ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಏಕಕಾಲಕ್ಕೆ ಇಬ್ಬರನ್ನು ನಿಖಾ ಆದ ಯುವಕ.! ವಿಡಿಯೋ ವೈರಲ್

Chithradurga: ಮದುವೆಯಾಗೋದಕ್ಕೆ ಹೆಣ್ಣು ಸಿಕ್ತಿಲ್ಲ ಎಂದು ಬಾಯಿ ಬಡ್ಕೊಳ್ತಿದ್ದಾರೆ. ಇಲ್ಲೊಬ್ಬ ಯುವಕ ಏಕಕಾಲಕ್ಕೆ ಇಬ್ಬರನ್ನು ಮದುವೆಯಾಗಿದ್ದಾನೆ. ಕುಟುಂಬಗಳ ಒಪ್ಪಿಗೆ ಸಿಕ್ಕಿದ ಬಳಿಕ ಮದುವೆಯಾಗಿದ್ದಾನೆ.

ಚಿತ್ರದುರ್ಗ ನಗರದಲ್ಲಿ ನಡೆದ ಅಚ್ಚರಿಯ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗ್ತಿದೆ. ಎಂ.ಕೆ. ಪ್ಯಾಲೇಸ್ ಹಾಲ್‌ನಲ್ಲಿ ನಡೆದ ಈ ಮದುವೆಯಲ್ಲಿ, ವಸೀಂ ಶೈಕ್ ಎಂಬಾತ ಶೈಪಾ ಶೇಕ್ ಹಾಗು ಜನ್ನತ್ ಮುಖಂದರ್ ಎಂಬ ಯುವತಿಯರ ಜೊತೆ ನಿಖಾ ಆಗಿದ್ದಾನೆ.

ಇಬ್ಬರು ಯುವತಿಯರಾದ ಶೈಪಾ ಶೈಕ್ ಮತ್ತು ಜನ್ನಾತ್ ಮಖಂದರ್ ಅವರೊಂದಿಗೆ ವಸೀಂ ಶೈಕ್ ಮದುವೆಯಾಗಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇಬ್ಬರು ಯುವತಿಯರೂ ಈ ಮದುವೆಗೆ ಸಮ್ಮತಿ ನೀಡಿದ್ದು, ಕುಟುಂಬಗಳ ಸಹಯೋಗದೊಂದಿಗೆ ಈ ನಿಖಾ ನಡೆದಿದೆ.

ಒಂದು ಸಂಸಾರವನ್ನೇ ನಿಭಾಯಿಸಲಾಗದ ಈ ಕಾಲದಲ್ಲಿ, ಇಬ್ಬರು ಯುವತಿಯರನ್ನು ಮದುವೆಯಾಗಿರುವ ಈ ಯುವಕನ ಧೈರ್ಯ ಮೆಚ್ಚಲೇಬೇಕು ಅಂತಿದ್ದಾರೆ ಜನ.

ಇದನ್ನೂ ಓದಿ: Shabarimala ಚಿನ್ನ ಕಳ್ಳತನ ಪ್ರಕರಣ: ಬೆಂಗಳೂರು ಮೂಲದ ಉದ್ಯಮಿ ಬಂಧನ


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page