ಜೀವನಶೈಲಿ: Tulu Times | ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಪ್ರಮುಖ ಘಟ್ಟ. ಇದರಲ್ಲಿ ಮದುವೆಯಾದ ಪ್ರತಿಯೊಬ್ಬ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಮುಂದಿನ ಜೀವನದ ಅರ್ಥವನ್ನು ತಿಳಿದುಕೊಂಡು ಮುನ್ನಡೆಯಬೇಕು. ಅದರಲ್ಲೂ ಮದುವೆಯಾದ ಬಳಿಕ ಗಂಡು ಮಕ್ಕಳು ಹೆಂಡತಿಯ ಜೊತೆಗೆ ಹೇಗೆ ಬಾಳಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕಲ್ವಾ..?
ಇಡೀ ಕುಟುಂಬ ನಿಭಾಯಿಸುವವಳು ಹೆಣ್ಣು..!
ಬಹುತೇಕ ಮಂದಿ ಮದುವೆಯಾದ ಬಳಿಕ ಪುರುಷರು ಒಂದಲ್ಲ ಒಂದು ಕಾರಣಗಳಿಂದಾಗಿ ಜವಾಬ್ದಾರಿ ಹೊತ್ತು ಸಾಗಬೇಕಾಗುತ್ತದೆ. ತನ್ನನ್ನು ನಂಬಿಕೊಂಡು ಬಂದಂತಹ ಹೆಣ್ಣು ಮಗಳನ್ನು ಕಾಪಾಡಿಕೊಂಡು ಆಕೆಯ ಜೊತೆಗೆ ಸುಂದರವಾದಂತಹ ಸಂಸಾರವನ್ನು ಸಾಗಿಸಬೇಕು. ಒಂದು ಮನೆ ಅಂದ್ರೆ ಅಲ್ಲಿ ಸಾಕಷ್ಟು ವಿಭಿನ್ನ ಮನಸ್ಥಿತಿಯವರು ಇರುತ್ತಾರೆ. ಹೀಗಾಗಿ, ಮದುವೆಯಾದ ನಂತರ ಕೇವಲ ಹೆಣ್ಣು ಮಕ್ಕಳು ಅಲ್ಲದೆ ಗಂಡು ಮಕ್ಕಳು ಕೂಡ ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ತನ್ನ ಫ್ಯಾಮಿಲಿ ಎನ್ನುವಂತಹ ಪ್ರೀತಿಯನ್ನು ಇಟ್ಟುಕೊಂಡಿರಬೇಕು.
ಗಂಡ ಹೆಂಡತಿ ಇಬ್ಬರೂ ಜವಾಬ್ದಾರಿಯುತರಾಗಬೇಕು..!
ಏನಿದ್ದರೂ ಅವಳು ಮನೆಯಲ್ಲಿ ಇರುತ್ತಾಳೆ ಅಥವಾ ತನ್ನ ತಂದೆ ತಾಯಿಯನ್ನು ಆಕೆ ನೋಡಿಕೊಳ್ಳಲು ಅಷ್ಟೇ ಸೀಮಿತ ಎನ್ನುವಂತಹ ಮನಸ್ಥಿತಿಯನ್ನು ನೀವು ಬಿಟ್ಟುಬಿಡಬೇಕು. ಅದು ಖಂಡಿತವಾಗಲೂ ತಪ್ಪು. ಯಾಕೆಂದರೆ ಮನೆಯ ಜವಾಬ್ದಾರಿ ಅಂದ್ರೆ ಕೇವಲ ಹೆಣ್ಣು ಮಾತ್ರ ಅಲ್ಲ ಪುರುಷರು ಕೂಡ ಹೆಗಲು ಕೊಡಬೇಕಾಗುತ್ತದೆ. ಕೆಲವು ಪುರುಷರು ಮನೆಯಿಂದ ದೂರವೇ ಇರುತ್ತಾರೆ. ಇವರಿಗೆ ಮನೆಯ ಕಷ್ಟಗಳು ತಿಳಿಯುವುದಿಲ್ಲ. ಪ್ರತಿ ಬಾರಿ ತನ್ನ ಜೀವನವೇ ಮುಖ್ಯ.. ನಾನೊಬ್ಬನೇ ಶ್ರೇಷ್ಠ ಎನ್ನುವಂತ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ, ಇವರಿಗೆ ಕುಟುಂಬದ ಬಗ್ಗೆ ಸಹನೆ ಇರುವುದಿಲ್ಲ. ಎಲ್ಲವನ್ನು ಕೂಡ ನನ್ನ ತಂದೆ ತಾಯಿ ಮಾಡಿ ನೋಡಿಕೊಳ್ತಾರೆ ಎನ್ನುವಂತಹ ನಂಬಿಕೆಯಿಂದ ಹೊರಗಿನ ಪ್ರಪಂಚದಲ್ಲಿ ಮಗ್ನರಾಗಿರುತ್ತಾರೆ.
ಗಂಡನೇ ಮನೆಯಿಂದ ದೂರ ಇದ್ರೆ ನೆಮ್ಮದಿ ಎಲ್ಲಿ..?
ಅನೇಕ ಜನ ಪುರುಷರು ವಯಸ್ಸಾದ ಅಥವಾ ಮದುವೆಯಾದ ನಂತರವೂ ಕೂಡ ತನ್ನ ತಂದೆ ತಾಯಿಯನ್ನೇ ಆಶ್ರಯಿಸುತ್ತಾರೆ. ತನ್ನ ತಂದೆ ತಾಯಿ ದುಡಿಯುತ್ತಾರೆ. ನಾನು ಏನು ಮಾಡುವುದಿಲ್ಲ. ನನಗೆ ಎಷ್ಟೇ ಸಾಕು ಎನ್ನುವ ಅಭಿಪ್ರಾಯದಲ್ಲಿರುತ್ತಾರೆ. ಇದರಿಂದ ಅವರನ್ನು ನಂಬಿಕೊಂಡು ಬಂದಂತಹ ಹೆಣ್ಣು ಮಕ್ಕಳು ಕಣ್ಣೀರಲಿ ಕೈ ತೊಳೆಯುತ್ತಾರೆ. ಮುಂದೊಂದು ದಿನ ಹೆಣ್ಣು ಮಕ್ಕಳು ತನ್ನ ತಂದೆಯ ಮನೆಗೆ ಕಾಲಿಡುತ್ತಾರೆ. ತನ್ನದೇ ಆದಂತಹ ಕನಸುಗಳನ್ನು ಬೆನ್ನೇರುತ್ತಾ ಹೋಗುತ್ತಾರೆ. ಹೀಗಾಗಿ ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದು ಮುಖ್ಯವಾಗುತ್ತದೆ. ಯಾಕೆಂದರೆ ಎಲ್ಲರಿಗೂ ಕೂಡ ಬದುಕುವ ಹಕ್ಕಿದೆ.
ಹೆಣ್ಣು ಗಂಡು ಇಬ್ಬರಿಗೂ ಸುಂದರವಾಗಿ ಬದುಕುವ ಹಕ್ಕಿದೆ!
ಗಂಡ ಹೆಂಡತಿ ಅಂದರೆ ಇಬ್ಬರೂ ಕೂಡ ಕೈಜೋಡಿಸಿ ಜೀವನವನ್ನು ಮುನ್ನಡೆಸಬೇಕಾಗುತ್ತದೆ. ಯಾರದೋ ಆಶ್ರಯದೊಂದಿಗೆ ತಮ್ಮ ಜೀವನ ನಡೆಯುತ್ತದೆ ಎನ್ನುವಂತಹ ತಪ್ಪು ಕಲ್ಪನೆ ಬೇಡ. ಇದರಿಂದ ನಿಮ್ಮನ್ನು ಮದುವೆಯಾದ ಹೆಣ್ಣು ಮಕ್ಕಳಿಗೂ ನೆಮ್ಮದಿ ಕೆಡುತ್ತದೆ. ಗಂಡು ಮಕ್ಕಳಿಗೆ ಜೀವನದಲ್ಲಿ ಜವಾಬ್ದಾರಿ ಎನ್ನುವುದು ಶುರುವಾಗದೇ ಇಲ್ಲವಾದಲ್ಲಿ ತಾನು ಮದುವೆಗಿಂತ ಮುಂಚೆ ಹೇಗಿದ್ದೀನೋ ಅದೇ ರೀತಿಯಾಗಿ ಮದುವೆ ಆದ ಬಳಿಕವೂ ಕೂಡ ಎಲ್ಲೆಂದರೆಲ್ಲಿ ಓಡಾಡಿಕೊಂಡು ಸ್ನೇಹಿತರ ಸಂಗವನ್ನು ಬೆಳೆಸಿಕೊಂಡು ಕೆಟ್ಟ ಹಾದಿಗಳಿಗೆ ಪುರುಷರು ಹೆಜ್ಜೆ ಇಡುತ್ತಾರೆ. ಹೀಗಾಗಿ ನಿಮ್ಮ ಸುತ್ತಮುತ್ತ ಇಂತಹ ವಾತಾವರಣ ಇದೆಯಾ ಅಥವಾ ಈ ರೀತಿಯಾದಂತಹ ಪುರುಷರು ಇದ್ದಾರಾ ಯೋಚಿಸಿ.
What are the duties that men must strictly follow after marriage?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











