಎಂದು ಈ ಕುರಿತು ಶರತ್ ಕುಂದರ್  ದೂರು ನೀಡಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜಿಲ್ಲೆಗಳಲ್ಲಿ ಎಲ್‍ಇಡಿ ಸ್ಕ್ರೀನ್ ಮೂಲಕ ಕೇಂದ್ರ ಬಜೆಟ್ ವೀಕ್ಷಿಸಲು ವ್ಯವಸ್ಥೆ: ಅಶ್ವತ್ಥನಾರಾಯಣ್

ತಲ್ವಾರ್ ಹಿಡಿದು ದಾಳಿ!

ಅಕ್ಷತ್ ಪೈ ಫೋನ್‌ ಮಾಡಿದ ನಂತರ, ಶರತ್ ಕುಂದರ್ ಹಾಗೂ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್, ರೋಹಿತ್ ಜೊತೆಗೆ ಪಿಪಿಸಿ ಕ್ರಾಸ್ ಸಮೀಪದ ಕೋಸ್ಟಲ್ ಚಿಕನ್ ಅಂಗಡಿಯ ಎದುರು ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದಾಗ,  ಟಾಟಾ ಸಫಾರಿ ಹಾಗೂ ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಅಕ್ಷತ್ ಪ್ರೈ, ಶಶಾಂಕ್ ಸೇರಿದಂತೆ ಇನ್ನೂ 6-7 ಮಂದಿ ಏಕಾಏಕಿ ವಾಹನಗಳಿಂದ ಇಳಿದು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಲಾಗಿದೆ.ಆರೋಪಿಗಳು ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚಯರ್ ಬಳಸಿ ಕೊಲೆ ಮಾಡುವ ಉದ್ದೇಶದಿಂದ  ದಾಳಿ ನಡೆಸಿದ್ದಾರೆ. ಏಟುಗಳಿಂದ ತಪ್ಪಿಸಿಕೊಳ್ಳಲು ಕೈಗಳನ್ನು ಮುಂದಿಟ್ಟ ಶರತ್ ಕುಂದರ್  ಬಲ ಅಂಗೈ, ಮಧ್ಯ ಬೆರಳು ಹಾಗೂ ಎಡ ಕೈ ಮಣಿಕಟ್ಟು ಭಾಗದಲ್ಲಿ ರಕ್ತಗಾಯಗಳಾಗಿವೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆ ಮುಖ್ಯಕಾರ್ಯದರ್ಶಿಯವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ!

Udupi Congress leader attacked- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page