ಉದ್ಯೋಗ : Tulu Times | ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯವು ಭಾರತದ ರಾಜಧಾನಿ ದೆಹಲಿಯಲ್ಲಿ ಸ್ಥಾಪಿತವಾಗಿರುವ ಪ್ರಮುಖ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವನ್ನು 2007ರಲ್ಲಿ ದೆಹಲಿ ಸರ್ಕಾರ ಸ್ಥಾಪಿಸಿದ್ದು, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವಿಶ್ವವಿದ್ಯಾಲಯಕ್ಕೆ ಭಾರತೀಯ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ನೀಡಲಾಗಿರುವುದು ಪ್ರಮುಖ ವಿಚಾರ ಅಲ್ಲದೇ ಇದರ ಮುಖ್ಯ ಉದ್ದೇಶ ಸಮಾಜದ ಎಲ್ಲ ವರ್ಗಗಳಿಗೆ, ವಿಶೇಷವಾಗಿ ಹಿಂದುಳಿದ ಮತ್ತು ಕೆಲವು ಸಮುದಾಯಗಳಿಗೆ ಉನ್ನತ ಶಿಕ್ಷಣವನ್ನು ಸುಲಭವಾಗಿ ಲಭ್ಯವಾಗಿಸುವುದು. ವಿಮರ್ಶಾತ್ಮಕ ಚಿಂತನೆ, ಸಾಮಾಜಿಕ ಸಂಶೋಧನೆ ಮತ್ತು ಸಮಾನತೆಯ ಮೌಲ್ಯಗಳನ್ನು ಉತ್ತೇಜಿಸುವುದು ಇದರ ಶೈಕ್ಷಣಿಕ ದೃಷ್ಟಿಕೋನವಾಗಿದೆ.
ಇದೀಗ ಈ ಪ್ರತಿಷ್ಠಿತ ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯನದಲ್ಲಿ ಪ್ರಾಧ್ಯಾಪಕ ಹುದ್ದೆ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ಘೋಷಿಸಲಾಗಿದೆ. ಒಟ್ಟು 71 ಹುದ್ದೆಗಳಿಗೆ ನೇಮಕಾತಿ ಲಭ್ಯವಿದೆ. ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 9 ವರೆಗೆ ಇರಲಿದೆ. ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಇನ್ನು ಅರ್ಜಿಗಳ ಹಾರ್ಡ್ ಪ್ರತಿಗಳನ್ನು ಜನವರಿ 16 ರವರೆಗೆ ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬಹುದು ಎಂಬುವುದು ವರದಿಯಾಗಿದೆ. ಇಲ್ಲಿ ತಿಳಿಸಿದ ವೆಬ್ ಸೈಟ್ audrec.samarth.edu.inc ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು .
ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯವು ನಡೆಸುವ ಈ ನೇಮಕಾತಿಗಳಿಗೆ ಆಯ್ಕೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ, ಅರ್ಜಿಗಳನ್ನು ಪರಿಶೀಲಿಸಿ ನಂತರ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಅರ್ಜಿ ಶುಲ್ಕ 1,000 ರೂ. ಹಾಗೂ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಅರ್ಜಿ ಪ್ರಕ್ರಿಯೆಯ ಸಮಯದಲ್ಲಿ ಶೈಕ್ಷಣಿಕ ಅರ್ಹತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಬೇಕು.
Want to work at this prestigious university? Then apply today – ತುಳು ಟೈಮ್ಸ್
ಇದನ್ನೂ ಓದಿ :ಕಡಿಮೆ ಹೆರಿಗೆ ಆಗುವ ಆಸ್ಪತ್ರೆಗಳಿಂದ ವೈದ್ಯರ ಶಿಫ್ಟ್ : ಆರೋಗ್ಯ ಇಲಾಖೆಯಿಂದ ಆದೇಶ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/c3Lml4k6wi4?si=Y2Bvz2kVYsMjARVU











