ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಡಿ.ಕೆ ಶಿವಕುಮಾರ್ ಶತ್ರುಸಂಹಾರಕ್ಕಾಗಿ ಟೆಂಪಲ್ ರನ್..ಏಕಾಂತದಲ್ಲಿ ಕುಳಿತ ಡಿಸಿಎಂ!

ಕಾರವಾರ: Tulu Times | ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಂಕೋಲಾ ತಾಲೂಕಿನ ಆಂದ್ಲೆಯ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತನ್ನ ಇಷ್ಟಾರ್ಥ ಸಿದ್ಧಿಗಾಗಿ ದೇವಿಯಲ್ಲಿ ಪಾರ್ಥನೆ ಸಲ್ಲಿಸಿದ್ದಾರೆ.

ಮೊದಲು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಡಿಸಿಎಂ ಭೇಟಿ ನೀಡಿ, ಅನಂತರ ಮಹಾಬಲೇಶ್ವರ ಆತ್ಮಲಿಂಗ ದರ್ಶನ, ಬಿಲ್ಪತ್ರೆ, ಪಂಚಾಮೃತ ಅಭಿಷೇಕ ಮುಗಿಸಿ, ಮಹಾಗಣಪತಿ ಪೂಜಾ ಕಾರ್ಯ ಕೈಗೊಂಡರು.

ಇದನ್ನೂ ಓದಿ: ಕಲರ್ಸ್ ಕನ್ನಡದಲ್ಲಿ ಬರಲಿದೆ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ಸ್ : ಡಿ.21 ಕ್ಕೆ ಆಡಿಷನ್

ಗರ್ಭಗುಡಿ ಪ್ರವೇಶಿಸಿದ್ದ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ್ ಸೈಲ್ ಅವರನ್ನು ಡಿಕೆಶಿ ಹೊರಗೆ ಕಳುಹಿಸಿ,  ಗರ್ಭಗುಡಿಯಲ್ಲಿ ಏಕಾಂಗಿಯಾಗಿ ಕುಳಿತು ಡಿಕೆಶಿ ಪೂಜೆ ನೆರವೇರಿಸಿದರು. ಅರ್ಚಕ ಗಣೇಶ್ ನಾಯ್ಕ ಅವರಿಂದ ಪೂಜಾ ಕಾರ್ಯ ಪ್ರಾರಂಭಿಸಿದರು.

ದೇವಾಲಯದ ಅರ್ಚಕ ಗಣೇಶ್ ನಾಯ್ಕ ಕುಟುಂಬದಿಂದ ಹೂಗುಚ್ಛ ನೀಡಿ ಸ್ವಾಗತ ಕೋರಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಕಾರವಾರ ಶಾಸಕ ಸತೀಶ್ ಸೈಲ್ ಅವರು ಡಿಸಿಎಂಗೆ ಸಾಥ್ ನೀಡಿದರು. ಶಲ್ಯ ಹೊದ್ದು, ರುದ್ರಾಕ್ಷಿ ತೊಟ್ಟು ಮಡಿಯಲ್ಲಿ ದೇವಾಲಯಕ್ಕೆ ಆಗಮಿಸಿದರು. ಗರ್ಭಗುಡಿಯಲ್ಲಿ ಡಿಕೆಶಿ ಹೊರತುಪಡಿಸಿ ಇತರ ಆಪ್ತರಿಗೂ ಪ್ರವೇಶ ಇರಲಿಲ್ಲ. ಆಂದ್ಲೆಯಲ್ಲಿ ಕೆಲವೇ ಕೆಲವು ಮುಖಂಡರಿಗೆ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ: ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಗಡಿಪಾರು ಆದೇಶದ ಪ್ರತಿ ಅಂಟಿಸಿದ ಪೊಲೀಸರು!

ಡಿಕೆಶಿ ಪ್ರತಿಯೊಂದು ರಾಜಕೀಯ ನಡೆಗೂ ದೇವಿಯ ಆಶೀರ್ವಾದ!

2019 ರಲ್ಲಿ  50 ದಿನ ಜೈಲುವಾಸ ಅನುಭವಿಸಿದ್ದ ವೇಳೆ ಡಿಕೆಶಿಯವರ ತಾಯಿ ಮತ್ತು ಪತ್ನಿ ಈ ದೇವಾಲಯಕ್ಕೆ ಬಂದು ಜಾಮೀನಿಗಾಗಿ ಪ್ರಾರ್ಥಿಸಿದ್ದರು. ಡಿಕೆ ಶಿವಕುಮಾರ್‌ಗೆ 9 ದಿನದೊಳಗೆ ಜಾಮೀನು ಸಿಗುತ್ತದೆಂದು ಗಣೇಶ ನಾಯ್ಕ ಅವರು ಹೇಳಿದ್ದರಂತೆ. ಅದರಂತೆ 9 ದಿನದ ಒಳಗಾಗಿ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಪ್ರತಿ ಅಮಾವಾಸ್ಯೆಯಂದು ಡಿಕೆಶಿ ಹೆಸರಿನಲ್ಲಿ ಪೂಜೆ ಮಾಡಲಾಗುತ್ತಿದ್ದು, ಕಳೆದ 6 ವರ್ಷಗಳಿಂದ  ಡಿಕೆಶಿ ತಮ್ಮ ಪ್ರತಿಯೊಂದು ರಾಜಕೀಯ ನಡೆಗೂ ದೇವಿಯ ಆಶೀರ್ವಾದ ಪಡೆಯುತ್ತಾರೆ.

D.K. Shivakumar Temple Run to eliminate enemies…DCM sitting in seclusion!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page