ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ವಂದೇ ಭಾರತ್ ಎಕ್ಸ್‌ಪ್ರೆಸ್’ ಮಂಗಳೂರಿಗೆ ಬರಲಿರುವ ಯೋಜನೆ ಯಾವಾಗ ?

ವಂದೇ ಭಾರತ್ ಎಕ್ಸ್‌ಪ್ರೆಸ್ : Tulu Times | ಮೇಕ್ ಇನ್ ಇಂಡಿಯಾ, ಅಭಿಯಾನದ ಮಹತ್ವದ ಸಾಧನೆಯಾಗಿರುವ, ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದ ಹೆಮ್ಮೆಯ ಯೋಜನೆ ವಂದೇ ಭಾರತ್ ಎಕ್ಸ್‌ಪ್ರೆಸ್. ಇದು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ ನಿರ್ಮಿಸಲಾದ ಮೊದಲ ಹೈ ಸ್ಪೀಡ್ ರೈಲು ಆಗಿದ್ದು, ಇದರಿಂದ ವ್ಯಾಪಾರ, ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರಕಿದೆ. ಪ್ರಯಾಣಿಕರಿಗೂ ಬಹಳ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗೋದಿಕ್ಕೆ ಈ ಸಾರಿಗೆ ಉತ್ತಮ ವ್ಯವಸ್ಥೆಯೆಂದು ಹೇಳಲಾಗಿದೆ.

ಇದು ಗಂಟೆಗೆ ಸುಮಾರು 160 ಕಿಲೋ ಮೀಟರ್ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಅಲ್ಲದೇ, ವೇಗದ ಜೊತೆಗೆ ಪ್ರಯಾಣಿಕರ ಆರಾಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಂದೇ ಭಾರತ್ ರೈಲು ವಿದ್ಯುತ್ ಚಾಲಿತ ರೈಲಾಗಿದ್ದು, ಈ ರೈಲಿನಲ್ಲಿ ವಿಮಾನಮಟ್ಟದ ಸೀಟುಗಳು, ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ, ವೈ-ಫೈ, ಸಿಸಿ ಟಿವಿ ಕ್ಯಾಮೆರಾ, ಜೈವಿಕ ಶೌಚಾಲಯಗಳು ಹಾಗೂ ಉತ್ತಮ ಬೆಳಕು ವ್ಯವಸ್ಥೆ ಅಳವಡಿಸಲಾಗಿದೆ ಹಾಗೂ ಅಂಗವಿಕಲರಿಗೆ ಅನುಕೂಲವಾಗುವ ಸೌಲಭ್ಯಗಳೂ ಲಭ್ಯವಿರುತ್ತವೆ.

ಈ ರೈಲು ಕಡಿಮೆ ಶಕ್ತಿಯ ಬಳಕೆಯೊಂದಿಗೆ ಕಾರ್ಯನಿರ್ವಹಿಸುವುದರಿಂದ ಪರಿಸರ ಸ್ನೇಹಿ ಎಂದು ಹೇಳಲಾಗಿದೆ. ವಂದೇ ಭಾರತ್ ರೈಲು ಇಂದು ದೇಶದ ಅನೇಕ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತಿದ್ದು, ಕಡಿಮೆ ಸಮಯದಲ್ಲಿ ದೀರ್ಘ ಪ್ರಯಾಣ ಮುಗಿಸುವ ಸೌಲಭ್ಯವನ್ನು ನೀಡುತ್ತಿದೆ. ಮುಖ್ಯವಾಗಿ, ಈ ಹೈ ಸ್ಪೀಡ್ ರೈಲು ಇನ್ನು ಮುಂದೆ ಮಂಗಳೂರಿಗೆ ಬರೋದಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಈ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ. ಅದಷ್ಟು ಬೇಗ ಈ ರೈಲು ಸಂಚಾರ ಮಾಡಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಬೆಂಗಳೂರು, ತುಮಕೂರು, ಹಾಸನ ಮತ್ತು ಮಂಗಳೂರು ಎಂಬ ನಾಲ್ಕು ಜಿಲ್ಲೆಗಳಿಗೆ ಇದು ಅನುಕೂಲವಾಗಲಿದೆ ಎನ್ನಲಾಗಿದೆ.

ಇನ್ನು ವಂದೇ ಭಾರತ್ ರೈಲಿನಲ್ಲಿ ಶುದ್ಧ ಹಾಗೂ ಪೌಷ್ಟಿಕ ಆಹಾರವನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತದೆ. ರೈಲು ಸಂಪೂರ್ಣವಾಗಿ ಸ್ವಚ್ಛತೆಯನ್ನೇ ಆಧಾರವಾಗಿಟ್ಟುಕೊಂಡು ವಿನ್ಯಾಸಗೊಂಡಿದೆ. ಹಾಗೂ ಬಹುನಿರೀಕ್ಷಿತ ವಂದೇ ಭಾರತ್ ರೈಲು ಬೆಂಗಳೂರು ಮತ್ತು ಮಂಗಳೂರು ಸಂಚರಿಸಲಿದ್ದು, ಈ ಮೂಲಕ ಕರಾವಳಿ ಪ್ರದೇಶಗಳ ಪ್ರವಾಸಿ ತಾಣಗಳಿಗೆ ಹೋಗುವವರಿಗೆ ಇದು ಒಳ್ಳೆಯ ಪ್ರಯಾಣ ನೀಡಲಿದೆ ಎನ್ನಲಾಗಿದೆ.

When is the ‘Vande Bharat Express’ planned to come to Mangalore? – ತುಳು ಟೈಮ್ಸ್

ಇದನ್ನೂ ಓದಿ :ರಾತ್ರಿ ಮಲಗುವ ಮುನ್ನ ಲವಂಗ ತಿಂದ್ರೆ ಆರೋಗ್ಯದಲ್ಲಿ ಇಷ್ಟೆಲ್ಲಾ ಬದಲಾವಣೆಯಾಗುತ್ತಾ ?

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=Id8I47Jb32eujgtm

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page