ಕರ್ನಾಟಕ: Tulu Times | ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈ ಬಾರಿಯ ಹೊಸ ವರ್ಷವನ್ನು ರೋಮ್ ನಲ್ಲಿ ಸೆಲೆಬ್ರೇಶನ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಹೊಸ ವರ್ಷವನ್ನು ಆಚರಿಸಿದ್ದಾರೆ ಎನ್ನುವ ಗುಸು ಗುಸು ಶುರುವಾಗಿದೆ.
ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರ ಮದುವೆಯ ಗಾಸಿಪ್ ಮಧ್ಯೆ, ರಶ್ಮಿಕಾ ಮಂದಣ್ಣ ತಮ್ಮ ಸ್ನೇಹಿತೆಯರೊಂದಿಗೆ ರೋಮ್ ಪ್ರವಾಸದಲ್ಲಿದ್ದಾರೆ. ಜೊತೆಗೆ ತಮ್ಮ ಪ್ರವಾಸದ ಬಗೆಗಿನ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರವಾಸದಲ್ಲಿ ಅವರು ತಮ್ಮ ಸಹೋದರ ಆನಂದ್ ದೇವರಕೊಂಡರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇನ್ನು ಇದರ ಜೊತೆಗೆ ವಿಜಯ್ ಕೂಡ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಒಂದು ಹುಡುಗಿಯ ತಲೆ ಮಾತ್ರ ಸ್ವಲ್ಪ ಕಾಣಿಸುತ್ತಿದೆ, ಆದ್ರೆ ಅದುವೇ ರಶ್ಮಿಕಾ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ವಿಜಯ್ ಪೋಸ್ಟ್ ನಲ್ಲಿ ಏನೇನಿದೆ..?
ಹೊಸ ವರ್ಷದ ಶುಭಾಶಯಗಳು. ನಾವು ಒಟ್ಟಿಗೆ ಬೆಳೆಯೋಣ, ಉತ್ತಮ ನೆನಪುಗಳನ್ನು ಸೃಷ್ಟಿಸೋಣ. ಉತ್ತಮ ಕೆಲಸಗಳನ್ನು ಮಾಡೋಣ. ಪ್ರೀತಿ, ಉಲ್ಲಾಸ ಮತ್ತು ಜೀವನವನ್ನು ಹರಡೋಣ ಎಂದು ವಿಜಯ್ ಬರೆದುಕೊಂಡಿದ್ದಾರೆ. ಶೇರ್ ಮಾಡಿದ ಒಂದು ಫೋಟೋದಲ್ಲಿ, ವಿಜಯ್ ಐಕಾನಿಕ್ ಕೊಲೋಸಿಯಮ್ ಮುಂದೆ ಪೋಸ್ ನೀಡಿದ್ದಾರೆ. ಇನ್ನು ರಶ್ಮಿಕಾ ತಮ್ಮ ಪೋಸ್ಟ್ಗೆ ರೋಮ್ ಇಲ್ಲಿಯವರೆಗೆ ಎಂದು ಕ್ಯಾಪ್ಟನ್ ನೀಡಿದ್ದಾರೆ. ಜೊತೆಗೆ ಈ ಬಾರಿಯ ಹೊಸ ವರ್ಷವನ್ನು ಅಲ್ಲೇ ಆಚರಿಸಿಕೊಂಡಿದ್ದಾರೆ.
ಕಂಠಪೂರ್ತಿ ಕುಡಿದು ತೂರಾಡಿದ ಬೆಂಗ್ಳೂರ್ ಹುಡ್ಗೀರು!
ರಾಜ್ಯಾದ್ಯಂತ ಸಂಭ್ರಮಾಚರಣೆ ಹೆಚ್ಚಾಗಿತ್ತು. ಜಿಲ್ಲೆ ಜಿಲ್ಲೆಯಲ್ಲಿಯೂ ವರ್ಷ ಕಳೆದಂತೆ ಜನರ ಸಂಭ್ರಮವೂ ಹೆಚ್ಚಾಗ್ತಾ ಇದೆ. ಇವತ್ತು ಮಧ್ಯರಾತ್ರಿ ಡಿ.ಜೆ ಸೌಂಡ್ ಗೆ ಯುವಕ ಯುವತಿಯರು ಕುಣಿಯುತ್ತಾ, ಮದ್ಯ ಸೇವನೆ ಮಾಡ್ತಾ ತಮ್ಮದೇ ಲೋಕದಲ್ಲಿ ಕಾಲ ಕಳೆದಿರುತ್ತಾರೆ. ಅಲ್ಲದೇ ಅರಮನೆ ನಗರಿ ಮೈಸೂರಿನಲ್ಲೂ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಲಾಗಿತ್ತು.
ಇನ್ನು ಬೆಂಗಳೂರಿನಲ್ಲಿ ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಬಿದ್ದ ಯುವಕ ಯುವತಿಯರ ವಿಡಿಯೋ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಕಿರಿಕ್ ಮಾಡಿದ ಪುಂಡರಿಗೆ ಪೋಲಿಸರಿಂದ ಲಾಠಿ ಚಾರ್ಜ್ ಕೂಡಾ ಆಗಿರುತ್ತದೆ. ಎಂ.ಜಿ ರೋಡ್, ಬ್ರಿಗೇಡ್ ರಸ್ತೆಯಲ್ಲಿ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇನ್ನು ಈ ಹೊಸವರ್ಷಕ್ಕೆ ಸ್ವಾಗತ ಮಾಡುವ ಭರದಲ್ಲಿ ಬೆಂಗಳೂರಿನಲ್ಲಿ ಸಾಲು ಸಾಲು ಅವಾಂತರಗಳು ನಡೆದಿರುವುದು ಕಂಡುಬಂದಿದೆ. ಪಬ್, ಕ್ಲಬ್ ಗಳಲ್ಲಿ ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ತೂರಾಡಿಕೊಂಡು ಹೋಗುತ್ತಿರುವ ಯುವಕ ಯುವತಿಯರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗ್ತಾ ಇದೆ.
Rashmika Mandanna celebrated New Year with Vijay in Rome!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











