ಆಹಾರ : Tulu Times | ರಾಸಾಯನಿಕ ಬಣ್ಣಗಳ ಮಿಶ್ರಿತ ಕೇಕ್ ಗಳ ಸೇವನೆಯಿಂದ ಆರೋಗ್ಯ ಹಾಳಾಗುವುದರ ಜೊತೆಗೆ, ಮಕ್ಕಳನ್ನೂ ನಾವು ವಿಭಿನ್ನ ರುಚಿಗೆ ಒಳಪಡಿಸುವುದು ತಪ್ಪಾಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್ ಆರಂಭವಾಗಿದ್ದು ವೆರೈಟಿ ಕೇಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಆದ್ರೆ ಇದರ ಬದಲು ನಾವು ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಕೇಕ್ ಬಳಸಿದ್ರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು, ಮಕ್ಕಳಿಗೂ ಉತ್ತಮ.
ಹೌದು… ನೈಸರ್ಗಿಕ ಕೇಕ್ ಎಂದರೆ ಸಂಪೂರ್ಣವಾಗಿ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾದ ಕೇಕ್. ಇದರಲ್ಲಿ ಮೈದಾ ಬದಲು ಗೋಧಿಹಿಟ್ಟು, ಸಕ್ಕರೆಯ ಬದಲು ಬೆಲ್ಲ ಅಥವಾ ಕಂದು ಸಕ್ಕರೆ, ಕೃತಕ ಬಣ್ಣಗಳ ಬದಲು ಹಣ್ಣುಗಳ ನೈಸರ್ಗಿಕ ಬಣ್ಣ ಬಳಸಲಾಗುತ್ತದೆ. ನೈಸರ್ಗಿಕ ಕೇಕ್ ತಿನ್ನೋದ್ರಿಂದ ಆರೋಗ್ಯಕ್ಕೆ ಹಾನಿ ಕಡಿಮೆಯಾಗುತ್ತದೆ, ಜೀರ್ಣಕ್ರಿಯೆ ಉತ್ತಮವಾಗುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಮಕ್ಕಳಿಗೆ ಸುರಕ್ಷಿತ, ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ, ತೂಕ ನಿಯಂತ್ರಣಕ್ಕೆ ಸಹಾಯ, ಅಲರ್ಜಿ ಸಮಸ್ಯೆ ಕಡಿಮೆ ಮಾಡಲು ಸಹಕಾರಿಯಾಗಿದೆ.
ದೇಹದ ಆರೋಗ್ಯಕ್ಕೆ ಸಹಕಾರಿ ;
ಸಾಮಾನ್ಯ ಕೇಕ್‌ಗಳಿಗೆ ಹೋಲಿಸಿದರೆ ನೈಸರ್ಗಿಕ ಕೇಕ್‌ಗಳಲ್ಲಿ ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಕಡಿಮೆಯಿರುತ್ತದೆ. ಆದ್ದರಿಂದ ಮಧುಮೇಹ, ಹೃದಯ ಸಮಸ್ಯೆ ಇರುವವರಿಗೆ ಸಹ ನಿಯಂತ್ರಿತ ಪ್ರಮಾಣದಲ್ಲಿ ಸೇವಿಸಬಹುದಾದ ಸಿಹಿ ಆಹಾರವಾಗಿದೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಕಾರಣ ಸ್ವಚ್ಛತೆ ಮತ್ತು ಗುಣಮಟ್ಟದ ಮೇಲೂ ನಂಬಿಕೆ ಇರುತ್ತದೆ. ಇನ್ನು ನೈಸರ್ಗಿಕ ಕೇಕ್‌ಗಳಲ್ಲಿ ಬಾಳೆಹಣ್ಣು, ಸೇಬು, ಖರ್ಜೂರ, ಸ್ಟ್ರಾಬೆರಿ ಮುಂತಾದ ಹಣ್ಣುಗಳು ಹಾಗೂ ತರಕಾರಿಗಳನ್ನು ಬಳಸಿ ಸಿಹಿತನ ಮತ್ತು ರುಚಿಯನ್ನು ಹೆಚ್ಚಿಸಲಾಗುತ್ತದೆ. ಇವುಗಳಲ್ಲಿ ಇರುವ ವಿಟಮಿನ್‌ಗಳು, ಖನಿಜಗಳು ಮತ್ತು ನಾರು ದೇಹದ ಆರೋಗ್ಯಕ್ಕೆ ಸಹಕಾರಿ. ಮಕ್ಕಳಿಗೂ ಹಿರಿಯರಿಗೂ ಇಂತಹ ಕೇಕ್‌ಗಳು ಸುರಕ್ಷಿತ ಹಾಗೂ ಪೋಷಕಾಂಶಯುಕ್ತವಾಗಿವೆ.
What are the health benefits of eating natural cake? – ತುಳು ಟೈಮ್ಸ್
ಇದನ್ನೂ ಓದಿ :ಕಾಂಗ್ರೆಸ್ ಸರ್ಕಾರದಿಂದ ಸಂವಿಧಾನ ವಿರೋಧಿ ನಡೆ: ವಿಜಯೇಂದ್ರ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Qg7ctTd7pfY?si=IDkF0fD38uBlvajW











