ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕ

ಸುಬ್ರಹ್ಮಣ್ಯ ದೇವಾಲಯಕ್ಕೆ ದಾಖಲೆಯ ಆದಾಯ..ಎಷ್ಟು ಗೊತ್ತಾ..?

ಸುಬ್ರಹ್ಮಣ್ಯ:Tulu Times | ಕುಕ್ಕೆ ಶ್ರೀ ಸುಬ್ರಹ್ಮಣ್ಯ  ದೇವಾಲಯಕ್ಕೆ 2 ತಿಂಗಳಲ್ಲಿ ದಾಖಲೆಯ ಆದಾಯವಾಗಿದೆ. 2025ರ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ  ದಾಖಲೆ ಸೃಷ್ಟಿಯಾಗಿದೆ ಎನ್ನಲಾಗಿದೆ.

ದೇವಾಲಯಕ್ಕೆ ಹಣ ಎಲ್ಲಿಂದ ಬರುತ್ತದೆ..?

ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯವನ್ನು ಲೆಕ್ಕಹಾಕಲಾಗಿದೆ. ಇದರ ಪ್ರಕಾರ, ಒಟ್ಟು 14 ಕೋಟಿ 77 ಲಕ್ಷದ 80 ಸಾವಿರ ರೂ ಆದಾಯ ಸಂಗ್ರಹಿಸಲಾಗಿದೆ.  ನಾಗರಪಂಚಮಿ, ಕಾರ್ತಿಕ ಮಾಸ, ಡಿಸೆಂಬರ್‌ ತಿಂಗಳ ರಜಾಕಾಲ ಹಾಗೂ ವಿಶೇಷ ಪೂಜಾ ದಿನಗಳಲ್ಲಿ ಭಕ್ತರು ಗಣನೀಯವಾಗಿ ಹೆಚ್ಚಿರುವುದು ಆದಾಯ ವೃದ್ಧಿಗೆ ಕಾರಣವಾಗಿದೆ. ಈ ದೇವಾಲಯಕ್ಕೆ ದೇಶ, ವಿದೇಶಗಳಿಂದ ಭಕ್ತರು ಪ್ರತೀ ನಿತ್ಯ ಬರುತ್ತಾರೆ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಪ್ರತೀದಿನ ಹೆಚ್ಚುತ್ತಲೇ ಇದೆ. ಹೀಗಾಗಿ, ಸಂಗ್ರಹವಾಗುತ್ತಿರುವ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು, ಅನ್ನದಾನ ಸೇವೆ, ಮೂಲಸೌಕರ್ಯ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಗೆಳತಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

ಸಿನಿಮಾ: ನಟ ಉಗ್ರಂ ಮಂಜು ಅವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ತಮ್ಮ ಗೆಳತಿ ಸಂಧ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿವಾಹಕ್ಕೆ ಬಿಗ್‌ಬಾಸ್‌ನ ಕೆಲವು ಸ್ಪರ್ಧಿಗಳು ಸೇರಿದಂತೆ ವಿವಿಧ ಸೆಲೆಬ್ರಿಟಿಗಳು ಹಾಗೂ ಕುಟುಂಬಸ್ಥರು ಬಂದು ಆಶೀರ್ವದಿಸಿದ್ದಾರೆ. ಮಂಜುನಾಥ್ ಗೌಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಉಗ್ರಂ ಮಂಜು ಎಂದೇ ಖ್ಯಾತಿ ಪಡೆದಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಇವರು, ಸ್ಟ್ರಾಂಗ್ ಸ್ಪರ್ಧಿ ಎನ್ನಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಉಗ್ರಂ ಮಂಜು ಅವರ ಮದುವೆ ವಿಚಾರ ಸಾಕಷ್ಟು ಸೌಂಡ್ ಮಾಡಿತ್ತು. ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯೊಳಗೆ ಮಂಜು ಅವರ ಗೆಳೆಯರು ಆಗಮಿಸಿ, ಅಲ್ಲಿಯೇ ಗ್ರಾಂಡ್ ಆಗಿ ಬ್ಯಾಚುಲರ್ ಪಾರ್ಟಿ ಕೂಡ ಆಯೋಜಿಸಿ ಸುದ್ದಿಯಾಗಿದ್ದರು.

ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ (2014) ಚಿತ್ರದಲ್ಲಿನ ಇವರ ಅಭಿನಯದಿಂದ ಇವರು ಜನಪ್ರಿಯರಾದರು. ಈ ಚಿತ್ರದ ನಂತರ ಇವರು ‘ಉಗ್ರಂ ಮಂಜು’ ಎಂದೇ ಖ್ಯಾತರಾದರು. ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ (2014) ಚಿತ್ರದಲ್ಲಿನ ಇವರ ಅಭಿನಯದಿಂದ ಇವರು ಜನಪ್ರಿಯರಾದರು. ಈ ಚಿತ್ರದ ನಂತರ ಇವರು ‘ಉಗ್ರಂ ಮಂಜು’ ಎಂದೇ ಖ್ಯಾತರಾದರು.

ಇನ್ನು ಬಂಧು-ಬಳಗ, ಆಪ್ತರು ಹಾಗೂ ಕೆಲವು ಗೆಳೆಯರ ಸಮ್ಮುಖದಲ್ಲಿ ಅರಿಶಿಣ ಸಂಪ್ರದಾಯ ನಡೆಯಿತು. ಮದುವೆಯ ಶುಭಾರಂಭಕ್ಕೆ ಸಂಕೇತವಾದ ಅರಿಶಿಣ ಶಾಸ್ತ್ರದಲ್ಲಿ ಮಂಜು ಅವರು ಸಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜು ಅವರು ಸಾಯಿ ಸಂಧ್ಯಾ ಎಂಬುವವರೊಂದಿಗೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಧ್ಯಾ ಅವರು ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದು ಕಳೆದ ಕೆಲವು ತಿಂಗಳ ಹಿಂದೆ ನಡೆದ ಅವರ ನಿಶ್ಚಿತಾರ್ಥವು ಅದ್ದೂರಿಯಾಗಿ ನೆರವೇರಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 11ನಲ್ಲಿ ಬಲಿಷ್ಠ ಸ್ಪರ್ಧಿಯಾಗಿ ಹೊರಹೊಮ್ಮಿದ ನಂತರ, ಉಗ್ರಂ ಮಂಜು ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಸಾಧಿಸಿದ್ದಾರೆ.

Subrahmanya Temple receives record income..do you know how much..?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 124

You cannot copy content of this page