ಬೆಳ್ತಂಗಡಿ: Tulu Times | ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ (55) ಎಂಬ ಮಹಿಳೆಗೆ ನಾಗರ ಹಾವು ಕಡಿದು ಮೃತಪಟ್ಟಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಕೊಡಗು ಗಡಿ ಪ್ರದೇಶವಾಗಿರುವ ಚೆಂಬು ಗ್ರಾಮದಲ್ಲಿ ಅಕ್ವಾನಿಶ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ಉದ್ಘಾಟನೆ
ಗುಡ್ಡ ತೋಟ ನಿವಾಸಿ ಪ್ರೇಮ ಪ್ರತಿ ದಿನದಂತೆ ಮಧ್ಯಾಹ್ನ ಊಟದ ಬಳಿಕ ತೋಟಕ್ಕೆ ಬಂದು ಕೆಲಸ ಮಾಡುತ್ತಿದ್ದರು. ಈ ವೇಳೆ ವಿಷಕಾರಿ ಹಾವು ಕಚ್ಚಿದೆ. ಮಹಿಳೆಗೆ ಹಾವು ಕಡಿದ ಕೂಡಲೇ ಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದಿಗೆ ಪ್ರೇಮ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆದರೆ, ವಿಷದ ತೀವ್ರ ಪರಿಣಾಮದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗಮನಿಸಿ: ಪ್ರಥಮ ಚಿಕಿತ್ಸಾ ಕ್ರಮಗಳು ಏನು..?
ಶಾಂತವಾಗಿರಿ ಮತ್ತು ವ್ಯಕ್ತಿಯನ್ನು ಸಮಾಧಾನಪಡಿಸಿ: ಭಯಭೀತರಾದರೆ ಹೃದಯ ಬಡಿತ ಹೆಚ್ಚಾಗಿ ವಿಷವು ದೇಹದಾದ್ಯಂತ ವೇಗವಾಗಿ ಹರಡಬಹುದು. ಕಡಿತಕ್ಕೊಳಗಾದ ಭಾಗವನ್ನು (ಕೈ ಅಥವಾ ಕಾಲು) ಅಲುಗಾಡಿಸಬೇಡಿ. ಚಲನೆಯನ್ನು ಕಡಿಮೆ ಮಾಡಲು ಪಟ್ಟಿ ಅಥವಾ ಕಡ್ಡಿಯ ಸಹಾಯದಿಂದ ಆ ಭಾಗವನ್ನು ಬಂಧಿಸಿ. ಕಡಿತಕ್ಕೊಳಗಾದ ಜಾಗದ ಸುತ್ತಲೂ ಊತ ಉಂಟಾಗುವ ಸಾಧ್ಯತೆ ಇರುವುದರಿಂದ ಉಂಗುರ, ವಾಚ್ ಅಥವಾ ಬಿಗಿಯಾದ ಬಟ್ಟೆಗಳನ್ನು ತಕ್ಷಣವೇ ತೆಗೆದುಹಾಕಿ. ಸಾಧ್ಯವಾದರೆ ಗಾಯವನ್ನು ಸಾಬೂನು ಮತ್ತು ನೀರಿನಿಂದ ನಿಧಾನವಾಗಿ ತೊಳೆಯಿರಿ. ವ್ಯಕ್ತಿಯನ್ನು ಆದಷ್ಟು ಬೇಗ ಆಂಟಿ-ವೆನಂ (Antivenom) ಲಭ್ಯವಿರುವ ಸಮೀಪದ ಆಸ್ಪತ್ರೆಗೆ ಕರೆದೊಯ್ಯಿರಿ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಕಿರುಷಷ್ಠಿ
ಜೇನು ಕೃಷಿ ಕಲಿಸುತ್ತೇನೆ ಎಂದು ಹೇಳಿ ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ!
ಪ್ರತ್ಯೇಕ ಪ್ರಕರಣದಲ್ಲಿ, ಜೇನು ಕೃಷಿ ಕಲಿಸುತ್ತೇನೆ ಎಂದು ಹೇಳಿ ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿಯ ಅಬ್ದುಲ್ ಗಫೂರ್ ಬಂಧಿತ ಆರೋಪಿಯಾಗಿದ್ದಾನೆ. ಬೆಳಗಾವಿ ಮೂಲದ ಕುಟುಂಬ ಕೆಲಸಕ್ಕಾಗಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಮಗಳಿಗೆ ಜೇನು ಕೃಷಿ ಕಲಿಸುತ್ತೇನೆಂದು ಹೇಳಿದ ಕಾರಣ ತನ್ನ ಮಗಳನ್ನು 2 ತಿಂಗಳಿಂದ ಆರೋಪಿಯ ಮನೆಯಲ್ಲಿ ಬಿಟ್ಟಿದ್ದರು, ಬಾಲಕಿಯ ತಂದೆ ತಾಯಿ ಊರಿಗೆ ಹೋದಾಗ ಆರೋಪಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ತಂದೆ ತಾಯಿ ಬಂದಾಗ ನೊಂದ ಬಾಲಕಿ ವಿಚಾರ ತಿಳಿಸಿದ್ದಾಳೆ. ನಂತರ ಇವರು ನೀಡಿದ ದೂರಿನ ಮೇರೆಗೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಫೋಕೋ ಕಾಯ್ದೆ 2012 ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್ ವಾರ್ ಮತ್ತೆ ಶುರು..? ದಚ್ಚು.. ಕಿಚ್ಚ ಫ್ಯಾನ್ಸ್ ಗಲಾಟೆಗೆ ಕಾರಣ ಏನು..?
a-woman-from-shishila-died-after-being-bitten-by-a-snake- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











