ಬ್ರೇಕಿಂಗ್ ನ್ಯೂಸ್
ಬಾಯಿಚಪಲ

Deepavali bonus:ಚಾಕಲೇಟ್ ಕಂಪನಿ ಕಾರ್ಮಿಕರ ಬೋನಸ್ ಗುಳುಂ ಅಂತೆ ಹೌದಾ?

Deepavali bonus:ಹಬ್ಬ ಹರಿದಿನಗಳು ಬಂತಂದ್ರೆ ಸಾಕು ಕಾರ್ಮಿಕರಿಗೆ ತುಂಬಾನೆ ಖುಷಿ ಇರುತ್ತದೆ.ತಮ್ಮ ಕಂಪನಿಯಿಂದ ಒಂಚೂರು ಬೋನಸ್ ರೂಪದಲ್ಲಿ ಹಣ ಬಂದ್ರೆ,ಹೆಂಡ್ತಿ ಮಕ್ಳಿಗೆ ಏನಾದ್ರೂ ಕೊಂಡೋಗ್ಬೋದು ಹಬ್ಬದಲ್ಲಿ ಸಣ್ಣ ಖುಷಿ ಕಾಣ್ಬೋದು ಅನ್ನೋ ಲೆಕ್ಕಾಚಾರದಲ್ಲಿರ್ತಾರೆ.

ಅದ್ರಲ್ಲೂ ವಿಶೇಷವಾಗಿ ದೀಪಾವಳಿ ದೊಡ್ಡ ಹಬ್ಬ ಆಗಿರೋದ್ರಿಂದ ಕಂಪನಿಗಳು ಕೂಡ ಹಬ್ಬದ ಸ್ಪೆಶಲ್ ಆಗಿ ಸ್ಟೀಟ್ ಬಾಕ್ಸ್ ಕೊಟ್ಟು ಒಂದಷ್ಟೂ ಬೋನಸ್ ಕೊಡೋದು ಕಾಮನ್ ಆಗಿಬಿಟ್ಟಿದೆ.

ಆದ್ರೆ ಈ ಬಾರಿಯ ದೀಪಾವಳಿಯ ಸಂದರ್ಭದಲ್ಲಿ ಕಾರ್ಮಿಕರ ವಲಯದಲ್ಲಿ ಗುಸುಗುಸು ಸುದ್ದಿಯೊಂದು ಬಾರಿ ಓಡಾಡ್ತಿದೆ.

ಪ್ರತಿಷ್ಠಿತ ಚಾಕಲೇಟ್ ಕಂಪನಿ ತಮ್ಮಲ್ಲಿ ಕೆಲಸ ಮಾಡ್ತಿರೋರಿಗಾಗಿ ದೀಪಾವಳಿ ಬೋನಸ್ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು ಅದು ಯಾವುದೇ ಕಾರ್ಮಿಕರಿಗೆ ಕ್ರೆಡಿಟ್ ಆಗಿಲ್ಲ ಎಂಬ ಗುಸು ಗುಸು ಪಿಸು ಪಿಸು ಮಾತುಗಳು ಕೇಳೋದಿಕ್ಕೆ ಶುರುವಾಗಿದೆ.

ಚಾಕಲೇಟ್ ಕಂಪನಿ ಕಾಂಟ್ರ್ಯಾಕ್ಟ್ ರೂಪದಲ್ಲಿ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳುತ್ತದಂತೆ.ಲೇಬರ್ ಕಾಂಟ್ರ್ಯಾಕ್ಟ್ ವಹಿಸಿಕೊಂಡಿರುವವರಿಗೆ ಕಾರ್ಮಿಕರಿಗೆ ನೀಡಲು ಬೋನಸ್ ಹಣ ಬಂದಿದೆ ಅನ್ನೋ ಸುದ್ದಿಯಿದೆ.ಆದ್ರೆ ಕಾಂಟ್ರ್ಯಾಕ್ಟ್ ದಾರರು ಹಣವನ್ನು ಕಾರ್ಮಿಕರಿಗೆ ನೀಡದೆ ತಮ್ಮ ಚೀಲದಲ್ಲೇ ಇರಿಸಿಕೊಂಡಿದ್ದಾರೆ ಅನ್ನೋ ಅಂತೆ ಕಂತೆ ಸುದ್ದಿ ಎಲ್ಲೆಡೆ ಹರದಾಡ್ತಿದೆ.

ಸಾವಿರಾರು ಜನ ಕಾರ್ಮಿಕರಿಗೆ ಬಂದಿರುವ ಲಕ್ಷಾಂತರ ರೂಪಾಯಿ ಹಣ ಇನ್ನೂ ತಲುಪದೆ ಇರೋದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ್ಯಂತೆ.
ದೀಪಾವಳಿಗೆ ಶಿವಧ್ಯಾನ ಮಾಡಿ ಎಣ್ಣೆಸ್ನಾನ ಮಿಂದು, ದೀಪಹಚ್ಚಿ ರಂಜನೆ ಅನುಭವಿಸಲು  ಕಾಯುತ್ತಿದ್ದ ಕಾರ್ಮಿಕರು ಇದ್ರಿಂದ ನಿರಾಸೆ ಗೊಂಡು ಕೂತಿದ್ದಾರೆ ಅನ್ನೋ ಮಾಹಿತಿಯಿದೆ.
ಕಂಪನಿ ಕೊಟ್ಟರೂ ಲೇಬರ್ ಕಾಂಟ್ರ್ಯಾಕ್ಟರ್ ಕೊಡುವುದಿಲ್ಲ ಅನ್ನೋ ಮಾತು ಈ ವಿಚಾರದಲ್ಲಿ ನಿಜವಾದಂತೆ ಕಂಡುಬರುತ್ತಿದೆ.

ಕಾಂಟ್ರ್ಯಾಕ್ಟರ್ ಮೋಸ ಮಾಡಿದ್ದಾರಂತೆ ಅನ್ನೋ ಸುದ್ದಿ ಇದೀಗ ಚಾಕಲೇಟ್ ನಂತೆ ಬಾಯಿಂದ ಬಾಯಿಗೆ ಲಾಗ ಹಾಕ್ತಿದೆ.ಆದಷ್ಟೂ ಬೇಗ ಈ ವಿಚಾರ ಕಂಪನಿಯವ್ರ ಬಾಯಿಗೆ ಬಿದ್ರೆ ಒಳ್ಳೇದು. ಅವ್ರಿಗೆ ಗೊತ್ತಾದ್ರೆ ನಮ್ಗೆ ದುಡ್ಡು ಹಾಕಿಸ್ತಾರೆ ಅನ್ನೋ ಭರವಸೆಯಲ್ಲಿದ್ದಾರಂತೆ ಕಾರ್ಮಿಕರು.

ಈ ವಿಷಯ ನಿಜವೇ ಆದ್ರೇ  ಕಂಪನಿಯವ್ರು ಕ್ರಮ ಕೈಗೊಳ್ಳಲಿ ಅನ್ನೋದು ಬಾಯಿಚಪಲಿಗರ ಆಶಯ.

ಇದನ್ನೂ ಓದಿ:ಏಕಕಾಲಕ್ಕೆ ಇಬ್ಬರನ್ನು ನಿಖಾ ಆದ ಯುವಕ.! ವಿಡಿಯೋ ವೈರಲ್
………………………………………………………………………………………………………………………..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page