ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಈ ತರಕಾರಿಗಳನ್ನು ಅಡುಗೆಗೆ ಉಪಯೋಗಿಸುವ ಮುನ್ನ ಎಚ್ಚರ !

ಆರೋಗ್ಯ : Tulu Times | ಹಲವಾರು ಜನ ತಮ್ಮ ಡಯಟ್ ನಲ್ಲಿ ತರಕಾರಿ ಹಣ್ಣುಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಅದರಲ್ಲೂ ಹಸಿ ತರಕಾರಿಗಳನ್ನು ಬೆಳಗ್ಗೆನ ಉಪಹಾರದ ಸಮಯದಲ್ಲೋ ಅಥವಾ ಊಟದ‌ ಬದಲಾಗಿ ಉಪಯೋಗಿಸುವುದಿದೆ. ಇನ್ನು ಹಸಿ ತರಕಾರಿಗಳನ್ನು ಹಾಗೆಯೇ ತಿಂದರೆ ಪೌಷ್ಟಿಕಾಂಶ ಹೆಚ್ಚು ಎಂದು ಅದನ್ನು ಬೇಯಿಸೋದಿಕ್ಕೆ ಹೋಗೋದಿಲ್ಲ. ಆದ್ರೆ ಪೌಷ್ಟಿಕತಜ್ಞರು ಹೇಳುವ ಪ್ರಕಾರ ಕೆಲವು ತರಕಾರಿಗಳನ್ನು ಅತಿಯಾಗಿ ಬೇಯಿಸಿದರೆ ಅವು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ. ಇನ್ನೂ ಕೆಲವು ತರಕಾರಿಗಳನ್ನು ಹಸಿಯಾಗಿ ಎಂದಿಗೂ ತಿನ್ನಬಾರದು ಎನ್ನಲಾಗುತ್ತದೆ. ಹಾಗೇ ಕ್ಯಾರೆಟ್, ಟೊಮೇಟೋ, ಬೀಟ್ರೂಟ್, ಈರುಳ್ಳಿ, ಸೌತೆಕಾಯಿ ಸೇರಿ ಕೆಲವೊಂದನ್ನು ಹಾಗೇ ಹಸಿಯಾಗಿ ತಿನ್ನುತ್ತೇವೆ. ಆದರೆ ಇವುಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಈ ತರಕಾರಿಯಲ್ಲೇ ಕೆಲವೊಂದನ್ನ ಹಸಿಯಾಗಿ ತಿನ್ನಲೇಬಾರದು. ಅವು ಯಾವುವು ಅಂತ ತಿಳ್ಕೊಳ್ಳೋಣ ಬನ್ನಿ.

ಎಲೆಕೋಸನ್ನು ತಿನ್ನುವಾಗ ಬಿಸಿ ನೀರಿನಲ್ಲಿ ಚೆನ್ನಾಗಿ ಬೇಯಿಸಿ ;

ಕೆಸುವಿನ ಎಲೆ, ಪಾಲಕ್, ಬಸಲೆ ಸೊಪ್ಪು ಇತ್ಯಾದಿ ಸೊಪ್ಪುಗಳನ್ನು ಬಿಸಿ ನೀರಿನಲ್ಲಿ ಬೇಯಿಸಿ ಬಳಿಕ ನಮಗೆ ಬೇಕಾದ ರೀತಿಯಲ್ಲಿ ಸಾಂಬಾರು, ಸೊಪ್ಪುಸಾರು ಸಿದ್ಧ ಮಾಡಿಕೊಳ್ಳಬಹುದು. ಏಕೆಂದರೆ, ಇದರಲ್ಲಿ ಕೆಲವೊಂದು ಸೂಕ್ಷ್ಮ ಜೀವಿಗಳು, ಕೀಟಾಣುಗಳು ಸೇರಿಕೊಂಡಿರುತ್ತವೆ. ಇನ್ನು ಬದನೆಕಾಯಿ ತಿನ್ನುವಾಗ ಹೆಚ್ಚು ಬೇಯಿಸಿ ತಿನ್ನಬೇಕು. ಇದರಿಂದ ಬದನೆಕಾಯಿ ಬೀಜದ ಒಳಗಿನ ಲಾಡಿಹುಳುವಿನ ಮೊಟ್ಟೆಗಳು ನಾಶ ಹೊಂದುತ್ತವೆ ಎಂದು ಹೇಳುತ್ತಾರೆ. ಕ್ಯಾಪ್ಸಿಕಂ ಅಥವಾ ದೊಣ್ಣೆಮೆಣಸಿನ ಕಾಯಿಯ ಮೇಲಿನ ಭಾಗವನ್ನು ಓಪನ್ ಮಾಡಿ ಬೀಜಗಳನ್ನು ತೆಗೆದು ಅದನ್ನು ಬಿಸಿನೀರಿನಲ್ಲಿ ಮುಳುಗಿಸಬೇಕು. ಏಕೆ ಹೀಗೆ ಮಾಡಬೇಕು ಎಂದರೆ ಕ್ಯಾಪ್ಸಿಕಂ ಬೀಜಗಳಲ್ಲಿ ಲಾಡಿಹುಳುವಿನ ಮೊಟ್ಟೆಗಳು ಇರುವ ಸಾಧ್ಯತೆ ಇರುತ್ತದೆ ಹಾಗೂ ಕ್ಯಾಬೇಜ್ ಅಥವಾ ಎಲೆಕೋಸು ಇದನ್ನು ಹಸಿಯಾಗಿ ತಿನ್ನಬಾರದು. ಇದರಲ್ಲಿಯೇ ಅತಿ ಹೆಚ್ಚು ಲಾಡಿಹುಳು ಮತ್ತು ಅದರ ಮೊಟ್ಟೆಗಳು ಇರುತ್ತವೆ. ಇದರ ಜೊತೆಗೆ ಕ್ರಿಮಿ, ಕೀಟಗಳು ಅಧಿಕಮಟ್ಟದಲ್ಲಿರುತ್ತವೆ. ಎಲೆಕೋಸನ್ನು ತಿನ್ನುವಾಗ ಬಿಸಿ ನೀರಿನಲ್ಲಿ ಚೆನ್ನಾಗಿ ಬೇಯಿಸಿ ಬಳಿಕ ನಮಗೆ ಬೇಕಾದಂತೆ ಸಿದ್ಧತೆ ಮಾಡಿ ತಿನ್ನಬಹುದು. ಹಾಗಾಗಿ ತರಕಾರಿಗಳನ್ನು ಹಾಗೆಯೇ ತಿನ್ನುವ ಮುನ್ನ ಆಲೋಚಿಸಿ. Be careful before using these vegetables for cooking! – ತುಳು ಟೈಮ್ಸ್

ಇದನ್ನೂ ಓದಿ :ಪಂಚಾಯಿತಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ: ಅರುಣ್‌ ಕುಮಾರ್ ಪುತ್ತಿಲ ಆರೋಪ!

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/3q51mcNKoyQ?si=I2ejd8Hwl8z7PVPS

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page