ಜೀವನಶೈಲಿ: Tulu Times |ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ಮನೆಗಳಲ್ಲಿ ಸಂಜೆಯ ವೇಳೆ ಅಥವಾ ಬೆಳಗ್ಗೆ ದೂಫ ಹಾಕುತ್ತೇವೆ. ಇದರಿಂದ ಮನೆಯ ತುಂಬೆಲ್ಲ ಪಾಸಿಟಿವ್ ವೈಬ್ ನಾವು ಫೀಲ್ ಮಾಡುತ್ತೇವೆ. ಹಾಗಾದ್ರೆ ನಿಜಕ್ಕೂ ದೂಫ ಹಾಕುವುದರ ಪ್ರಯೋಜನವೇನು ಗೊತ್ತಾ ಈ ಸ್ಟೋರಿಯಲ್ಲಿ ಓದಿ..
ಮನೆತುಂಬ ಘಮ ಘಮ ದೂಫದ ಪ್ರಯೋಜನವೇನು..?
ಹಿಂದೂ ಸಂಪ್ರದಾಯದಲ್ಲಿ ದೂಫಕ್ಕೆ ತನ್ನದೇ ಆದಂತಹ ಮೌಲ್ಯಗಳಿವೆ. ನಿಮ್ಮ ಮನೆಗೆ ಒಮ್ಮೆ ನೀವು ಧೂಪ ಹಚ್ಚಿದರೆ ಮನೆ ತುಂಬೆಲ್ಲ ಘಮಘಮ ಪರಿಮಳವಿರುತ್ತದೆ. ಇನ್ನು ಮನೆಯಲ್ಲಿ ದೂಫ ಹಾಕಿ ಹಾಕುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.. ಜ್ಯೋತಿಷ್ಯದ ಶಾಸ್ತ್ರದಲ್ಲಿ ದೂಫದ ಬೆಳಕು ವಿಶೇಷವಾದಂತಹ ಮಹತ್ವಗಳನ್ನು ಹೊಂದಿದೆ. ಇದು ಬೆಳಕನ್ನು ನಿಯಮಿತವಾಗಿ ಮನೆಯಲ್ಲಿ ನೀಡಿದರೆ ಜೀವನದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ದೂಫ ದ್ರವ್ಯಗಳನ್ನ ಬಳಸಿದ್ರೆ ಸಾಕಷ್ಟು ನಿಯಮಗಳನ್ನು ಕೂಡ ನಾವು ಫಾಲೋ ಮಾಡಲೇಬೇಕು. ಇನ್ನು ಪ್ರತಿದಿನ ನೀವು ಧೂಪ ಹಾಕಬೇಕು ಅಂದ್ರೆ ಸಮಯ ಸಿಗುವುದಿಲ್ಲ ಅಂದರೆ ಹಬ್ಬ ಹರಿದಿನಗಳಲ್ಲಿ ಖಂಡಿತವಾಗಲೂ ನೀವು ದೂಫವನ್ನು ಹಚ್ಚಲೇಬೇಕು. ಅಮಾವಾಸ್ಯೆ ಮತ್ತು ಪೌರ್ಣಮಿಯ ದಿನದಂದು ಬೆಳಗ್ಗೆ ಮತ್ತು ಸಂಜೆ ದೀಪವನ್ನು ಹಚ್ಚಬೇಕು. ಇನ್ನು ನೀವು ದೂಫವನ್ನು ಮನೆಯಲ್ಲಿ ಇಡಬೇಕಾದರೆ ಮನೆಯನ್ನು ಮೊದಲು ಸ್ವಚ್ಛವಾಗಿರಿಸಿಕೊಳ್ಳಬೇಕು, ಮನೆ ಶುದ್ಧವಾದ ನಂತರ ಈಶಾನ್ಯ ದಿಕ್ಕಿನಲ್ಲಿ ನೀವು ದೂಫವನ್ನು ಇರಿಸಿದರೆ ಒಳ್ಳೆಯದು.
ರೋಗ ರುಜಿನ ಮಾಯ!
ಮನೆಯ ಎಲ್ಲಾ ಕೋಣೆಗಳಿಗೆ ಇದು ಹರಡುವಂತೆ ಮಾಡುತ್ತದೆ. ಮನೆಯ ಕಿಟಕಿಗಳನ್ನು ಮುಚ್ಚಿ ದೀಪವನ್ನು ಹಚ್ಚಿ. ದೇವರ ಕೊನೆಗೆ ಹೋಗಿ ದೇವರನ್ನು ಪ್ರಾರ್ಥನೆಯನ್ನು ಮಾಡಿ. ಇದರಿಂದ ನೀವು ದೇವರ ಕೃಪೆಗೆ ಪಾತ್ರರಾಗುತ್ತೀರಾ. ಇನ್ನೂ ಮನೆಯಲ್ಲಿ ದೂಫವನ್ನು ಹಚ್ಚುವುದರಿಂದ ನಿಮ್ಮ ಮನಸ್ಸು ಶಾಂತಿಗೊಳ್ಳುತ್ತದೆ. ಇನ್ನು ಮನೆಯಲ್ಲಿ ರೋಗ ರುಜಿನಗಳು ದೂರವಾಗುತ್ತವೆ. ಇನ್ನು ಗ್ರಹಗಳ ಚಲನೆಯಿಂದ ಉಂಟಾದಂತಹ ಉದ್ವೇಗ ಕೂಡ ಕಡಿಮೆಯಾಗುತ್ತದೆ.
ಮನೆಯೊಳಗೆ ಎಂಟ್ರಿ ಆದ್ರೆ ಫುಲ್ ನೆಮ್ಮದಿ..!
ಇನ್ನು ಮನೆಯಲ್ಲಿ ದೀಪ ಹಚ್ಚುವುದರಿಂದ ನಕಾರಾತ್ಮಕತೆಯು ಮನೆ ಒಳಗೆ ಎಂಟ್ರಿ ಕೊಡುವುದಿಲ್ಲ. ಮಂತ್ರಗಳನ್ನು ಮಾಡಿಸಿದ್ರೆ ಅವೆಲ್ಲವನ್ನು ಕೂಡ ದೂಫ ದೂರ ತಳ್ಳುತ್ತದೆ. ಸಾಕಷ್ಟು ಜನರಿಗೆ ಮನೆಯಲ್ಲಿ ವಾಸ್ತುದೋಷವಿರುತ್ತದೆ. ಇಂತಹ ಸಮಸ್ಯೆ ಇದ್ದಲ್ಲಿ, ಇವೆಲ್ಲವುಗಳಿಂದ ಮುಕ್ತಿ ಪಡೆಯಲು ನೀವು ಮನೆಯಲ್ಲಿ ದೂಫವನ್ನು ಸುಡಬೇಕು. ಇದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಹಾದಿಗಳು ತೆರೆದುಕೊಳ್ಳುತ್ತವೆ. ಇನ್ನು ಶನಿ ದೋಷ ಇದ್ದರೆ, ಅವೆಲ್ಲ ಕೂಡ ದೂಫದಿಂದ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.
Is this a sign that the house might have been blackmagi? Everything will be cleared by applying dhoop!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











