ಧಾರವಾಡ : Tulu Times | ಇತ್ತೀಚಿನ ವರ್ಷಗಳಲ್ಲಿ ಡ್ರಗ್ಸ್ ಸೇವನೆ ದೇಶದ ಅನೇಕ ಭಾಗಗಳಲ್ಲಿ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವುದು ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ವಿಶೇಷವಾಗಿ ಯುವಜನರು ಮತ್ತು ವಿದ್ಯಾರ್ಥಿ ಸಮುದಾಯ ಡ್ರಗ್ಸ್ ಬಲೆಗೆ ಬೀಳುತ್ತಿರುವುದು ಕುಟುಂಬಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜದ ಸ್ಥಿರತೆಗೆ ದೊಡ್ಡ ಧಕ್ಕೆಯನ್ನುಂಟು ಮಾಡಿದೆ.
ಡ್ರಗ್ಸ್ನ ಅಪಾಯಗಳ ಬಗ್ಗೆ ಸರಿಯಾದ ಶಿಕ್ಷಣವಿಲ್ಲದೆ ತಪ್ಪು ಕಲ್ಪನೆಗಳು ಯುವ ಮನಸ್ಸನ್ನು ದಾರಿತಪ್ಪಿಸುತ್ತವೆ. ಅಧ್ಯಯನ, ಉದ್ಯೋಗ, ಕುಟುಂಬ ಸಮಸ್ಯೆಗಳ ಒತ್ತಡದಿಂದ ತಾತ್ಕಾಲಿಕ ರಿಲೀಫ ಬ”ಗಾಗಿ ಯುವಕರು ಡ್ರಗ್ಸ್ ಅನ್ನು ಆಯ್ಕೆಮಾಡುವುದು ಹೆಚ್ಚಾಗಿದೆ.ನಗರ ಪ್ರದೇಶಗಳಲ್ಲಿ ಡ್ರಗ್ಸ್ ಲಭ್ಯತೆ ಸುಲಭವಾಗಿರುವುದು ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತಿದೆ.
ಇದೀಗ ಹುಬ್ಬಳ್ಳಿ, ಧಾರವಾಡ ದಲ್ಲಿ ಡ್ರಗ್ಸ್ ಸೇವನೆ ಹೆಚ್ಚಾಗ್ತಾ ಇದೆ. ಹದಿಹರೆಯ ಯುವಕರಿಂದಲೇ ಡ್ರಗ್ಸ್ ಸೇವನೆ ಹೆಚ್ಚಾಗುತ್ತಿದೆ. ಒಂದೇ ವರ್ಷದಲ್ಲಿ ಆರು ಬಾರಿ ಡ್ರಗ್ಸ್ ಸೇವನೆ ಮಾಡುವವರ ಮೇಲೆ ಪೋಲಿಸರು ನಿಗಾ ವಹಿಸಿದ್ದಾರೆ. ಇದರ ಜೊತೆ ಮೆಡಿಕಲ್ ಟೆಸ್ಟ್ ಕೂಡಾ ನಡೆಸಲಾಗಿತ್ತು. ಕಳೆದ ವರ್ಷ 90 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಆಗಿದ್ರೆ, ಈ ವರ್ಷ ಅಂದ್ರೆ 2025 ರಲ್ಲಿ 120 ಕೋಟಿ ಮೌಲ್ಯದ ಮಾದಕವಸ್ತುಗಳು ಸೀಜ್ ಆಗಿವೆ. ಒಟ್ಟು 213 ಪ್ರಕರಣಗಳು ದಾಖಲಾಗಿವೆ. ಇನ್ನೂರಕ್ಕಿಂತ ಹೆಚ್ಚು ಆರೋಪಗಳನ್ನು ಬಂಧಿಸಲಾಗಿದೆ.
ಡ್ರಗ್ಸ್ ಮಾಫಿಯಾ ಹೆಚ್ಚಾಗುತ್ತಿರುವ ಹಿನ್ನಲೆ ಪೋಲಿಸ ಹಾಗೂ ಕಾನೂನು ಇನ್ನೂ ಕಠಿಣ ಕ್ರಮ ವಹಿಸುವುದು ಉತ್ತಮ. ಪ್ರತೀ ಸಾರಿ ಏರಿಕೆಯತ್ತ ಸಾಗುತ್ತಿರುವ ನಮ್ಮ ನಾಡಿನ ಡ್ರಗ್ಸ್ ಸೇವಿತರ ಆರೋಗ್ಯ ದೃಷ್ಟಿಯಿಂದಾದರೂ, ಯುವಜನರ ಏಳಿಗೆಯತ್ತ ಗಮನ ಹರಿಸುವ ಸಲುವಾಗಿ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ಬಂದ್ ಮಾಡೋ ಕೆಲಸಕ್ಕೆ ಮಾಧ್ಯಮವೂ ಸಹಕರಿಸಬೇಕಾಗುತ್ತದೆ. Seizure of drugs worth Rs 120 crore in 2025 – ತುಳು ಟೈಮ್ಸ್
ಇದನ್ನೂ ಓದಿ :ಪದೇ ಪದೇ ಎಲ್ಲರೂ ನಿಮಗೆ ಅವಮಾನ ಮಾಡುತ್ತಿದ್ದಾರಾ..? ಹಾಗಾದ್ರೆ ನೀವೇ ಜಾಣರು!
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/dOL6osnuj0U?si=Gegoqzsp73S9-fm0











