ನವದೆಹಲಿ : Tulu Times | 2026ರ ಜನವರಿ 26ರಂದು ನಡೆಯಲಿರುವ 77ನೇ ಗಣರಾಜ್ಯೋತ್ಸವ ಪೆರೇಡ್ ಹಲವು ಹೊಸ ಹಾಗೂ ಅಪೂರ್ವ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ. ಆಳವಾದ ದಾಳಿ ಸಾಮರ್ಥ್ಯ ಹೊಂದಿರುವ ‘ಸೂರ್ಯಾಸ್ತ್ರ’ ರಾಕೆಟ್ ಲಾಂಚರ್ ವ್ಯವಸ್ಥೆ, ಹೊಸದಾಗಿ ಸ್ಥಾಪಿಸಲಾದ ಭೈರವ್ ಲಘು ಕಮಾಂಡೋ ಬ್ಯಾಟಾಲಿಯನ್, ಹಾಗೆಯೇ ಜಾನ್ಸ್ಕರ್ ಕುದುರೆಗಳು ಮತ್ತು ಬ್ಯಾಕ್ಟ್ರಿಯನ್ ಒಂಟೆಗಳು ಮೊದಲ ಬಾರಿಗೆ ಪೆರೇಡ್‌ನಲ್ಲಿ ಭಾಗವಹಿಸಲಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪೆರೇಡ್‌ನಲ್ಲಿ ಒಟ್ಟು 18 ಮಾರ್ಚಿಂಗ್ ದಳಗಳು ಮತ್ತು 13 ಬ್ಯಾಂಡ್ ತಂಡಗಳು ಭಾಗವಹಿಸಲಿದ್ದು, ಸುಮಾರು 90 ನಿಮಿಷಗಳ ಕಾಲ ಕಾರ್ಯಕ್ರಮ ನಡೆಯಲಿದೆ.
ಈ ಬಾರಿ ಮೊದಲ ಬಾರಿಗೆ: ಭಾರೀ ತಾಪಮಾನ ನಿರೋಧಕ ಉಡುಪು ಧರಿಸಿದ ಮಿಶ್ರ ಸ್ಕೌಟ್ಸ್ ಕಂಟಿಂಜೆಂಟ್, ತೋಪುಪಡೆ ವಿಭಾಗದಲ್ಲಿ ಹೊಸದಾಗಿ ಸ್ಥಾಪಿತವಾದ ಶಕ್ತಿಬಾನ್ ರೆಜಿಮೆಂಟ್ ಪೆರೇಡ್‌ನಲ್ಲಿ ಕಾಣಿಸಿಕೊಳ್ಳಲಿವೆ. ಶಕ್ತಿಬಾನ್ ರೆಜಿಮೆಂಟ್ ಡ್ರೋನ್, ಕೌಂಟರ್–ಡ್ರೋನ್ ಸಜ್ಜುಗೊಂಡಿದೆ.
ಮೊದಲು ಗುಪ್ತಚರ/ಪರಿಶೀಲನಾ ಘಟಕಗಳು, ನಂತರ ಲಾಜಿಸ್ಟಿಕ್ಸ್ ಹಾಗೂ ಇತರ ಯುದ್ಧ ಘಟಕಗಳು ಯುದ್ಧೋಪಕರಣ ಧರಿಸಿ ಸಾಗಲಿದ್ದು, ವೀಕ್ಷಕರಿಗೆ ಪೆರೇಡ್ ಇನ್ನಷ್ಟು ರೋಚಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಯುಪಡೆ ಪ್ರದರ್ಶನವೂ ಇದೇ ಮಾದರಿಯ ಬ್ಯಾಟಲ್ ಅರೆ ಫಾರ್ಮೇಶನ್ ನಲ್ಲಿ ನಡೆಯಲಿದೆ.
ಪ್ರಾಣಿ ದಳವೂ ಭಾಗವಹಿಸಲಿದೆ ;
ಈ ಬಾರಿ ಪೆರೇಡ್‌ನಲ್ಲಿ ವಿಶೇಷ ಪ್ರಾಣಿ ದಳವೂ ಭಾಗವಹಿಸಲಿದೆ. ಇದರಲ್ಲಿ: ಜಾನ್ಸ್ಕರ್ ಕುದುರೆಗಳು, ಬ್ಯಾಕ್ಟ್ರಿಯನ್ ಒಂಟೆಗಳು, ರಾಪ್ಟರ್ ಪಕ್ಷಿಗಳು (ಹದ್ದು/ಗಿಡುಗು) ಸೇನಾ ಶ್ವಾನಗಳು ಇರಲಿವೆ.
ಬ್ರಹ್ಮೋಸ್, ಆಕಾಶ್, ರಫೇಲ್ ಸೇರಿ ಅನೇಕ ಆಯುಧಗಳ ಪ್ರದರ್ಶನ, ಮೇಜರ್ ಜನರಲ್ ಧಿಲ್ಲನ್ ಅವರ ಪ್ರಕಾರ, 300 ಕಿ.ಮೀ.ವರೆಗೆ ದಾಳಿ ನಡೆಸಬಲ್ಲ ಯುನಿವರ್ಸಲ್ ರಾಕೆಟ್ ಲಾಂಚರ್ ಸಿಸ್ಟಮ್ (URLS) ‘ಸೂರ್ಯಾಸ್ತ್ರ’ ಈ ಬಾರಿ ಮೊದಲ ಬಾರಿಗೆ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪ್ರದರ್ಶಿಸಲ್ಪಡಲಿದೆ ಎಂದು ವರದಿಯಾಗಿದೆ.
Which animal groups will perform in the Republic Day Parade 2026? – ತುಳುಟೈಮ್ಸ್
ಇದನ್ನೂ ಓದಿ – ನಂದಿನಿ ಹಾಲು, ಮೊಸರು ಈಗ ರೂ. 10ಕ್ಕೆ ಲಭ್ಯ ; ಹೊಸ ಉತ್ಪನ್ನಗಳ ಬಿಡುಗಡೆ











