ಬ್ರೇಕಿಂಗ್ ನ್ಯೂಸ್
ಕಡಬಕರಾವಳಿಕರ್ನಾಟಕಮಂಗಳೂರು

ಸೇತುವೆಗೆ ಬೈಕ್‌ ಡಿಕ್ಕಿ: ಸುಬ್ರಹ್ಮಣ್ಯದ ಯುವಕ ಸ್ಥಳದಲ್ಲಿಯೇ ಸಾವು !

ಸುಬ್ರಹ್ಮಣ್ಯ: Tulu Times | ಮಂಗಳೂರು ಸಮೀಪದ ಉಡುಪಿ ಉದ್ಯಾವರ ನ್ಯಾಷನಲ್‌ ಹೈವೆ  66ರ ಸೇತುವೆಗೆ ಬೈಕ್ ಡಿಕ್ಕಿಯಾಗಿ ಸುಬ್ರಹ್ಮಣ್ಯದ ಯುವಕ ಯುವರಾಜ್ ಸಾವನ್ನಪ್ಪಿದ್ದಾರೆ.

ಯುವರಾಜ್‌ ಶುಕ್ರವಾರ  ಮುಂಜಾನೆ 2:30ರ ಸುಮಾರಿಗೆ ಬೈಕ್‌ ನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದ    ಯುವರಾಜ್‌ ಅವರ  ಬೈಕ್ ಅತಿ ವೇಗದಿಂದ ಸಾಗುತ್ತಿತ್ತು, ವೇಗಕ್ಕೆ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸೇತುವೆಗೆ ಡಿಕ್ಕಿಯಾದಾಗ ತಕ್ಷಣ  ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಯುವರಾಜ್‌   ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಯುವರಾಜ್‌ ಮೃತದೇಹವನ್ನು ಹತ್ತಿರದ  ಉಚ್ಚಿಲದ ಎಸ್‌ಡಿಪಿಐ ಆಂಬುಲೆನ್ಸ್ ನಲ್ಲಿ ಕೆಎಂ ಸಿರಾಜ್, ಜಲಾಲುದ್ದೀನ್ ಅಜ್ಜರಕಾಡು ಆಸ್ಪತ್ರೆಯ ಶವಗಾರಕ್ಕೆ ಶಿಫ್ಟ್‌ ಮಾಡಲಾಗಿದೆ.

ವಿಟ್ಲದ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ!

ವಿಟ್ಲದ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಭಾರೀ ನಷ್ಟ ಉಂಟಾಗಿದೆ. ಪರಿಣಾಮ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಬೆಂಕಿ ಕಾಣಿಸಿಕೊಂಡಿದ್ದು ಹೇಗೆ..?

ವಿಟ್ಲ ಪೇಟೆಯ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಸುತ್ತಮುತ್ತಲಿನ ಅಂಗಡಿಗಳಿಗೂ ಹಬ್ಬಿದ್ದು, ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸುತ್ತಮುತ್ತಲಿನ ಜನ ಬಂದು ನೋಡಿ ಶಾಕ್ ಆಗಿದ್ದಾರೆ, ಬೆಂಕಿಯನ್ನು ನಂದಿಸಲಾಗದೆ ನಿಂತುಕೊಂಡು ನೋಡಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ಕೊಡಂಗೆ ಮಾಲೀಕತ್ವದ ಸಂತೋಷ್ ಕುಮಾರ್ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಈ ಅಂಗಡಿನ ಮಧ್ಯೆ ಇದ್ದಂತಹ, ಎಸ್. ಬಿ. ಟೈಲರಿಂಗ್ ಶಾಪ್, ಪಡೀಲ್ ಫಾಸ್ಟ್ ಫುಡ್ ಸಹಿತ ಸಣ್ಣ ಅಂಗಡಿಗಳೂ ಬೆಂಕಿ ತಗುಲಿದ್ದು ಸಂಪೂರ್ಣವಾಗಿ ಬೆಂಕಿ ಹರಡಿದೆ. ಅಮಿತ್ ಹೋಟೇಲ್ ಹಾಗೂ ಸ್ಯಾರ್ ವೈನ್ಸ್ ವರೆಗೂ ಹಬ್ಬಿದ್ದು, ಇದರ ನಡುವೆ ಇದ್ದಬಂಟ್ವಾಳದಿಂದ ಅಗ್ನಿಶಾಮಕ ವಾಹನ ಬಂದಿದೆ. ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗಿದ್ದು, ಈ ಘಟನೆಯ ಪರಿಣಾಮವಾಗಿ ಭಾರೀ ನಷ್ಟ ಸಂಭವಿಸಿದೆ.

Bike hits bridge: Youth from Subrahmanya dies on the spot!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page