ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇವತ್ತಾದ್ರೂ ಇಂಡಿಗೋ ವಿಮಾನ ಸಮಸ್ಯೆಗೆ ಪರಿಹಾರ ಸಿಕ್ಕಿದೆಯಾ ?

ಬೆಂಗಳೂರು : Tulu Times | ಇಂದಿಗೂ ಕೂಡಾ ಮುಗಿಯುವಂತೆ ಕಾಣುತ್ತಿಲ್ಲ ಇಂಡಿಗೋ ವಿಮಾನದ ಸಮಸ್ಯೆ. ಒಂದು ವಾರಕ್ಕಿಂತಲೂ ಹೆಚ್ಚು ಪ್ರಯಾಣಿಕರು ಇಲ್ಲಿ ಅನುಭವಿಸಿದ ಕಷ್ಟಗಳು ಮತ್ತೆ ಅವರ ಆಕ್ರೋಶಗಳು ಇನ್ನೂ ಪರಿಹಾರಕ್ಕೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಂತೆ ಕಾಣುತ್ತಿಲ್ಲ. ಇಂದು 126 ಇಂಡಿಗೋ ಫ್ಲೈಟ್ ಗಳು ಕ್ಯಾನ್ಸಲ್ ಆಗಿರುವುದು ವರದಿಯಾಗಿದೆ.

5 ಗಂಟೆ ಮುಂಚಿತವಾಗಿಯೇ ಪ್ರಯಾಣಿಕರಿಗೆ ಸಂಸ್ಥೆಯ ಮಾಹಿತಿ ;

ಈಗಾಗಲೇ ವಿಮಾನ ಕ್ಯಾನ್ಸಲ್ ಆಗಿರುವ ಬಗ್ಗೆ ಪ್ರಯಾಣಿಕರಿಗೆ ಮಾಹಿತಿಯನ್ನು ಕೊಡಲಾಗಿದ್ದು, ಇಲ್ಲಿ ಪ್ರಯಾಣಿಕರು ಸಮಯ ವ್ಯರ್ಥ ಮಾಡದಂತೆ 5 ಗಂಟೆ ಮುಂಚಿತವಾಗಿಯೇ ಪ್ರಯಾಣಿಕರಿಗೆ ಸಂಸ್ಥೆಯು ಮಾಹಿತಿಯನ್ನು ನೀಡಿರುವುದು ತಿಳಿದುಬಂದಿದೆ. ಅದು ಮತ್ತೊಂದು ರೀತಿಯ ಆಕ್ರೋಶಕ್ಕೆ ಕಾರಣವಾಗುತ್ತದೆ ಎಂಬ ನಿಟ್ಟಿನಲ್ಲಿ ಮುಂಚಿತವಾಗಿಯೇ ಮಾಹಿತಿಯನ್ನು ನೀಡಿರುವ ಕೆಲಸವಾಗಿದೆ. ಈ ಕಾರಣ ಈ ಸಂದೇಶವನ್ನು ಅರಿತ ಸಾಕಷ್ಟು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದು ಕಾಯುವ ಪರಿಸ್ಥಿತಿ ಇವತ್ತು ನಡೆದಿಲ್ಲ.

ಇಂಡಿಗೊ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ದೆಹಲಿ ವಿಮಾನ ನಿಲ್ದಾಣ ಹೇಳಿದೆ. ಅಲ್ಲದೇ ಡಿಸೆಂಬರ್ ಆರರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಆದರೆ, ಭಾನುವಾರ (ಡಿ .7) ಸೇವೆಯಲ್ಲಿ ಸ್ವಲ್ಪಮಟ್ಟಿನ ಸುಧಾರಣೆಯನ್ನು ಕಂಡಿದೆ. ಅನೇಕ ವಿಮಾನಗಳು ರದ್ದಾದ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡಿದ ಸಮಯದಲ್ಲಿ, ಇಂಡಿಗೋ ಸಿಬ್ಬಂದಿಗಳು, ಪ್ರಯಾಣಿಕರು ಜಗಳಕ್ಕೆ ಇಳಿದಿದ್ದಾರೆ. ಈಗ ಆಗುತ್ತಿರುವ ಎಲ್ಲಾ ಬಿಕ್ಕಟ್ಟುಗಳು ಡಿಸೆಂಬರ್ ಹತ್ತರೊಳಗೆ ಸರಿದಾರಿಗೆ ಬರುವ ವಿಶ್ವಾಸವನ್ನು ಇಂಡಿಗೋ ಆಡಳಿತ ಮಂಡಳಿ ನೀಡಿದೆ. ಸಮಸ್ಯೆ ಆರಂಭವಾದ, ಮೂರು ದಿನಗಳ ಸಂಸ್ಥೆಯ ಸಿಇಒ ಪ್ರಯಾಣಿಕರ ಕ್ಷಮೆಯಾಚಿಸಿರುವುದು ಕಂಡುಬಂದಿದೆ.

Has the Indigo flight problem been resolved yet? -ತುಳು ಟೈಮ್ಸ್

ಇದನ್ನೂ ಓದಿ :ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಖುಲಾಸೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/bVV7PCunwKI?si=-ARE59rh7pfpy5-Q

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page