ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಬೆಳ್ತಂಗಡಿ: ಕವಚಿಬಿದ್ದ ಸ್ಥಿತಿಯಲ್ಲಿ ವ್ಯಕ್ತಿ ನಿಗೂಢ ಸಾವು

ಬೆಳ್ತಂಗಡಿ: Tulu Times | ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯ  ಯರ್ಡೂರು ಎಂಬಲ್ಲಿ ಯುವಕನೋರ್ವ ಮನೆಯೊಳಗಡೆ ಕವಚಿ ಬಿದ್ದ ಸ್ಥಿತಿಯಲ್ಲಿ  ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಯಾರ್ಡೂರು ನಿವಾಸಿ ದಿ. ಶ್ರೀಧರ ಭಟ್ ಮತ್ತು ಶ್ರೀ ಮತಿ ಗೀತಾ ದಂಪತಿ ಪುತ್ರ ಮುರಳೀಧರ ಭಟ್ (35) ಎಂಬವರು ಜ.15 ರಂದು ಬೆಳಗ್ಗೆ ಮನೆಯೊಳಗೆ ಕವಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನು ಅವರ ತಲೆಯಿಂದ ರಕ್ತ ಹರಿದು ನೆಲದಲ್ಲಿ ಹರಿದಿದೆ.  ಇದರಿಂದ ಇದು ಕೊಲೆಯೋ ಅಥವಾ ಕುಸಿದು ಬಿದ್ದು ಸಾವನ್ನಪ್ಪಿದ್ದಾರೋ ಎಂಬುವುದು ಇನ್ನೂ ತಿಳಿದುಬಂದಿಲ್ಲ.

ಮುರಳೀಧರ ಭಟ್  ತಾಯಿ ಗೀತಾ ಭಟ್ ಅವರು ಕಾಲಿನ ಆಪರೇಷನ್ ಆಗಿ ತಮ್ಮ ಮಗಳ ಮನೆಗೆವಿಶ್ರಾಂತಿ ಪಡೆಯಲು ತೆರಳಿದ್ದರು ಎನ್ನಲಾಗಿದೆ. ಹೀಗಾಗಿ ಮನೆಯಲ್ಲಿ  ಮುರಳೀಧರ ಭಟ್ ಒಬ್ಬರೇ ಇದ್ದರು. ಇನ್ನು  ಮನೆಯ ಒಳಗಿನಿಂದ ಲಾಕ್ ಮಾಡಲಾಗಿದ್ದು, ಮನೆಯೊಳಗೆ  ಫ್ಯಾನ್ ತಿರುಗುತ್ತಿತ್ತು. ಮುರಳೀಧರ ಭಟ್ ಒಬ್ಬರೇ ರಾತ್ರಿ ಮನೆಯಲ್ಲಿ ಇದ್ದುದರಿಂದ ಘಟನೆ ಏನಾಗಿದೆ ಎಂಬುವುದು ನಿಗೂಢವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ
ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ: ಬಾಲಕನ ನಿಗೂಢ ಸಾವು: ಕೆರೆಯಲ್ಲಿ ಟಾರ್ಚ್ ಲೈಟ್ ಪತ್ತೆ!

ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಹ್ಮಣ್ಯನಾಯಕ್ ಪುತ್ರ ಬಾಲಕ ಸುಮಂತ್(15) ಎಂಬಾತ ಕೆರೆಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದೀಗ ಕೆರೆಯ ನೀರಿನಲ್ಲಿ ಬಾಲಕನ ಟಾರ್ಚ್ ಲೈಟ್ ಪತ್ತೆಯಾಗಿದೆ.

ಕೈಯಲ್ಲಿದ್ದ ಟಾರ್ಚ್‌ ಹಾಗೂ ಹಳೆಯ ಕತ್ತಿ ಪತ್ತೆ !

ಧನುಪೂಜೆಗೆ ಮನೆಯಿಂದ ಬೆಳಗ್ಗೆ 5 ಗಂಟೆಗೆ ಹೋದ ಸುಮಂತ್ ಎಂಬ ಬಾಲಕ ದೇವಸ್ಥಾನಕ್ಕೂ ತಲುಪದೆ ಮನೆಗೂ ವಾಪಾಸು ಹೋಗದೆ ನಾಪತ್ತೆಯಾಗಿ ಆತನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ, ಪೊಲೀಸರು ಕೆರೆಯ ನೀರನ್ನು ಪಂಪ್ ಮೂಲಕ ಖಾಲಿ ಮಾಡಿದ್ದಾರೆ. ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ ಮತ್ತು ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ ನೇತೃತ್ವದಲ್ಲಿ ತನಿಖೆ ನಡೆಸಿದ ವೇಳೆ ಬಾಲಕ ಸುಮಂತ್ ಕೈಯಲ್ಲಿದ್ದ ನೀಲಿ ಬಣ್ಣದ ಟಾರ್ಚ್ ಲೈಟ್ ಪತ್ತೆಯಾಗಿದೆ. ಜೊತೆಗೆ ಕೆರೆಯಲ್ಲಿ ಹಳೆಯ ತುಕ್ಕು ಹಿಡಿದ ಕತ್ತಿಯೊಂದು ಪತ್ತೆಯಾಗಿದೆ. ಈ ಕುರಿತು ಸೋಕೋ ತಂಡ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಪೋಲಿಸರು ತನಿಖೆಯನ್ನು ಬಿರುಸುಗೊಳಿಸಿದ್ದಾರೆ.

Belthangady: Man found dead in mysterious condition- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 158

You cannot copy content of this page