ಬ್ರೇಕಿಂಗ್ ನ್ಯೂಸ್
ಕರ್ನಾಟಕ

ದಿನವಿಡೀ ನೆಗೆಟಿವ್ ಯೋಚನೆಗಳಿಂದ ತಲೆ ಕೆಟ್ಟೋಗಿದ್ಯಾ..ಇಲ್ಲಿದೆ ನೆಮ್ಮದಿಯ ದಾರಿ!

ಜೀವನಶೈಲಿ: Tulu Times | ಮನುಷ್ಯರಾದ ನಮಗೆ  ಭಾವನೆಗಳ ಜೊತೆಗೆ ಜೀವನ ಮಾಡುತ್ತೇವೆ. ಆದ್ರೂ ಜೀವನದ ಜಂಜಾಟದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕವಾಗಿ ನಾವು ನೆಮ್ಮದಿ ಕಳೆದುಕೊಳ್ಳುತ್ತೇವೆ. ಅದರಲ್ಲೂ ನೆಗೆಟಿವ್ ಯೋಚನೆಗಳು ನಮ್ಮ ತಲೆಯಲ್ಲಿ ಸುತ್ತುತ್ತಾ ಇರುತ್ತವೆ. ಹಾಗಾದ್ರೆ ನೀವು ದಿನವಿಡೀ ನೆಗೆಟಿವ್ ಯೋಚನೆಗಳನ್ನು ಮಾಡುತ್ತೀರಿ ಅಂದ್ರೆ ಈ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳಿ. ಹಾಗಾದ್ರೆ ಅದು ಏನು ನೋಡೋಣ ಈ ಸ್ಟೋರಿಯಲ್ಲಿ…

ಪಾಸಿಟಿವ್‌ ಗಿಂತ ನೆಗಟಿವ್‌ ವಿಷಯವೇ ಅಟ್ರ್ಯಾಕ್ಟ್‌ ಮಾಡುತ್ತೆ!

ನಾವು ಬಹುತೇಕರು ಜೀವನದಲ್ಲಿ ಪಾಸಿಟಿವ್ ಯೋಚನೆ ಮಾಡುವುದಕ್ಕಿಂತ ಹೆಚ್ಚಾಗಿ ನೆಗೆಟಿವ್ ಅಂಶಗಳನ್ನೇ ಹೆಚ್ಚಾಗಿ ಯೋಚನೆ ಮಾಡುತ್ತೇವೆ. ಯಾರೋ ಏನೋ ಹೇಳಿದ್ರು ಅಂತ ಅದನ್ನು ಬಹಳ ನೆಗೆಟಿವ್ ಆಗಿ ಚಿಂತೆ ಮಾಡಿ, ಯೋಚನೆ ಮಾಡುತ್ತೇವೆ. ಆ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ನಮಗೆ ವ್ಯವಧಾನವೇ ಇರುವುದಿಲ್ಲ. ಹೀಗಾಗಿ ನೆಗೆಟಿವ್ ವಿಚಾರಗಳನ್ನು ನಮ್ಮ ತಲೆಯಲ್ಲಿ ನಾವು ತುಂಬಿಕೊಂಡರೆ ಜೀವನದಲ್ಲಿ ಮುಂದುವರೆಯಲು ಕಷ್ಟ. ಇದರಿಂದ, ಪ್ರತಿದಿನ ಅದೇ ರೀತಿಯಾಗಿ ನಾವು ಯೋಚನೆ ಮಾಡಲು ಶುರು ಮಾಡುತ್ತೇವೆ. ಒಳ್ಳೆಯ ವಿಚಾರಗಳಲ್ಲಿ  ಕೂಡ ನೆಗೆಟಿವ್ ಅಂಶವನ್ನೇ ಬೇಗ ಕ್ಯಾಚ್‌ ಮಾಡುತ್ತೇವೆ.

ನೆಗೆಟಿವ್‌ ಗಾಸಿಪ್‌ ಮಾಡೋರಿಂದ ದೂರವಿರಿ!

ನಮ್ಮಲ್ಲಿ ಬಹು ಬಹಳಷ್ಟು ಜನ ನೆಗೆಟಿವಿಟಿಯನ್ನೇ ಹುಡುಕಲು ಹಾತೊರೆಯುತ್ತಾ ಇರುತ್ತಾರೆ. ಇನ್ನು ನಾವು ನೆಗೆಟಿವ್ ಮಾತನಾಡುವವರ ಸಂಘ ಮಾಡಿದರೆ ನಾವು ಕೂಡ ಅವರದ್ದೇ ರೀತಿಯಾದಂತಹ ಯೋಚನೆಗಳಲ್ಲಿ ಮುಳುಗುತ್ತೇವೆ. ಇಂಥವರ ಸಂಗ ಅಷ್ಟು ಒಳ್ಳೆಯದಲ್ಲ. ಇದರಿಂದ, ನೆಗೆಟಿವ್ ವಿಚಾರಗಳನ್ನು ನಿಮ್ಮ ತಲೆಯಲ್ಲಿ ಬಿತ್ತುವಂತಹ ಜನಗಳಿಂದ ನೀವು ದೂರವಿರಿ. ಇಲ್ಲವಾದಲ್ಲಿ, ನಿಮ್ಮ ನೆಮ್ಮದಿಯನ್ನು ಹಾಳು ಮಾಡಲು ಅವರು ವಿವಿಧ ಬಗೆಯ ಗಾಸಿಪ್‌ಗಳನ್ನು ಹರಡುತ್ತಾರೆ. ನಿಮ್ಮ ಜಾಗರೂಕತೆಯಲ್ಲಿ ನೀವು ಇರಿ.

ಜಾಸ್ತಿ ಯೋಚಿಸಬೇಡಿ ವಯಸ್ಸಾಗುತ್ತೆ..!

ಲೈಫಲ್ಲಿ ಕಷ್ಟಗಳು ಯಾರಿಗೆ ಇಲ್ಲ ಹೇಳಿ.. ಎಲ್ಲರಿಗೂ ಕೂಡ ತಮ್ಮದೇ ಆದಂತಹ ಕಷ್ಟ ಇದ್ದೇ ಇರುತ್ತದೆ. ಕೆಲವರು ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ನಿಮ್ಮ ಸುತ್ತಮುತ್ತ ಇರುವಂತಹ ಜನರ ಜೊತೆಗೆ ನೀವು ವ್ಯವಹರಿಸುವಾಗ ಅಥವಾ ಮಾತನಾಡುವಾಗ ಬಹಳ ಜಾಗರೂಕರಾಗಿರಿ. ಸಾಮಾನ್ಯವಾಗಿ ಮನುಷ್ಯರು ಒಳ್ಳೆಯ ವಿಚಾರಗಳಿಗಿಂತ ಕೆಟ್ಟ ವಿಚಾರಗಳನ್ನು ಬೇಗನೆ ಅರಿತುಕೊಳ್ಳುತ್ತಾರೆ. ಅದರ ಬಗ್ಗೆ ಹೆಚ್ಚಾಗಿ ಮಾತನಾಡುತ್ತಾರೆ. ಒಳ್ಳೆಯ ವಿಷಯಗಳನ್ನು ಮಾತನಾಡುವುದೇ ಕಮ್ಮಿ. ಹೀಗಾಗಿ ನೀವು ದಿನವಿಡೀ ನೆಗೆಟಿವ್ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ಇದ್ದರೆ ನಿಮ್ಮ ಕೆಲಸ ಕಾರ್ಯಗಳು ನಿಂತು ಹೋಗುತ್ತವೆ. ಜೊತೆಗೆ ನಿಮ್ಮ ಯೋಚನಾ ಲಹರಿ ಹಾಳಾಗಿ ಹೋಗುತ್ತದೆ.  ನಿಮಗೆ ಬಹಳ ಬೇಗನೆ  ವಯಸ್ಸಾಗುತ್ತದೆ. ನಿಮ್ಮ ಯೋಚನೆಗಳಿಗೂ ಕೂಡ ವಯಸ್ಸಾಗುತ್ತದೆ.

Are you feeling overwhelmed by negative thoughts all day long? Here’s the way to peace!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page