ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ಚೋಲೆ ಬಟೂರೆ’ ಮಾಡುವ ವಿಧಾನ ಹಾಗೂ ಇದರ ವಿಶೇಷತೆ ಬಗ್ಗೆ ತಿಳಿಯಿರಿ

ಆಹಾರ : Tulu Times | ಚೋಲೆ ಬಟೂರೆ ಉತ್ತರ ಭಾರತದ, ವಿಶೇಷವಾಗಿ ಪಂಜಾಬ್ ಮತ್ತು ದೆಹಲಿ ಪ್ರದೇಶದಲ್ಲಿ ಪ್ರಸಿದ್ಧವಾದ ಆಹಾರ. ಚೋಲೆ ಎಂದರೆ, ಬಿಳಿ ಕಡಲೆ ಬಳಸಿ ಮಾಡುವ ಮಸಾಲೆ ಆಧಾರಿತ ಗ್ರೇವಿ. ಈರುಳ್ಳಿ, ಟೊಮ್ಯಾಟೊ, ಶುಂಠಿ–ಬೆಳ್ಳುಳ್ಳಿ, ವಿವಿಧ ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ. ಕಾರದ, ಹುಳಿ ಹಾಗೂ ಗಾಢ ರುಚಿ ಇದರ ವಿಶೇಷತೆಯಾಗಿದೆ. ಇನ್ನು ಬಟೂರೆ ಅಂದ್ರೆ, ಮೈದಾ ಹಿಟ್ಟಿನಿಂದ ಮಾಡಿದ ಹುರಿದ ದೊಡ್ಡ ರೊಟ್ಟಿ. ಹೊರಗೆ ಕ್ರಿಸ್ಪಿ, ಒಳಗೆ ಮೃದುವಾಗಿರುತ್ತದೆ. ಸಾಮಾನ್ಯವಾಗಿ ಮೊಸರು ಅಥವಾ ಈಸ್ಟ್ ಬಳಸಿ ಹಿಟ್ಟನ್ನು ಮಾಡಲಾಗುತ್ತದೆ. ಬಿಸಿ ಬಿಸಿ ಬಟೂರೆ ಜೊತೆಗೆ ಚೋಲೆ ಹಾಕಿ ತಿನ್ನುತ್ತಾರೆ. ಜೊತೆಗೆ ಈರುಳ್ಳಿ ಸಲಾಡ್, ನಿಂಬೆಯನ್ನು ನೀಡುತ್ತಾರೆ. ಇದರ ವಿಶೇಷತೆ ಏನಂದ್ರೆ, ತುಂಬಾ ತೃಪ್ತಿದಾಯಕ ಮತ್ತು ಶಕ್ತಿದಾಯಕ ಆಹಾರವಾಗಿದ್ದು, ಉತ್ತರ ಭಾರತದಲ್ಲಿ ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟವಾಗಿಯೂ, ರಸ್ತೆ ಬದಿ ಅಂಗಡಿಗಳಿಂದ ಹಿಡಿದು ಹೋಟೆಲ್‌ಗಳವರೆಗೆ ಎಲ್ಲೆಡೆ ಸಿಗುತ್ತದೆ.

ಚೋಲೆ ಬಟೂರೆ ಮಾಡುವಾಗ ಬೇಕಾಗುವ ಸಾಮಗ್ರಿಗಳು ;
ಬಿಳಿ ಕಡಲೆ – 1 ಕಪ್ (ರಾತ್ರಿ ನೆನೆಸಿದ), ಈರುಳ್ಳಿ – 2 (ಸಣ್ಣದಾಗಿ ಕತ್ತರಿಸಿದ), ಟೊಮ್ಯಾಟೊ – 2 (ಪೇಸ್ಟ್), ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್, ಹಸಿರು ಮೆಣಸು – 1–2, ಎಣ್ಣೆ – 3 ಟೇಬಲ್ ಸ್ಪೂನ್, ಜೀರಿಗೆ – 1 ಟೀ ಸ್ಪೂನ್,‌ ಅರಿಶಿಣ – ½ ಟೀ ಸ್ಪೂನ್, ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್, ಧನಿಯಾ ಪುಡಿ – 2 ಟೀ ಸ್ಪೂನ್, ಗರಂ ಮಸಾಲೆ – 1 ಟೀ ಸ್ಪೂನ್, ಚೋಲೆ ಮಸಾಲೆ – 1 ಟೀ ಸ್ಪೂನ್ (ಐಚ್ಛಿಕ),‌ ಉಪ್ಪು – ರುಚಿಗೆ ತಕ್ಕಷ್ಟು, ನಿಂಬೆ ರಸ – 1 ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ ;
ಮೊದಲು ನೆನೆಸಿದ ಕಡಲೆಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಉಪ್ಪು ಹಾಕಿ 3–4 ಸಿಟಿ ಬರುವವರೆಗೆ ಬೇಯಿಸಿ, ಆನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ಈರುಳ್ಳಿ, ಹಸಿರು ಮೆಣಸು ಹಾಕಿ ಕೆಂಪು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ವಾಸನೆ ಹೋಗುವವರೆಗೆ ಹುರಿಯಿರಿ. ಟೊಮ್ಯಾಟೊ ಪೇಸ್ಟ್ ಮತ್ತು ಎಲ್ಲಾ ಮಸಾಲೆಗಳನ್ನು ಹಾಕಿ ಎಣ್ಣೆ ಬಿಡುವವರೆಗೆ ಬೇಯಿಸಿ. ಬೇಯಿಸಿದ ಕಡಲೆ ಹಾಗೂ ಸ್ವಲ್ಪ ನೀರು ಸೇರಿಸಿ 10–15 ನಿಮಿಷ ಕುದಿಯಲಿ ಕೊನೆಯದಾಗಿ, ನಿಂಬೆ ರಸ ಮತ್ತು ಕೊತ್ತಂಬರಿ ಸೇರಿಸಿ ಆರಿಸಿ.

ಬಟೂರೆ ಮಾಡುವ ವಿಧಾನ ; ಬೇಕಾಗುವ ಸಾಮಗ್ರಿಗಳು, ಮೈದಾ – 2 ಕಪ್, ಮೊಸರು – ½ ಕಪ್, ಬೇಕಿಂಗ್ ಸೋಡಾ – ¼ ಟೀ ಸ್ಪೂನ್, ಉಪ್ಪು – ಸ್ವಲ್ಪ, ಸಕ್ಕರೆ – 1 ಟೀ ಸ್ಪೂನ್, ಎಣ್ಣೆ – 1 ಟೇಬಲ್ ಸ್ಪೂನ್, ನೀರು – ಬೇಕಾದಷ್ಟು ಹುರಿಯಲು ಎಣ್ಣೆ.       ಮಾಡುವ ವಿಧಾನ ; ಮೈದಾ, ಉಪ್ಪು, ಸಕ್ಕರೆ, ಬೇಕಿಂಗ್ ಸೋಡಾ ಸೇರಿಸಿ ನಂತರ ಮೊಸರು, ಸ್ವಲ್ಪ ನೀರು ಹಾಕಿ ಮೃದುವಾಗಿ ಹಿಟ್ಟು ಕಲಸಿ. ಹಿಟ್ಟಿಗೆ ಎಣ್ಣೆ ಹಚ್ಚಿ ಮುಚ್ಚಿ 2–3 ಗಂಟೆ ವಿಶ್ರಾಂತಿ ನೀಡಿ. ಸಣ್ಣ ಉಂಡೆಗಳಾಗಿ ಮಾಡಿ, ಪೂರಿಯಂತೆ ದೊಡ್ಡದಾಗಿ ಲಟ್ಟಿಸಿ, ಬಿಸಿ ಎಣ್ಣೆಯಲ್ಲಿ ಎರಡೂ ಬದಿಯೂ ಕೆಂಪಾಗುವ ತನಕ ಹುರಿದು ತೆಗೆಯಿರಿ. ಈಗ ಚೋಲೆ ಬಟೂರೆ ಸಿದ್ಧವಾಗುತ್ತೆ. Learn about the method of making ‘Chole Bature’ and its special features – ತುಳು ಟೈಮ್ಸ್

ಇದನ್ನೂ ಓದಿ :2026 ರ ಮೊದಲ ದಿನದ ಸಂಭ್ರಮಾಚರಣೆಗೆ ವಿಶೇಷ ಮಾರ್ಗಸೂಚಿ ಬಿಡುಗಡೆ

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=2uWsULpUSalxRjy9

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page