ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಖುಲಾಸೆ

 ಕರ್ನಾಟಕ: Tulu Times | 2017 ರಲ್ಲಿ  ನಟಿಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ  ಮಲಯಾಳಂ ನಟ ದಿಲೀಪ್ ಅವರನ್ನು ಕೇರಳ ನ್ಯಾಯಾಲಯ ಇಂದು ದೋಷಮುಕ್ತಗೊಳಿಸಿದೆ. ಎರ್ನಾಕುಲಂ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ ವರ್ಗೀಸ್ ತೀರ್ಪು ಪ್ರಕಟಿಸಿದರು.

ಇದನ್ನೂ ಓದಿ:‌ ರಾಜ್ಯಾದ್ಯಂತ ಮೈಕೊರೆವ ಚಳಿ; ಕರಾವಳಿಯಲ್ಲಿ ಹೆಚ್ಚಿದ ತಾಪಮಾನ

ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ, ಆರು ಆರೋಪಿಗಳ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಪಿತೂರಿ, ಅಪಹರಣ,ಇತರ ಅಪರಾಧಗಳನ್ನು ಎಸಗಿದ್ದಾರೆ ಎಂದು ಘೋಷಿಸಿದರು.  ನಟ ದಿಲೀಪ್ ಅವರನ್ನು ಭಾರತೀಯ ದಂಡ ಸಂಹಿತೆಯಡಿಯಲ್ಲಿ ಕ್ರಿಮಿನಲ್ ಪಿತೂರಿ, ಅಕ್ರಮ ಬಂಧನ, ದೌರ್ಜನ್ಯಕ್ಕೆ ಒಳಗಾದ ಹಲ್ಲೆ, ಅಪಹರಣ, ವಿವಸ್ತ್ರಗೊಳ್ಳಲು ಯತ್ನಿಸುವುದು, ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಹೊರಿಸಲಾಯಿತು.

ಇದನ್ನೂ ಓದಿ:‌ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್‌ ಆಗಿದ್ದ ಅಭಿಷೇಕ್ ಔಟ್ !

ಏನಿದು ಪ್ರಕರಣ..?

25 ಫೆಬ್ರವರಿ 17, 2017 ರಂದು ಕೊಚ್ಚಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪ್ರಮುಖ ಮಲಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಿದೆ. ತ್ರಿಶ್ಯೂರ್‌ನಿಂದ ಕೊಚ್ಚಿಗೆ ನಟಿ ಶೂಟಿಂಗ್‌ಗೆ ತೆರಳುತ್ತಿದ್ದರು. ಈ ವೇಳೆ ನಟಿ ಸಂಚರಿಸುತ್ತಿದ್ದ ಕಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದೆ, ಈ ಸಂದರ್ಭದಲ್ಲಿ ನಟಿಯ ಅಪಹರಣವಾಗಿತ್ತು. ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂದನ್ ಬಿ, ವಿಜೇಶ್ ವಿಪಿ, ಸಲೀಂ ಎಚ್, ಪ್ರದೀಪ್, ಚಾರ್ಲಿ ಥಾಮಸ್, ಸನಿಲ್ ಕುಮಾರ್ ಅಲಿಯಾಸ್ ಮೇಷ್ಟ್ರಿ ಸನಿಲ್ ಮತ್ತು ಶರತ್ ಸೇರಿದಂತೆ ಹತ್ತು ಆರೋಪಿಗಳು ಮೇಲೆ ಕೇಸ್‌ ಆಗಿತ್ತು.

ಇದನ್ನೂ ಓದಿ:‌ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ

ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಸಲಾಯಿತು,  8 ನೇ ಆರೋಪಿಯಾಗಿದ್ದ ನಟ ದಿಲೀಪ್ ಮೇಲೆ ಸಾಕ್ಷ್ಯ ನಾಶಪಡಿಸಿದ ಆರೋಪ ಇದೆ.  ಏಪ್ರಿಲ್ 2017 ರಲ್ಲಿ ಪೊಲೀಸರು ಫಸ್ಟ್ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಮುಖ ಆರೋಪಿ ಪಲ್ಸರ್ ಸುನಿ ಜೈಲಿನಿಂದ ಪತ್ರ ಕಳುಹಿಸಿದ್ದಾನೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು. ಜುಲೈನಲ್ಲಿ ದಿಲೀಪ್ ಅವರನ್ನು ಬಂಧಿಸಲಾಯಿತು.

malayalam actor dileep sexual assault case verdict- ತುಳುಟೈಮ್ಸ್

ಇದನ್ನೂ ಓದಿ:‌ ಜಿಎಸ್ ಟಿ ಕಡಿತ : ರಾಜ್ಯಕ್ಕೆ 18 ಕೋಟಿ ರೂ. ನಷ್ಟ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page