ದಕ್ಷಿಣ ಕನ್ನಡ : Tulu Times| ದಕ್ಷಿಣ ಕನ್ನಡದಲ್ಲಿ ಹೆಚ್ಚಾದ ಮಂಗಗಳ ಕಾಟವು, ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿರುವ ಸ್ಥಿತಿ ಕರ್ನಾಟಕದ ಕರಾವಳಿ ಭಾಗದ್ದಾಗಿದೆ. ತನ್ನ ಹಸಿರು ಸೌಂದರ್ಯ, ಕೃಷಿ ಸಮೃದ್ಧಿ ಮತ್ತು ಸಂಸ್ಕೃತಿಗಾಗಿ ಪ್ರಸಿದ್ಧವಾಗಿರುವ ಪ್ರದೇಶಗಳಲ್ಲಿ, ಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಂಗಗಳ ಕಾಟ ತೀವ್ರವಾದ ಕಾರಣ, ಜನರಿಗೆ ದೊಡ್ಡ ತಲೆನೋವಾಗಿದೆ.
ಮಂಗಗಳು ಹೆಚ್ಚಾಗಿ ಕೃಷಿ ಭೂಮಿಗಳ ಮೇಲೆ ದಾಳಿ ಮಾಡಿ ರೈತರ ಬೆಳೆಗಳನ್ನು ನಾಶಮಾಡುತ್ತಿವೆ. ಅಡಿಕೆ, ತೆಂಗು, ಬಾಳೆ, ಮಾವು, ಹಲಸು, ಸೇರಿದಂತೆ ಅನೇಕ ಬೆಳೆಗಳಿಗೆ ಮಂಗಗಳ ಕಾಟ ಹೆಚ್ಚಾಗಿದೆ. ಬೆಳೆ ಕಟಾವಿನ ಹಂತದಲ್ಲಿ ಮಂಗಗಳು ಗುಂಪಾಗಿ ಬಂದು ಹೊಲಗಳನ್ನು ಹಾಳುಮಾಡುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ತೆಂಗು ಹಾಗೂ ಅಡಕೆ ಬೆಳೆಗಾರರು ತೋಟಕ್ಕೆ ಹೋದ ಸಂದರ್ಭದಲ್ಲಿ ರಾಶಿ ರಾಶಿ ಮಂಗಗಳ ಹಿಂಡು ಕೃಷಿಯನ್ನೆಲ್ಲಾ ಧ್ವಂಸ ಮಾಡುತ್ತಿರುತ್ತಾರೆ. ಯಾವುದೇ ಬೊಬ್ಬೆ, ಕೂಗಿಗೂ ಹೆದರದ ಮಂಗಗಳು ಮನುಷ್ಯರನ್ನು ಕ್ಯಾರೇ ಅನ್ನೋದಿಲ್ಲ. ಬೆವರು ಹರಿಸಿ ಬೆಳೆಸಿದ ತೆಂಗಿನಮರದಲ್ಲಿದ್ದ ತೆಂಗಿನಕಾಯಿಗಳೆಲ್ಲಾ ಹೀಗೆ ಮಂಗನ ಪಾಲಾಗುತ್ತಿರುವುದು ಕೃಷಿಕರ ನೋವು ಯಾರಿಗೂ ಕಾಣುಸಿತ್ತಲ್ಲವೇ ಅಥವಾ ಇದಕ್ಕೆ ಪರಿಹಾರ ಮಾರ್ಗಗಳು ಇಲ್ಲವೇ ? ಎನ್ನುವ ಪ್ರಶ್ನೆ ಗ್ರಾಮೀಣ ಭಾಗದ ಜನರದ್ದಾಗಿದೆ.
ಬೆಳೆದ ಯಾವ ಫಸಲೂ ಕೈಗೆ ದಕ್ಕದೆ ಬೆಳೆಗಾರರು ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ ;
ಬಹಳಷ್ಟು ಕಡೆ ಒಂದು ಎಕರೆ ಬಾಳೆ ತೋಟದಲ್ಲಿ ಒಂದೇ ಒಂದು ಬಾಳೆಹಣ್ಣು ಸಹ ಕೈಗೆ ಸಿಗದಂತೆ ಮಾಡಿವೆ ಎಂದು ಸಂಪಾಜೆ ಭಾಗದ ರೈತರು ಅಲವತ್ತುಕೊಳ್ಳುತ್ತಾರೆ. ತೋಟದಲ್ಲಿ ಕೇವಲ ತೆಂಗಿನಮರ ಮಾತ್ರವಲ್ಲ ಎಲ್ಲ ಬಗೆಯ ತೋಟಗಾರಿಕಾ ಬೆಳೆಗಳನ್ನೂ ಮಂಗಗಳು ಹಾಳುಗೆಡಹುತ್ತಿವೆ. ಚಿಕ್ಕು ಹಣ್ಣಿನ ಗಿಡಗಳಲ್ಲಿರುವ ಫಲಗಳೆಲ್ಲವನ್ನೂ ಮಣ್ಣು ಪಾಲು ಮಾಡುತ್ತಿವೆ. ಇದೀಗ ಕಾಫಿ ಗಿಡಗಳ ಮೇಲೂ ದಾಳಿ ಆರಂಭಿಸಿದ್ದು, ಕಾಫಿ ಹಣ್ಣನ್ನು ತಿಂದು, ಉದುರಿಸಿ, ಗಿಡಗಳ ಕೊಂಬೆಗಳನ್ನು ಮುರಿದು ನಾಶ ಮಾಡುತ್ತಿವೆ. ಮನೆಯಂಗಳದಲ್ಲಿ ಬೆಳೆದ ಎಲ್ಲ ತರಕಾರಿ ಬೆಳೆಗಳನ್ನೂ ನಾಶಪಡಿಸುತ್ತಿವೆ. ಮಂಗಗಳ ಕಾಟ ವಿಪರೀತವಾಗಿದ್ದು, ಬೆಳೆದ ಯಾವ ಫಸಲೂ ಕೈಗೆ ದಕ್ಕದೆ ಬೆಳೆಗಾರರು ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಕೂಡಲೇ ಮಂಗಗಳನ್ನು ಸೆರೆ ಹಿಡಿದು ಬೆಳೆಯನ್ನು ಉಳಿಸಬೇಕು. ಇಲ್ಲದಿದ್ದರೆ, ರೈತರಿಗೆ ಅಪಾರ ನಷ್ಟ ಉಂಟಾಗುತ್ತದೆ. ತೆಂಗಿನಮರಗಳನ್ನು ಹೊಂದಿರುವವರು ಸಹ ಅಂಗಡಿಯಿಂದ ತೆಂಗಿನಕಾಯಿ ಖರೀದಿಸಬೇಕಾದ ಸ್ಥಿತಿ ಬಂದಿದೆ ಎಂದು ಕೃಷಿಕರು ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ.
Increased threat of monkeys: Crops grown with sweat are not available! – ತುಳು ಟೈಮ್ಸ್
ಇದನ್ನೂ ಓದಿ :ಒಂದೇ ದಿನ ಸಾವಿರಕ್ಕಿಂತಲೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಪಯಣ !
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=Id8I47Jb32eujgtm











