toxic ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಸ್ ಸಿನಿಮಾದ ಅದ್ದೂರಿಯಾದ ಟೀಸರ್ ರಿಲೀಸಾಗಿದೆ.ಬಹುನಿರೀಕ್ಷಿತ ಸಿನಿಮಾದ ಟೀಸರ್ ಬಗ್ಗೆ ಸಿನಿಮಾಭಿಮಾನಿಗಳಿಗೆ ದೊಡ್ಡ ನಿರೀಕ್ಷೆಯೇ ಇತ್ತು.ಯಶ್ ಬರ್ತ್ ಡೇ ದಿನ ಬಂದಿರುವ ಟೀಸರ್ ಇದೀಗ ದೊಡ್ಡ ಮಟ್ಟದ ಚರ್ಚೆಗೂ ಕಾರಣವಾಗಿದೆ.ಕನ್ನಡಿಗರು ಈ ಸಿನಿಮಾವನ್ನು ಫ್ಯಾಮಿಲಿ ಸಮೇತ ನೋಡುವುದಕ್ಕೆ ಸಾಧ್ಯಾನೇ ಇಲ್ಲ ಎಂಬ ಅಭಿಪ್ರಾಯಕ್ಕೆ ಬರ್ತಿದ್ದಾರೆ.
ಟೀಸರ್ ನಲ್ಲಿ ಏನಿದೆ ಎಂಬ ಕುತೂಹಲದಿಂದ ಇಣುಕಿದವ್ರು ದಂಗಾಗಿ ಹೋಗಿದ್ದಾರೆ.ಹಸಿಬಿಸಿ ದೃಶ್ಯಗಳು ಪ್ರೇಕ್ಷಕರರನ್ನು ಕಸಿವಿಸಿಗೆ ದೂಡಿದೆ.ಕಾರಿನೊಳಗಿನ ಹಾಟ್ ಸೀನ್ ಗಳೂ ಇದು ಹಾಲಿವುಡ್ ಸಿನಿಮಾ ಎಂಬುದನ್ನು ಸಾರಿ ಹೇಳುತ್ತಿದೆ.
ಟಾಕ್ಸಿಕ್ ಕನ್ನಡ ಸಿನಿಮಾ ಅಲ್ಲವೇ ಅಲ್ಲ!
ಟಾಕ್ಸಿಕ್ ಸಿನಿಮಾ ಕನ್ನಡದ ಸಿನಿಮಾ ಅಲ್ಲವೇ ಅಲ್ಲ ಎಂಬುದು ಸಾಬೀತಾಗಿ ಹೋಗಿದೆ.ರಿಲೀಸಾಗಿರೋ ಟೀಸರ್ ನ ಸೀನ್ ಗಳು ಕನ್ನಡದ ನೇಟಿವಿಟಿಯ ಯಾವುದೇ ಅಂಶಗಳನ್ನು ಹೊಂದಿಲ್ಲ.ಯಶ್ ಗೆ ನ್ಯಾಶನಲ್ ಸ್ಟಾರ್ ಪಟ್ಟ ತಂದುಕೊಟ್ಟ ಕೆ.ಜಿ.ಎಫ್ ಸಿನಿಮಾ ಕನ್ನಡದ ನೇಟಿವಿಟಿಯನ್ನು ಸಾರಿ ಹೇಳುತ್ತಿತ್ತು.ತಾಯಿ ಸೆಂಟಿಮೆಂಟ್ ಕೋಲಾರ್ ಗೋಲ್ಡ್ ಸ್ಟೋರಿ ಕತೆಗೆ ತಕ್ಕ ಅಧ್ದೂರಿ ಮೇಕಿಂಗ್ ಇವೆಲ್ಲಾನೂ ಕನ್ನಡದ ಸಿನಿಮಾ ಅನ್ನೋದನ್ನು ಸ್ಪಷ್ಟಪಡಸಿದ್ದವು,
ರಿಶಬ್ ಶೆಟ್ಟಿಗೆ ನ್ಯಾಶನಲ್ ಸ್ಟಾರ್ ಪಟ್ಟ ತಂದುಕೊಟ್ಟ ಕಾಂತಾರ ಸಿನಿಮಾ ಕನ್ನಡದ್ದೇ ಕತೆಯಿದ್ದ ಚಿತ್ರ.ಇವೆಲ್ಲವನ್ನೂ ನಮ್ಮ ಕನ್ನಡದ ಸಿನಿಮಾ ಎಂದು ಖುಷಿಯಿಂದ ಬೀಗಿದ್ದ ಕನ್ನಡಿಗರು ಟಾಕ್ಸಿಕ್ ಸಿನಿಮಾವನ್ನು ಇದು ನಮ್ಮ ನೆಲದ ಸಿನಿಮಾ ಎಂಬುದನ್ನು ಒಪ್ಪುವುದಕ್ಕೆ ಮನಸ್ಸು ಮಾಡುತ್ತಿಲ್ಲ.
ಕನ್ನಡಿಗರು ನಿರ್ಮಿಸಿರುವ ಹಾಲಿವುಡ್ ಸಿನಿಮಾ!
ಟಾಕ್ಸಿಕ್ ಸಿನಿಮಾವನ್ನು ಕನ್ನಡದ ಕೆ.ವಿ.ಎನ್ ಸಂಸ್ಥೆ ನಿರ್ಮಿಸಿದೆ.ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿದ್ದಾರೆ.
ರವಿಬಸ್ರೂರ್ ಸಂಗೀತವಿದೆ.ಟೆಕ್ನಿಶಿಯನ್ಸ್ ಕನ್ನಡವರಿದ್ದಾರೆ.ಇವರೆಲ್ಲರೂ ಇರುವ ಕಾರಣಕ್ಕೆ ಇದು ಕನ್ನಡದ ಸಿನಿಮಾವಾಗುವುದಕ್ಕೆ ಸಾಧ್ಯವಿಲ್ಲ.ಈ ಎಲ್ಲಾ ಕನ್ನಡಿಗರು ಸೇರಿ ಹಾಲಿವುಡ್ ಸಿನಿಮಾವನ್ನು ನಿರ್ಮಿಾಣ ಮಾಡಿದ್ದಾರೆ.ಈ ಮೂಲಕ ಕನ್ನಡಿಗರು ಹಾಲಿವುಡ್ ನಲ್ಲೂ ಸಿನಿಮಾ ಮಾಡ್ಬೋದು ಅನ್ನೋ ಸಂದೇಶವನ್ನು ಕೊಟ್ಟಿದ್ದಾರೆ.ಆದರೆ ಕತೆಯ ಕಾರಣಕ್ಕೋ,ನೇಟಿವಿಟಿ,ಸಹಕಲಾವಿದರ ಕಾರಣಕ್ಕೆ ಇದನ್ನು ಕನ್ನಡದ ಸಿನಿಮಾ ಎಂದು ಹೇಳುವುದಕ್ಕೆ ಸಾಧ್ಯಾನೇ ಇಲ್ಲ.
ಕಸಿವಿಸಿ ಮಾಡುತ್ತಿರುವ ಹಸಿಬಿಸಿ ದೃಶ್ಯ!
ಹಾಲಿವುಡ್ ರೇಂಜ್ ನ ಸಿನಿಮಾಗಳಲ್ಲಿ ಮಾಮೂಲಿಯಾಗಿರುವ ಹಸಿಬಿಸಿ ದೃಶ್ಯಗಳು ಟಾಕ್ಸಿಕ್ ಸಿನಿಮಾದಲ್ಲಿ ನೋಡೋದಿಕ್ಕೆ ಸಿಗ್ತಿದೆ.ಕಾರ್ ನ ಸೀನ್ ನೋಡಿದ ಪಡ್ಡೆಗಳು ಬೀರ್ ಕುಡಿದಷ್ಟೂ ಟೈಟಾಗ್ತಿದ್ದಾರೆ.ಆದ್ರೆ ಇಂತಹ ದೃಶ್ಯಗಳನ್ನು ಕನ್ನಡ ಸಿನಿಮಾ ಪ್ರೇಕ್ಷಕ ಒಪ್ಪಿಕೊಳ್ಳುವುದಕ್ಕೆ ಸಾಧ್ಯಾವೇ ಇಲ್ಲ.ಅದರಲ್ಲೂ ದೃಶ್ಯಗಳನ್ನು ಚಿತ್ರೀಕರಿಸಿರುವ ವಾತಾವರಣ,ವಾಹನ ಇವೆಲ್ಲವೂ ಕನ್ನಡದ ಸಿನಿಮಾ ಎಂಬುವಂತೆ ಇಲ್ಲವೇ ಇಲ್ಲ.
ಅದೇನೇ ಇದ್ರೂ ಕನ್ನಡದವ್ರೆಲ್ಲಾ ಸೇರಿಕೊಂಡು ಹಾಲಿವುಡ್ ಸಿನಿಮಾ ಮಾಡ್ತಿರೋದಿಕ್ಕೆ ಪ್ರತಿಯೊಬ್ರು ಖುಷಿ ಪಡ್ಲೆಬೇಕು.ಟೀಸರ್ ನೋಡಿ ಮಡಿವಂತಿಕೆ ಬಗ್ಗೆ ಮಾತಾಡ್ತಿರೋರು ಮತ್ತೆ ಮತ್ತೆ ಕದ್ದು ಕದ್ದು ವೀಡಿಯೋ ನೋಡ್ತಿರೋದ್ರಿಂದ ಟಾಕ್ಸಿಕ್ ಕೋಟ್ಯಾಂತರ ವೀವ್ಸ್ ಪಡೀತಿದೆ.
Isn't Yash Toxic a Kannada movie? tulutimes ಇದನ್ನೂ ಓದಿ:ಟಾಕ್ಸಿಕ್ ಟೀಸರ್ ಅಬ್ಬರ 100 ಮಿಲಿಯನ್ ದಾಟಿದ ವೀವ್ಸ್..! ಅಬ್ಬಬ್ಬಾ ಏನ್ ಟೀಸರ್ ಅಂತೀರಾ!?
……………………………………………………………………………………………………………………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











