ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ದಿ ಡೆವಿಲ್’ ಹೌಸ್ ಫುಲ್ : ಅಭಿಮಾನಿಗಳಿಂದಲೇ ಅದ್ದೂರಿ ಪ್ರಚಾರ

ಸಿನೆಮಾ : Tulu Times | ಇದೀಗ ಕನ್ನಡ ಚಲನಚಿತ್ರ ರಂಗದಲ್ಲಿ ಮಾಸ್ ಸಿನಿಮಾಗಳು ವಿಶೇಷ ಸ್ಥಾನ ಹೊಂದಿವೆ. ಅಭಿಮಾನಿಗಳನ್ನು ಕುತೂಹಲದಿಂದ ಕಾಯಿಸಿರುವ ದರ್ಶನ್ ಅಭಿನಯದ ‘ಡೆವಿಲ್’ ಕೂಡ ಇದೇ ಸಾಲಿನಲ್ಲಿದೆ. ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಭರ್ಜರಿ ಆಕ್ಷನ್ ಹಾಗೂ ತೀವ್ರ ಕಥಾಹಂದರದ ಸಂಯೋಜನೆ ಈ ಚಿತ್ರವನ್ನು ಮತ್ತಷ್ಟು ವಿಶೇಷವಾಗಿಸಿದೆ. ಆದರೆ ಜೈಲು ಶಿಕ್ಷೆ ಅನುಭವಿಸುತ್ತಿರುವ ದರ್ಶನ್ ಗೆ ಮಾತ್ರ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲಾಗುತ್ತಿಲ್ಲ. ಇವರ ಪರವಾಗಿ ಅವರ ಅಭಿಮಾನಿಗಳೇ ಈ ಸಿನೆಮಾದ ಪೋಸ್ಟರ್ ಗಳ ಜೊತೆ ದರ್ಶನ್ ಫೋಟೋಗಳಿಗೆ ಅಲಂಕಾರ ಮಾಡ್ತಾ ಸಂಭ್ರಮಿಸ್ತಾ ಇದ್ದಾರೆ.

ನಟ ದರ್ಶನ್ ಅವರು ಜೈಲಿನಲ್ಲಿ ಇದ್ರೂ ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳೇ ಎಲ್ಲ ಕಡೆಗಳಲ್ಲಿ ಈ ಚಿತ್ರಕ್ಕೆ ಅದ್ದೂರಿಯಾಗಿ ಪ್ರಚಾರ ಮಾಡುತ್ತಿದ್ದು, ಎಲ್ಲಾ ಚಿತ್ರಮಂದಿರಗಳನ್ನು ಸಿಂಗಾರ ಮಾಡಲಾಗಿದೆ. ಹಬ್ಬದ ರೀತಿಯಲ್ಲಿ ದರ್ಶನ್ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಪ್ರಕಾಶ್ ವೀರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾಗಿದೆ.

ಇನ್ನು ಮೊದಲ ದಿನದ ಎಲ್ಲ ಶೋಗಳು ಹೌಸ್​ಫುಲ್ ಆಗಿವೆ. ಬೆಂಗಳೂರು, ಮೈಸೂರು ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಕೂಡ ‘ದಿ ಡೆವಿಲ್’ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣಲಿದೆ. ಒಂದು ವೇಳೆ ದರ್ಶನ್ ಅವರು ಹೊರಗೆ ಇದ್ದಿದ್ದರೆ ಸಂಭ್ರಮಾಚರಣೆ ಇನ್ನೂ ಜೋರಾಗಿ ಇರುತ್ತಿತ್ತು. ಸದ್ಯ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿ ಇರುವುದು ಅಭಿಮಾನಿಗಳಿಗೆ ನೋವಿನ ವಿಚಾರ.

‘The Devil’ Housefull: Massive promotion from fans – ತುಳು ಟೈಮ್ಸ್

ಇದನ್ನೂ ಓದಿ :ಜಗಳ ಮರೆತು ಒಂದಾದ ಮಂಜು-ಲೀಲಾ ಜೋಡಿ! ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯ

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/LTDCWW1OQ3Y?si=UJn774I5BsKBm8i7

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page