ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನ್ಯಾಯ ಸೇತು ಚಾಟ್ ಬೋಟ್ ಎಂದರೇನು ? ಇದರ ಮುಖ್ಯ ಉದ್ದೇಶದ ಬಗ್ಗೆ ತಿಳಿಯಿರಿ

ಎಐ : Tulu Times | ನ್ಯಾಯ ಸೇತು ಚಾಟ್‌ಬೋಟ್ ಎಂಬುವುದು ನ್ಯಾಯ ಮತ್ತು ತಂತ್ರಜ್ಞಾನ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ. ಇದು ಕಾನೂನು ಜ್ಞಾನವನ್ನು ಜನಸಾಮಾನ್ಯರ ಬಳಿಗೆ ತಲುಪಿಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಡಿಜಿಟಲ್ ಯುಗದಲ್ಲಿ ನ್ಯಾಯವನ್ನು ಸುಲಭ, ವೇಗ ಮತ್ತು ಪಾರದರ್ಶಕವಾಗಿಸುವ ದಿಕ್ಕಿನಲ್ಲಿ ನ್ಯಾಯ ಸೇತು ಒಂದು ಮಹತ್ವದ ಸಾಧನವಾಗಿದೆ.

ಯಾರು ಬೇಕಾದರೂ ಕಾನೂನು ಸಲಹೆ ಪಡೆದುಕೊಳ್ಳಲು ಸಾಧ್ಯ ;

ಸಾಮಾನ್ಯವಾಗಿ ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದ ನಾಗರಿಕರಿಗೆ, ಹೊಸತಾಗಿ ಬಂದಿರುವ ಕಾನೂನುಗಳಿಗೆ ಸಮರ್ಪಕವಾಗಿ ಇದು ತನ್ನ ಕೆಲಸ ನಿರ್ವಹಿಸುತ್ತದೆ. ಈ ನ್ಯಾಯ ಸೇತು ಕೇವಲ ನಾಗರಿಕರಿಗೆ ಮಾತ್ರವಲ್ಲ, ನ್ಯಾಯಾಂಗ ವ್ಯವಸ್ಥೆಗೂ ಸಹಾಯಕವಾಗಿದೆ. ಅನಗತ್ಯ ವಿಚಾರಣೆಗಳು ಮತ್ತು ಸರಳ ಮಾಹಿತಿಗಾಗಿ ನ್ಯಾಯಾಲಯಗಳಿಗೆ ಬರುವ ಜನರ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ, ನ್ಯಾಯಾಧೀಶರು ಮತ್ತು ಸಿಬ್ಬಂದಿಗೆ ಗಂಭೀರ ಪ್ರಕರಣಗಳ ಮೇಲೆ ಗಮನ ಹರಿಸಲು ಇದು ನೆರವಾಗುತ್ತದೆ. ಯಾರು ಬೇಕಾದರೂ ಇದರಿಂದ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಸಾಧ್ಯ.

ಕಾನೂನು ಮತ್ತು ನ್ಯಾಯಾಂಗ ಸಂಬಂಧಿತ ಮೂಲಭೂತ ಮಾಹಿತಿ ;

ಒಟ್ಟಾರೆಯಾಗಿ ಹೇಳುವುದಾದ್ರೆ, ಇದು ಒಂದು ಚಾಟ್​ಬೋಟ್ ಆಗಿದ್ದು, ನಿಮಗೆ ಮೂಲ ಕಾನೂನು ಸಲಹೆಗಳನ್ನು ಮತ್ತು ಮಾರ್ಗದರ್ಶನವನ್ನು ಇದು ಒದಗಿಸುತ್ತದೆ. ವರದಕ್ಷಿಣ ಕಿರುಕುಳ ಇತ್ಯಾದಿ ಕೌಟುಂಬಿಕ ಸಮಸ್ಯೆ ಇದ್ದರೆ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ, ಯಾವ ಕ್ರಮವನ್ನು ತೆಗೆದುಕೊಳ್ಳಬಹುದು ಇತ್ಯಾದಿ ಸಲಹೆಯನ್ನು ಪಡೆಯಬಹುದು. ನ್ಯಾಯ ಸೇತು ಒಂದು AI ಆಧಾರಿತ ಚಾಟ್‌ಬೋಟ್ ಆಗಿದ್ದು, ಜನರಿಗೆ ಕಾನೂನು ಮತ್ತು ನ್ಯಾಯಾಂಗ ಸಂಬಂಧಿತ ಮೂಲಭೂತ ಮಾಹಿತಿಯನ್ನು ಒದಗಿಸುತ್ತದೆ. ನ್ಯಾಯಾಲಯದ ಪ್ರಕ್ರಿಯೆಗಳು, ಕಾನೂನು ಹಕ್ಕುಗಳು, ಅರ್ಜಿ ಸಲ್ಲಿಕೆ ವಿಧಾನ, ಪ್ರಕರಣದ ಸ್ಥಿತಿ ಮುಂತಾದ ವಿಷಯಗಳಲ್ಲಿ ನಾಗರಿಕರ ಪ್ರಶ್ನೆಗಳಿಗೆ ಇದು ಉತ್ತರಿಸುತ್ತದೆ.

ಇದರ ಮುಖ್ಯ ವಿಶೇಷತೆ ಏನಂದ್ರೆ, ಕಾನೂನು ಪದಗಳನ್ನು ಸುಲಭವಾಗಿ ಅರ್ಥವಾಗುವ ಶೈಲಿಯಲ್ಲಿ ಅಂದ್ರೆ ನಮ್ಮ ಸರಳ ಭಾಷೆಯಲ್ಲಿಯೇ ವಿವರಿಸುತ್ತದೆ. ಇನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ಇದರ ಸೇವೆ ಹಂತ ಹಂತವಾಗಿ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನ್ಯಾಯಾಲಯಕ್ಕೆ ಹೋಗದೇ ಪ್ರಾಥಮಿಕ ಮಾಹಿತಿಯನ್ನು ನಾವು ಇಲ್ಲಿ ಪಡೆದುಕೊಳ್ಳಬಹುದಾಗಿದೆ.

What is Nyay Setu Chat Bot? Know about its main purpose – ತುಳು ಟೈಮ್ಸ್

ಇದನ್ನೂ ಓದಿ :ವಿಟ್ಲದಲ್ಲಿ ರೌಡಿಶೀಟರ್‌ ಗಡಿಪಾರಿಗೆ ಆದೇಶ !

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=g_O1GQ_svzbcHEz4

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page