ಸಿನೆಮಾ : Tulu Times | ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ ಹೆಸರು ಯಶ್. ತಮ್ಮ ದುಡಿಮೆ, ದೃಢ ಸಂಕಲ್ಪ ಮತ್ತು ವಿಶಿಷ್ಟ ಅಭಿನಯ ಶೈಲಿಯಿಂದ ಅವರು ಇಂದು ದೇಶದಾದ್ಯಂತ ಪರಿಚಿತರಾಗಿದ್ದು, ಸಾಕಷ್ಟು ಅಭಿಮಾನಗಳ ಪ್ರೀತಿಯನ್ನು ಗಳಿಸಿದ್ದಾರೆ. ಹೀಗಿರುವಾಗ ನಟ ಯಶ್ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲು ತಯಾರಾಗಿದ್ದಾರೆ.
ಹೌದು…! ಬರೋಬ್ಬರಿ ನಾಲ್ಕು ವರ್ಷಗಳ ನಂತರ ನಟ ಯಶ್ ತನ್ನ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಏಕೆಂದರೆ ಈ ಸಲದ ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ಫ್ಯಾನ್ಸ್ ಗಳ ಜೊತೆ ಮಾಡಬೇಕೆಂದುಕೊಂಡಿದ್ದಾರೆ. ಆದರೆ 2026 ರಲ್ಲಿ ಅಂದ್ರೆ ಮುಂಬರುವ ಹೊಸ ವರ್ಷದಲ್ಲಿ ಯಶ್ ನಟನೆಯ ಎರಡು ಚಿತ್ರಗಳು ತೆರೆ ಕಾಣಲಿವೆ ಎಂದು ವರದಿಯಾಗಿವೆ.
ಯಶ್ ನಟನೆಯಲ್ಲಿ 2026 ಮಾರ್ಚ್ 19ಕ್ಕೆ ಟಾಕ್ಸಿಕ್ ಚಿತ್ರ ಬಿಡುಗಡೆಯಾದರೆ, ನವೆಂಬರ್ 8ಕ್ಕೆ ರಾಮಾಯಣ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿ ಸಿನಿಮಾಗಳ ಪ್ರಚಾರವನ್ನು ಮಾಡಲು ಯಶ್ ಅಭಿಮಾನಿಗಳ ಮುಂದೆ ಬರಲೇಬೇಕಾಗುತ್ತದೆ. ಬೆಂಗಳೂರಿನ ದೊಡ್ಡ ಮೈದಾನ ಒಂದರಲ್ಲಿ ಯಶ್ ನ ಬರ್ತಡೇ ನಡೆಯುವ ಅಂದಾಜಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ಬಾರಿ ಯಶ್ ನ ಹುಟ್ಟು ಹಬ್ಬಕ್ಕೆ ನಟನ ಕಟೌಟ್ ಅನ್ನು ಇರಿಸಲು ಹೋಗಿದ್ದ ಯುವಕರು ವಿದ್ಯುತ್ ತಗಲಿ ಸಾವನಪ್ಪಿದ್ದರು. ಇದರಿಂದ ಬೇಸತ್ತುಕೊಂಡ ನಟ ಯಶ್ ಫ್ಯಾನ್ಸ್ ಗಳ ಜೊತೆ ತನ್ನ ಬರ್ತಡೇ ಯನ್ನು ಸೆಲೆಬ್ರೇಶನ್ ಮಾಡಿರ್ಲಿಲ್ಲ. ಆದರೆ, ಈ ಬಾರಿ ಜನವರಿ 8ರಂದು ಯಶ್ ಮತ್ತೆ ತನ್ನ ಅಭಿಮಾನಿಗಳ ಜೊತೆ ಬರ್ತ್ಡೇ ಸೆಲೆಬ್ರೇಶನ್ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. Actor Yash will give good news to fans in 2026 – ತುಳು ಟೈಮ್ಸ್
ಇದನ್ನೂ ಓದಿ :ದತ್ತಾತ್ರೇಯ ಜಯಂತಿಯ ವಿಶೇಷತೆ ಹಾಗೂ ಹಿನ್ನಲೆಯೇನು…?
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/3hCZb-Tbw3c?si=zWE8CjjLoF3gtJHE











