ಬ್ರೇಕಿಂಗ್ ನ್ಯೂಸ್
ಕರ್ನಾಟಕ

ರಾತ್ರಿ ಮಲಗುವ ಮುನ್ನ ಲವಂಗ ತಿಂದ್ರೆ ಆರೋಗ್ಯದಲ್ಲಿ ಇಷ್ಟೆಲ್ಲಾ ಬದಲಾವಣೆಯಾಗುತ್ತಾ ?

ಲವಂಗ : Tulu Times| ಎಲ್ಲರ ಮನೆಗಳಲ್ಲಿ ಲವಂಗ ಇದ್ದೇ ಇರುತ್ತದೆ. ಲವಂಗವನ್ನು ಚಹಾ, ಕಷಾಯ, ಮಸಾಲೆ ಪದಾರ್ಥಗಳು, ಸಿಹಿತಿನಿಸುಗಳು ಮತ್ತು ಔಷಧೀಯ ಕಷಾಯಗಳಲ್ಲಿ ಬಳಸಲಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲವಂಗವನ್ನು ತಿನ್ನುವುದರಿಂದ ಆರೋಗ್ಯ ಉತ್ತಮವಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಈ ವಸ್ತು ನಮ್ಮ ಅಡುಗೆ ಮನೆಯಲ್ಲಿ ನಿತ್ಯವೂ ಬಳಕೆಯಲ್ಲಿದ್ದು, ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅದರ ಔಷಧೀಯ ಗುಣಗಳಿಂದಾಗಿ ನಮ್ಮ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಅದರಲ್ಲಿಯೂ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಲಗುವ ಮುನ್ನ ಒಂದು ಲವಂಗವನ್ನು ಸೇವಿಸುವುದರಿಂದ ಅಥವಾ ಲವಂಗದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಉಂಟಾಗಬಹುದು ಎನ್ನುತ್ತಾರೆ.

ಲವಂಗದಲ್ಲಿ ಅನೇಕ ಉಪಯುಕ್ತ ಆರೋಗ್ಯ ಬದಲಾವಣೆಗಳಿದ್ದು,‌ ಇದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ, ಅಜೀರ್ಣ ಮತ್ತು ಹೊಟ್ಟೆ ಉಬ್ಬರಿಸುವಿಕೆಯಂತಹ ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮೊದಲು ಒಂದು ಲವಂಗ ತಿನ್ನುವುದರಿಂದ ಮತ್ತಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ಕಫದಂತಹ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸುತ್ತದೆ ;

ರಾತ್ರಿ ಮಲಗುವ ಮೊದಲು ಲವಂಗದ ಸೇವನೆ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಜೊತೆಗೆ ಬಾಯಿಯ ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿಯಾಗಿದೆ. ಇನ್ನು ಲವಂಗದಲ್ಲಿರುವ ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ನಂತಹ ಖನಿಜಗಳು ಮತ್ತು ಜೀವಸತ್ವಗಳಿದ್ದು, ಫ್ಲೇವನಾಯ್ಡ್‌ ಮತ್ತು ಯುಜೆನಾಲ್‌ನಂತಹ ಪ್ರಮುಖ ಇಂಗಾಲದ ಸಂಯುಕ್ತಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಆಯುರ್ವೇದ ತಜ್ಞರು ರಾತ್ರಿ ಮಲಗುವ ಮೊದಲು ಲವಂಗವನ್ನು ಸೇವಿಸಲು ಹೇಳುತ್ತಾರೆ. ಜೊತೆಗೆ ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪರಿಹಾರ ನೀಡುತ್ತದೆ. ಇನ್ನು ಇವುಗಳಲ್ಲಿರುವ ಉಷ್ಣತೆ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಗಂಟಲು ನೋವು, ಕೆಮ್ಮು, ಶೀತ ಮತ್ತು ಕಫದಂತಹ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ.

Will eating cloves before going to bed at night make all these changes in your health? – ತುಳು ಟೈಮ್ಸ್

ಇದನ್ನೂ ಓದಿ :ವಾವ್.. ದಕ್ಷಿಣ ಕನ್ನಡ ಜನರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್‌ !

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=Id8I47Jb32eujgtm

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page