Bantwal: ನೀವು ಸಹ ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಡ್ತೀರಾ? ಹಾಗಾದ್ರೆ ಎಚ್ಚರ. ಇಲ್ಲೊಬ್ಬ ಬಾಲಕನಿಗೆ ವಾಹನ ಚಲಾಯಿಸಲು ನೀಡಿ ಭಾರೀ ದಂಡತೆತ್ತ ಘಟನೆ ನಡೆದಿದೆ.
ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದಕ್ಕೆ ನ್ಯಾಯಾಲಯವು ದಂಡ ವಿಧಿಸಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಹಾಗೂ ಅಪ್ರಾಪ್ತನಿಗೆ ವಾಹನ ಚಲಾಯಿಸಲು ದ್ವಿಚಕ್ರ ವಾಹನ ಕೊಟ್ಟ ಮಾಲೀಕನಿಗೆ ನ್ಯಾಯಾಲಯ ದಂಡ ತೆರುವಂತೆ ಆದೇಶ ನೀಡಿದೆ.
ಕಳೆದ ಸೆಪ್ಟಂಬರ್ ತಿಂಗಳಲ್ಲಿ ಪುತ್ತೂರು ಕಡೆಯಿಂದ ವಿಟ್ಲದತ್ತ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪ್ರಾಪ್ತ ಚಲಾಯಿಸುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನ ಢಿಕ್ಕಿಯಾಗಿ ಅಪಘಾತ ನಡೆದಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ ವಿಚಾರಣೆ ನಡೆಸಿ ಬಾಲಕ ಚಲಾಯಿಸಿದ ವಾಹನದ ಮಾಲೀಕ ಮುಹಮ್ಮದ್ ಅನೀಸ್ ಎಂಬವರಿಗೆ 32.000 ರೂ, ದಂಡ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ: Puttur: ಅಪರಿಚಿತರಿಂದ ಯುವಕನ ಮೇಲೆ ಹಲ್ಲೆ : FIR ದಾಖಲು…!
ವೀಡೀಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











