ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಂಬಳೋತ್ಸವಗಳಿಗೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆಯಾ?

ದಕ್ಷಿಣ ಕನ್ನಡ : Tulu Times | ಕಂಬಳದ ಮೂಲ ಕೃಷಿಯೊಂದಿಗೆ ನೇರವಾಗಿ ಜೋಡಿಸಲಾಗಿದ್ದು, ರೈತರು ತಮ್ಮ ಕೋಣಗಳನ್ನು ಶಕ್ತಿ, ವೇಗ ಮತ್ತು ಸಾಮರ್ಥ್ಯಕ್ಕೆ ತಯಾರು ಮಾಡುವ ಸಂದರ್ಭದಲ್ಲೇ ಈ ಕ್ರೀಡೆ ಹುಟ್ಟಿಕೊಂಡಿತು ಎನ್ನಲಾಗಿದೆ. ಮಳೆಗಾಲದ ಹೊಲ ಕಾರ್ಯಗಳ ನಂತರ ದೇವರಿಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಕಂಬಳವನ್ನು ಆಚರಿಸಲಾಗುತ್ತಿತ್ತು. ಕಾಲಕ್ರಮೇಣ ಇದು ಜನಪದ ಕ್ರೀಡೆ ರೂಪ ಪಡೆದು, ದೊಡ್ಡ ಮಟ್ಟದ ಹಬ್ಬವಾಗಿ ಪರಿಣಮಿಸಿ, ದೊಡ್ಡ ಹಬ್ಬವನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಭ್ರಮಿಸುತ್ತಾರೆ. ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿ ಭಾಗಗಳಲ್ಲೂ ನಡೆಯುವ ಕಂಬಳವು ಶತಮಾನಗಳ ಇತಿಹಾಸ ಹೊಂದಿರುವ ವಿಶೇಷ ಜಾನುವಾರು ಕ್ರೀಡೆಯಾಗಿದೆ. ಮಣ್ಣು ತುಂಬಿದ ಹೊಲದಲ್ಲಿ, ಜೋಡಿ ಕೋಣಗಳನ್ನು ಓಡಿಸುವ ಮೂಲಕ ನಡೆಯುವ ಈ ಕ್ರೀಡೆ ಕೇವಲ ಮನರಂಜನೆ ಮಾತ್ರವಲ್ಲ; ಅದು ಕರಾವಳಿಯ ಕೃಷಿ ಸಂಸ್ಕೃತಿ, ಭಕ್ತಿ, ಮತ್ತು ಗ್ರಾಮೀಣ ಬದುಕಿನ ಉತ್ಸವವಾಗಿ ಹೊರಹೊಮ್ಮುವುದು ವಿಶೇಷ.

ಕಂಬಳೋತ್ಸವಗಳಿಗೆ ತಲಾ ರೂ.5 ಲಕ್ಷದಂತೆ ಒಟ್ಟು ರೂ.50 ಲಕ್ಷ ;

ನಮ್ಮ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಡೆಯುವ ಈ ಕಂಬಳದ ಬಗ್ಗೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿನ ಪ್ರಶೋತ್ತರ ಕಲಾಪದಲ್ಲಿ ಶಾಸಕ ಅಶೋಕ್ ರೈ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್‌ ಅವರ ಉತ್ತರ ನೀಡಿದ್ದಾರೆ. ಜಿಲ್ಲಾ ಕಂಬಳ ಸಮಿತಿಯಿಂದ ಅನುಮೋದನೆಗೊಂಡ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 23 ಕಂಬಳೋತ್ಸವಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಈ ಮೂಲಕ ಹೇಳಲಾಗಿದೆ. 2025-26ನೇ ಸಾಲಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲಾಗುವ ಕಂಬಳ ಉತ್ಸವಗಳಿಗೆ ಅನುದಾನ ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿವೆ. ಇದಕ್ಕೆ ಸರ್ಕಾರದಿಂದ ಅನುಮೋದನೆ ನೀಡಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಕಡತ ರವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಮಂಗಳೂರು, ನರಿಂಗಾಣ, ಮೂಡಬಿದ್ರೆ, ಐಕಳ, ಜಪ್ಪು, ಪುತ್ತೂರು, ಬಂಟ್ವಾಳ, ಉಪ್ಪಿನಂಗಡಿ ಮತ್ತು ವೇಣೂರಿನಲ್ಲಿ ಆಯೋಜಿಸಿದ್ದ ಕಂಬಳೋತ್ಸವಗಳಿಗೆ ತಲಾ ರೂ.5 ಲಕ್ಷದಂತೆ ಒಟ್ಟು ರೂ.50 ಲಕ್ಷಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಶಾಸಕರುಗಳ ಅಭಿಪ್ರಾಯದಂತೆ 23 ಕಂಬಳೋತ್ಸವಗಳಿಗೆ ಅನುದಾನ ಬಿಡುಗಡೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Has action been taken to release funds for the Kambalotsava? – ತುಳು ಟೈಮ್ಸ್

ಇದನ್ನೂ ಓದಿ :ನೀವು ಅತಿಯಾಗಿ ಚಿಂತೆ ಮಾಡ್ತಾ ಕೂರುವಿರಾ? ಹುಷಾರು ನಿಮಗೆ ಬೇಗ ವಯಸ್ಸಾಗುತ್ತೆ!

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/e1543EY8Q90?si=LqsxVk1x8SkCerXJ

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page