ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಟಾಕ್ಸಿಕ್ ಟೀಸರ್ ಅಬ್ಬರ 100 ಮಿಲಿಯನ್ ದಾಟಿದ ವೀವ್ಸ್..!‌ ಅಬ್ಬಬ್ಬಾ ಏನ್‌ ಟೀಸರ್‌ ಅಂತೀರಾ!?

ಸಿನಿಮಾ: Tulu Times | ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಟೀಸರ್‌  ನೋಡಿದ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಈ ತರಾನೂ ಒಂದು ಟೀಸರ್‌ ಇರುತ್ತಾ ಅಂತ ನಿಜಕ್ಕೂ ಜನ ಗಾಬರಿಯಾಗಿದ್ದಾರೆ. ಹೌದು, ಟಾಕ್ಸಿಕ್‌ ಟೀಸರ್‌ ಹಾಗಿದೆ!

ಇದೀಗ, ಟಾಕ್ಸಿಕ್’ ಟೀಸರ್ 24 ಗಂಟೆಯಲ್ಲಿ ‘ಟಾಕ್ಸಿಕ್’ ಟೀಸರ್ ಬರೋಬ್ಬರಿ 200 ಮಿಲಿಯನ್ ಅಂದರೆ 20 ಕೋಟಿ ಡಿಜಿಟಿಲ್ ವೀವ್ನ್ ಪಡೆದುಕೊಂಡಿದೆ ಎನ್ನಲಾಗಿದೆ.ಕಾಂತಾರ: ಚಾಪ್ಟರ್ 1 ಮೊದಲಾದ ಸಿನಿಮಾಗಳು ಬರೆದಿದ್ದ ದಾಖಲೆಗಳೆಲ್ಲ ಟಾಕ್ಸಿಕ್  ಉಡೀಸ್ ‌ ಮಾಡಿದೆ.

‘ಟಾಕ್ಸಿಕ್’ ಟೀಸರ್ ವೀಕ್ಷಣೆ 200 ಮಿಲಿಯನ್ ಎಂದು ಕೆವಿಎನ್ ಪ್ರೊಡಕ್ಷನ್ಸ್ ಘೋಷಣೆ ಮಾಡಿದೆ. 55 ಲಕ್ಷಕ್ಕೂ ಅಧಿಕ ಲೈಕ್ಕಳು ಸಿಕ್ಕಿವೆ.  ಇನ್ನು  ಟಾಕ್ಸಿಕ್ ಮಾರ್ಚ್ 19ರಂದು  ‘ಧುರಂಧರ್ 2’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಇನ್ನು ‘ಟಾಕ್ಸಿಕ್ ಚಿತ್ರದ ಅಬ್ಬರ ನೋಡಿ ಬಾಲಿವುಡ್ ಮಂದಿ ದಂಗಾಗಿದ್ದಾರೆ.  ‘ಕೆಜಿಎಫ್ 2 ಸಿನಿಮಾ 24 ಗಂಟೆಯಲ್ಲಿ 109 ಮಿಲಿಯನ್ ಡಿಜಿಟಿಲ್ ವ್ಯೂವ್ ‘ಕಾಂತಾರ ಚಾಪ್ಟರ್ 1107 ಮಿಲಿಯನ್, ‘ಅನಿಮಲ್ 71 ಮಿಲಿಯನ್ ಹಾಗೂ ‘ಪುಷ್ಪ 2107 ಮಿಲಿಯನ್ ವೀಕ್ಷಣೆ ಕಂಡಿತ್ತು. ಇದೀಗ ಟಾಕ್ಸಿಕ್‌ ಇವೆಲ್ಲ ದಾಖಲೆಗಳನ್ನು ಉಡೀಸ್‌ ಮಾಡುವತ್ತ ಕಾಲಿಟ್ಟಿದೆ.
ಇನ್ನು   ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್ಮಾಸ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತೆಲುಗು, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

ಸೋಷಿಯಲ್‌ ಮೀಡಿಯಾ ಫುಲ್‌ ಟ್ರೋಲ್‌!

ಸೋಷಿಯಲ್ ಮೀಡಿಯಾ ಫೇಸ್ಬುಕ್, ಎಕ್ಸ್, ಇನ್ ಸ್ಟಾ, ಯುಟ್ಯೂಬ್, ಹೀಗೆ ಎಲ್ಲಾ ಸೋಷಿಯಲ್ ಪ್ಲಾಟ್ ಫಾರಮ್ ಗಳಲ್ಲೂ ಟಾಕ್ಸಿಕ್ ನದ್ದೇ ಟಾಕು..ಮೀಮ್ಸ್, ಟ್ರೋಲ್ ಪೇಜಸ್ ಅಂತು ಟಾಕ್ಸಿಕ್ ಟೀಸರ್ ನ ಬಳಸಿಕೊಂಡು ಸಿಕ್ಕಾಪಟ್ಟೆ ಕಂಟೆಂಟ್ ಕ್ರಿಯೇಟ್ ಮಾಡ್ತಿವೆ.  ಕಾರ್ ಎಪಿಸೋಡ್ ಅಂತೂ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್‌’ ಸಿನಿಮಾದ ಟೀಸರ್ ಜನವರಿ 8, 2026 ರಂದು ಯಶ್ ಅವರ 40ನೇ ಜನ್ಮದಿನದ ಅಂಗವಾಗಿ ಬಿಡುಗಡೆಯಾಗಿದೆ. ಈ ಟೀಸರ್ ಅನ್ನು ‘Introducing Raya’ ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಯಶ್ ‘ರಾಯ’ ಎಂಬ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಟೀಸರ್‌ನ ಕೊನೆಯಲ್ಲಿ ಯಶ್ ಹೇಳುವ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ಗಡ್ಡದ ಲುಕ್, ಕೈಯಲ್ಲಿ ಗನ್ ಮತ್ತು ಸಿಗಾರ್ ಹಿಡಿದು ಯಶ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

Toxic teaser crosses 100 million views! What a teaser!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page