ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪೆಪ್ಸ್ ಇಂಡಿಯಾ ಲಿಮಿಟೆಡ್ ಕಂಪೆನಿಗೆ 20 ವರ್ಷದ‌ ಸಂಭ್ರಮ

ಪೆಪ್ಸ್ ಕಂಪೆನಿ : Tulu Times | ಪೆಪ್ಸ್ ಇಂಡಿಯಾ ಲಿಮಿಟೆಡ್ ಭಾರತದಲ್ಲಿ ನಿದ್ರೆಯ ಗುಣಮಟ್ಟವನ್ನು ಪರಿವರ್ತನೆಗೊಳಿಸಿದ ಪ್ರಮುಖ ಮ್ಯಾಟ್ರೆಸ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದೆ. ಮ್ಯಾಟ್ರೆಸ್ ತಂತ್ರಜ್ಞಾನ, ಗುಣಮಟ್ಟ, ಹಾಗೂ ಆರಾಮದಾಯಕ ನಿದ್ರೆಗೆ ಬೇಕಾದ ಉತ್ಪನ್ನಗಳನ್ನು ದೇಶದಾದ್ಯಂತ ಮನೆಗಳಿಗೆ ತಲುಪಿಸುವಲ್ಲಿ ಈ ಕಂಪನಿಯ ಪಾತ್ರ ಮಹತ್ವದ್ದು. ಇದೀಗ ಪೆಪ್ಸ್ ಕಂಪೆನಿಗೆ 20 ವರ್ಷದ ಸಂಭ್ರಮ. ಡಿ.16 ರಂದು ಈ ಕಂಪೆನಿಯ ವಾರ್ಷಿಕೋತ್ಸವ ನಡೆಯಲಿದೆ. ನಾವು ನಿಮ್ಮ ಕನಸನ್ನು ನನಸು ಮಾಡುವವರು ಎಂದು ಪೆಪ್ಸ್ ಇಂಡಿಯಾ ಲಿಮಿಟೆಡ್ ಎಂಡಿ, ರಾಮ್ ಹೇಳಿಕೆ ನೀಡಿದ್ದಾರೆ. ಇವರ ಹಾಸಿಗೆಗಳು ಇಎಮ್ ಐ ಜೊತೆಗೆ ಉತ್ತಮ ರಿಯಾಯಿತಿಯಲ್ಲಿಯೂ ಜನರಿಗೆ ತಲುಪುತ್ತವೆ.

ದೇಶದ ಹಲವಾರು ರಾಜ್ಯಗಳಲ್ಲಿ ಡೀಲರ್ ನೆಟ್ವರ್ಕ್ ;

ಶುರುವಾದ ದಿನದಿಂದಲೇ ಕಂಪನಿಯ ಗುರಿಯು, ಭಾರತೀಯ ಗ್ರಾಹಕರಿಗೆ ಅಂತರರಾಷ್ಟ್ರೀಯ ಮಟ್ಟದ ಮ್ಯಾಟ್ರೆಸ್‌ಗಳನ್ನು ತಯಾರಿಸುವುದು. ಇಂದು ಪೆಪ್ಸ್ ದೇಶದ ಪ್ರಮುಖ ಸ್ಪ್ರಿಂಗ್ ಮ್ಯಾಟ್ರೆಸ್ ಉತ್ಪಾದಕರಲ್ಲಿ ಒಂದಾಗಿ ಬೆಳೆದಿದ್ದು, ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶ್ವಾಸಾರ್ಹ ಸ್ಥಾನ ಪಡೆದಿದೆ. ಈ ಕಂಪೆನಿಯಿಂದ ಕೊಡಲ್ಪಡುವ ಪ್ರಾಡಕ್ಟ್ ಮೃದು, ಆರಾಮದಾಯಕ ಹಾಗೂ ದೀರ್ಘಕಾಲದ ಬಳಕೆಗೆ ತಕ್ಕ ರಚನೆಯದ್ದಾಗಿದ್ದು, ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳ ಬಳಕೆಯನ್ನು ಮಾಡಲಾಗುತ್ತದೆ. ದೇಶದ ಹಲವಾರು ರಾಜ್ಯಗಳಲ್ಲಿ ಡೀಲರ್ ನೆಟ್ವರ್ಕ್ ಹೊಂದಿದ್ದು, ಮ್ಯಾಟ್ರೆಸ್ ಮಾರುಕಟ್ಟೆಯಲ್ಲಿ “ಪ್ರೀಮಿಯಂ ಬ್ರ್ಯಾಂಡ್” ಆಗಿ ಗುರುತಿಸಿಕೊಂಡಿದೆ.

ಈ ಕಂಪೆನಿಯು ಬೇಡಿಕೆಯ ಪ್ರಕಾರ ವಿವಿಧ ಬೆಲೆ ಹಾಗೂ ವಿನ್ಯಾಸಗಳಲ್ಲಿ ಉತ್ಪನ್ನಗಳನ್ನು ನೀಡುತ್ತಿದೆ. ಹಲವಾರು ಹೋಟೆಲ್, ರೆಸಾರ್ಟ್ ಮತ್ತು ಸಂಸ್ಥೆಗಳಿಗೂ ಪೂರೈಕೆ ಮಾಡುತ್ತದೆ. ಪೆಪ್ಸ್‌ ಸಂಸ್ಥೆ ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳನ್ನು ಅನುಸರಿಸಲು ಆದ್ಯತೆ ನೀಡಿದೆ. ಗ್ರಾಹಕರ ನಿದ್ರೆಯ ಗುಣಮಟ್ಟ ಸುಧಾರಿಸುವುದೇ ತನ್ನ ದೀರ್ಘಕಾಲದ ಗುರಿ ಎಂದು ಕಂಪನಿ ನಂಬಿದೆ. Peps India Limited celebrates 20 years – ತುಳು ಟೈಮ್ಸ್

ಇದನ್ನೂ ಓದಿ :RBI ನಿಂದ 25 ಬೇಸಿಸ್ ಪಾಯಿಂಟ್ ರೆಪೋ ದರ ಕಡಿತ

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/dOL6osnuj0U?si=Gegoqzsp73S9-fm0

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page