ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಐಷಾರಾಮಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ

ಬೆಂಗಳೂರು : Tulu Times | ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳ ಹವಾ ಹೆಚ್ಚಾಗ್ತಿವೆ.‌ ನೀವು ಮೊಬೈಲಿನಲ್ಲಿ ಅಥವಾ ಮನೆಯಲ್ಲಿ ಕುಳಿತು ಟಿ.ವಿ ನೋಡೋದಕ್ಕಿಂತ ಸಿನೆಮಾ ಥಿಯೇಟರ್ ನಲ್ಲಿ ಹೋಗಿ ಮೂವಿ ನೋಡೋ ಖುಷಿಯೇ ಬೇರೆ. ಹಾಗಾಗಿ, ಸಾವಿರಾರು ಮಂದಿ ತಾವು ನೋಡಲು ಇಚ್ಛಿಸುವ ಚಿತ್ರವನ್ನು ರಿಲೀಸ್ ಮುಂಚಿತವಾಗಿ ಟಿಕೇಟ್ ಕಾಯ್ದಿರಿಸಲು ಸ್ಪರ್ಧೆಯಲ್ಲಿ ನಿಂತಿರ್ತಾರೆ. ಹೀಗಿರುವಾಗ ಬೆಂಗಳೂರಿನಲ್ಲಿ ಐಷಾರಾಮಿ ಚಿತ್ರಮಂದಿರವು ಉದ್ಘಾಟನೆಗೊಳ್ಳಲಿದೆ.

ಹೌದು…! ಬೆಂಗಳೂರು ನಗರದಲ್ಲಿ ಶುಕ್ರವಾರ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಐಷಾರಾಮಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಉದ್ಘಾಟನೆಯಾಗಲಿದೆ. ನಗರದ ಖ್ಯಾತ ‘ಕಪಾಲಿ’ ಚಿತ್ರಮಂದಿರವಿದ್ದ ಜಾಗದಲ್ಲಿಯೇ ಈ ಹೊಸ ಮಲ್ಟಿಪ್ಲೆಕ್ಸ್ ನಿರ್ಮಾಣಗೊಂಡಿದೆ. ಇದು ದಕ್ಷಿಣ ಭಾರತದ ಮೊದಲ Dolby Atmos ಸೌಂಡ್, ವಿಷನ್ ಅನುಭವ ನೀಡುವ ಚಿತ್ರಮಂದಿರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹೊಸ ಮಲ್ಟಿಪ್ಲೆಕ್ಸ್ ವಿನ್ಯಾಸ ಜನರ ಗಮನ ಸೆಳೆಯುತ್ತಿದೆ.

ಮಹೇಶ್ ಬಾಬು ಕಪಾಲಿ ಚಿತ್ರಮಂದಿರ ಇದ್ದ ಜಾಗದಲ್ಲಿ ಹೊಸ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ. ಆದರೆ ಅವರು ಕಪಾಲಿ ಎಂಬ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ನೂತನ ಚಿತ್ರಮಂದಿರಕ್ಕೆ ‘AMB ಸಿನಿಮಾಸ್ ಕಪಾಲಿ’ ಎಂದು ನಾಮಕರಣ ಮಾಡಲಾಗಿದೆ. ಆಂಧ್ರಪ್ರದೇಶದ ಸಿನಿಮಾ ವಿತರಣಾ ಸಂಸ್ಥೆಗಳ ಪೈಕಿ ಒಂದಾಗಿರುವ ಏಷ್ಯನ್ ಸಿನಿಮಾಸ್ ಜೊತೆಗೂಡಿ ನಟ ಮಹೇಶ್ ಬಾಬು ಬೆಂಗಳೂರಲ್ಲಿಯೂ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ.

ಹೊಸ ಮಲ್ಟಿಪ್ಲೆಕ್ಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಾಕಿದ್ದು, “ಜನವರಿ 16 ರಂದು ಬೆಂಗಳೂರಿನ AMB ಸಿನಿಮಾಸ್‌ನಲ್ಲಿ ದಕ್ಷಿಣ ಭಾರತದ ಮೊದಲ ಡಾಲ್ಟಿ ಥಿಯೇಟರ್ ಔಪಚಾರಿಕವಾಗಿ ಬಾಗಿಲು ತೆರೆಯುತ್ತದೆ. ಇದನ್ನು ಸಾಧಿಸಲು ಪ್ರಯತ್ನ ಮಾಡಿದ TEAM AMB ಬಗ್ಗೆ ತುಂಬಾ ಹೆಮ್ಮೆ ಇದೆ. ಶೀಘ್ರದಲ್ಲೇ ನಮ್ಮ ಬೆಂಗಳೂರಿನಲ್ಲಿ ನಿಮ್ಮೆಲ್ಲರನ್ನೂ ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

‘AMB ಸಿನಿಮಾಸ್ ಕಪಾಲಿ’ಯಲ್ಲಿ 60 ಅಡಿ ಅಗಲದ 9 ಸ್ಟ್ರೀನ್ ಗಳು ಇವೆ. ಪ್ರತಿ ಸ್ಟ್ರೀನ್ 600 ಪ್ರೇಕ್ಷಕರ ಡ್ಯಾಂ ಸಾಮರ್ಥ್ಯವನ್ನು ಹೊಂದಿದೆ. ಸ್ಟೀನ್‌ಗಳು ಅತ್ಯುತ್ತಮ ಗುಣಮಟ್ಟದ ವಿಡಿಯೋ, ಆಡಿಯೋ ಗುಣಮಟ್ಟವನ್ನು ಹೊಂದಿರಲಿವೆ ಎನ್ನಲಾಗಿದೆ.

A luxury multiplex cinema built at a cost of millions – ತುಳು ಟೈಮ್ಸ್

ಇದನ್ನೂ ಓದಿ :ಗರ್ಭಿಣಿ ಸ್ತ್ರೀಯರಲ್ಲಿ ಮೂತ್ರ ಸೋಂಕಿನ ಅಪಾಯ ಏಕೆ ಹೆಚ್ಚುತ್ತದೆ?

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=fguigrJHVFpltfcq

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page