ಹಾಸನ : ತುಳುಟೈಮ್ಸ್ | ರಾಕಿಂಗ್ ಸ್ಟಾರ್ ಯಶ್ ಕುಟುಂಬ ಹಾಸನದಲ್ಲಿ ಜಾಗ ಖರೀದಿ ಮಾಡಿದ ಮೇಲೆ ಆ ಜಾಗಕ್ಕೆ ಸಂಬಂಧಪಟ್ಟಂತೆ ದಾಖಲೆಯ ಗಲಾಟೆಗಳು ನಡೀತಾನೆ ಬಂತು.ಅದ್ರಲ್ಲೂ ಹಾಕಿದ್ದ ಕಂಪೌಂಡನ್ನು ಹೊಡೆದು ಹಾಕಿದ ಮೇಲೆ ದೊಡ್ಡ ಸುದ್ದಿಯೇ ಆಗಿಬಿಟ್ಟಿತ್ತು.ಇದೀಗ ಯಶ್ ತಾಯಿ ಪುಷ್ಪ ಹಾಸನಕ್ಕೆ ತೆರಳಿ ಮತ್ತೆ ಕಂಪೌಂಡ್ ಹಾಕುವುದಕ್ಕೆ ಮುಂದಾಗಿದ್ದಾರೆ.
ಆರುವರ್ಷಗಳ ಹಿಂದೆಯೇ ಜಾಗ ಖರೀದಿ ಆಗಿತ್ತು.ಜಾಗ ಖರೀದಿಯ ನಂತರದಲ್ಲಿ ಜಾಗಕ್ಕೆ ಟ್ಯಾಕ್ಸ್ ಕಟ್ತಾ ಇದ್ದೀವಿ.ಆರು ವರ್ಷ ಇಲ್ಲದೆ ಇರುವ ಸಮಸ್ಯೆ ಈವಾಗ ಯಾಕೆ ಸೃಷ್ಟಿಯಾಯಿತು.ಸೈಟ್ ನನ್ನದು ಎನ್ನುವವರು ಕೋರ್ಟ್ ಆರ್ಡರ್ ತೋರಿಸಬೇಕು.ಯಾರ್ದಾದ್ರೂ ಜಾಗವನ್ನು ಬಿಟ್ಟಿ ಕೊಡ್ತಾರಾ.ಇದನ್ನೆಲ್ಲಾ ಪಿಡಿಓ ನಾಗರಾಜ್ ಕ್ರಿಯೇಟ್ ಮಾಡಿ ಕೊಡೋದು ಈ ಎಲ್ಲಾ ಮಾಹಿತಿಯನ್ನು ಸರ್ಕಾರಕ್ಕೆ ಕೊಡುತ್ತೇವೆ.
ನಿನ್ನೆ ಮೊನ್ನೆಯಿಂದ ಗಲಾಟೆ ಕೆಲ್ಸ ಮಾಡಕೇ ಬಿಡ್ತಿಲ್ಲ.ಮತ್ತೆ ಕಂಪೌಂಡ್ ಹಾಕುತ್ತೇವೆ.ಕಂಪೌಂಡ್ ಹೊಡೆದಿದ್ದಕ್ಕೆ ಡೆಫರ್ಮೇಶನ್ ಕೇಸ್ ಹಾಕಿದ್ದೇವೆ ಇಲ್ಲಿರೋದು ಪೋರ್ಟಿ ಸಿಕ್ಟಿ ಸೈಟ್ 5 ಕುಂಟೆ ಎಲ್ಲಿದೆ ಹುಡ್ಕೊಳಕೆ ಹೇಳಿ ಎಂದು ಯಶ್ ತಾಯಿ ಮಾಧ್ಯಮದವ್ರೊಂದಿಗೆ ಮಾತಾಡುತ್ತಾ ಆಗುತ್ತಿರುವ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ.
ಯಶ್ ತಾಯಿ ಪುಷ್ಪ ತಾವೇ ನಿಂತು ಕಂಪೌಂಡ್ ಹಾಕಿಸ್ತಿದ್ದಾರೆ.ಈ ಗಲಾಟೆ ಮುಂದೆ ಇನ್ನೇನೂ ತಿರುವು ಪಡೆಯುತ್ತೆ ಅನ್ನೋ ಕುತೂಹಲಾನೂ ಇದೆ.
Yash's mother, who has built a compound on her own, is causing a stir in Hassan.tulutimesRead more : ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತಿಗೆ ಬ್ರೇಕ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess











