ಬ್ರೇಕಿಂಗ್ ನ್ಯೂಸ್
ದೇಶ

ಸೂರ್ಯಗ್ರಹಣ 2026: ದಿನಾಂಕ, ಸಮಯ, ಮತ್ತು ಸುರಕ್ಷಿತವಾಗಿ ಹೇಗೆ ವೀಕ್ಷಿಸಬೇಕು

ಸೂರ್ಯಗ್ರಹಣ : Tulu Times l 2026ರ ಫೆಬ್ರವರಿಯಲ್ಲಿ ಆಕಾಶ ವೀಕ್ಷಕರಿಗೆ ಅತ್ಯಂತ ಅಪರೂಪದ ಮತ್ತು ಆಕರ್ಷಕ ಖಗೋಳ ಘಟನೆ ಕಾಣಿಸಿಕೊಳ್ಳಲಿದೆ. ಇದನ್ನು “ರಿಂಗ್ ಆಫ್ ಫೈರ್” (ಅಗ್ನಿವಲಯ) ಎಂದು ಕರೆಯಲಾಗುವ ವಲಯಾಕಾರದ ಸೂರ್ಯಗ್ರಹಣ ಎಂದು ಹೇಳುತ್ತಾರೆ.

ಈ ಗ್ರಹಣದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಪರಿಣಾಮವಾಗಿ ಸೂರ್ಯನ ಅಂಚಿನಲ್ಲಿ ಬೆಂಕಿಯ ವಲಯದಂತೆ ಪ್ರಕಾಶಮಾನವಾದ ವೃತ್ತಾಕಾರದ ಬೆಳಕು ಕಾಣಿಸುತ್ತದೆ.

ಈ ವರ್ಷದ ಮೊದಲ ಸೂರ್ಯಗ್ರಹಣ ಮಂಗಳವಾರ, 17 ಫೆಬ್ರವರಿ 2026, ವಲಯಾಕಾರದ ಸೂರ್ಯಗ್ರಹಣ ಸುಮಾರು 2 ನಿಮಿಷ 20 ಸೆಕೆಂಡುಗಳು ಕಾಲ ಸಮಯ 12:11 PM (UT – ಯುನಿವರ್ಸಲ್ ಟೈಮ್), ಸುಮಾರು 5:30 PM (ಭಾರತೀಯ ಕಾಲಮಾನ – IST)ಕ್ಕೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.
ಭಾರತದಲ್ಲಿ ಈ ಗ್ರಹಣ ಕಾಣಿಸುವುದಿಲ್ಲ, ಏಕೆಂದರೆ ಆ ಸಮಯದಲ್ಲಿ ಸೂರ್ಯ ಅಸ್ತಮಿಸಿರುತ್ತದೆ ಎನ್ನಲಾಗಿದೆ.

ಈ ವಲಯಾಕಾರದ ಹಂತ ಮುಖ್ಯವಾಗಿ ಅಂಟಾರ್ಟಿಕಾ ಪ್ರದೇಶಗಳಲ್ಲಿ ಗೋಚರಿಸುತ್ತದೆ ಹಾಗೂ ಈ ಗ್ರಹಣ ಭಾಗಶಃ ಕಾಣುವ ಸ್ಥಳಗಳು ಯಾವುದೆಂದರೆ, ದಕ್ಷಿಣ ಭಾರತೀಯ ಮಹಾಸಾಗರ, ಅಂಟಾರ್ಟಿಕಾದ ಕರಾವಳಿ ಪ್ರದೇಶಗಳು, ದಕ್ಷಿಣ ಅಟ್ಲಾಂಟಿಕ್ ಮಹಾಸಾಗರ, ಆಫ್ರಿಕಾ ಖಂಡದ ಕೆಲವು ನಗರಗಳಲ್ಲಿ ಗೋಚರಿಸುತ್ತದೆ.

ಸೂರ್ಯಗ್ರಹಣವನ್ನು ನೇರವಾಗಿ ಕಣ್ಣಿನಿಂದ ನೋಡುವುದು ಅತ್ಯಂತ ಅಪಾಯಕಾರಿ. ಇದರಿಂದ ಕಣ್ಣುಗಳ ರೆಟಿನಾಗೆ ಶಾಶ್ವತ ಹಾನಿಯಾಗಬಹುದು. ಅದಕ್ಕಾಗಿ ಸುರಕ್ಷಿತ ವಿಧಾನಗಳು: ISO 12312-2 ಪ್ರಮಾಣಿತ ಸೂರ್ಯಗ್ರಹಣ ಕನ್ನಡಕ (Solar Eclipse Glasses), ಸುರಕ್ಷಿತ ಕೈಯಲ್ಲಿ ಹಿಡಿಯುವ Solar Viewer. ಅಲ್ಲದೇ, ಸಾಮಾನ್ಯ ಸನ್‌ಗ್ಲಾಸ್, ಕ್ಯಾಮೆರಾ ಲೆನ್ಸ್, ಬೈನಾಕ್ಯುಲರ್, ಟೆಲಿಸ್ಕೋಪ್ (ಸುರಕ್ಷಿತ ಫಿಲ್ಟರ್ ಇಲ್ಲದೆ) ಇವುಗಳನ್ನು ಬಳಸಿದರೆ ಕಣ್ಣುಗಳಿಗೆ ಗಂಭೀರ ಹಾನಿ ಉಂಟಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ :ಮಂಗಳೂರಿಗೆ ಪ್ರತ್ಯೇಕ‌ ಪ್ರವಾಸೋದ್ಯಮ‌ ನೀತಿ ಅಳವಡಿಕೆಯಾಗುತ್ತದೆ : ಡಿಕೆಶಿ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=-SrdfnEC2DwJOYk7

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page