ಬೆಂಗಳೂರು : Tulu Times | ಚಾಲನಾ ಪರವಾನಗಿ ಎಂದರೆ ಸಾರ್ವಜನಿಕ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸಲು ಸರ್ಕಾರ ನೀಡುವ ಕಾನೂನುಬದ್ಧ ಅನುಮತಿ ಪತ್ರ. ರಸ್ತೆ ಸುರಕ್ಷತೆ ಕಾಯ್ದೆಗನುಗುಣವಾಗಿ, ಭಾರತದಲ್ಲಿ ಯಾವುದೇ ವಾಹನ ದ್ವಿಚಕ್ರ, ಕಾರು, ಭಾರೀ ಸರಕು ವಾಹನ ಚಲಾಯಿಸಲು ಚಾಲನಾ ಪರವಾನಗಿ ಕಡ್ಡಾಯವಾಗಿದೆ. ಇದು ಚಾಲಕರ ಸಾಮರ್ಥ್ಯ, ಕೌಶಲ್ಯ ಮತ್ತು ಸಂಚಾರ ನಿಯಮಗಳ ಅರಿವನ್ನು ದೃಢಪಡಿಸುವ ಅಧಿಕೃತ ದಾಖಲೆಯಾಗಿರುತ್ತದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಹೊಸ ಸ್ಮಾರ್ಟ್ ಕಾರ್ಡ್‌ಗಳನ್ನು ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು. ಈ ಯೋಜನೆಯನ್ನು ಡಿಸೆಂಬರ್ 1 ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಜಾರಿಗೆ ಬರುವಂತೆ ಪ್ರಾರಂಭಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ದೇಶಾದ್ಯಂತ ಒಂದೇ ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಿಸಿ ವಾಹನ ಮಾಲೀಕರಿಗೆ ಮತ್ತು ಲೈಸೆನ್ಸ್ ದಾರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ತಂತ್ರಜ್ಞಾನದ ಬೆಳವಣಿಗೆಯಂತೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದ್ದು, ವಾಹನ ನೋಂದಣಿ ಪತ್ರ (ಆರ್‌ಸಿ), ಚಾಲನ ಪರವಾನಗಿ (ಡಿಎಲ್) ನೀಡಲಾಗುತ್ತದೆ. ಕೇಂದ್ರಿಕೃತ ಮುದ್ರಣ ಸೌಲಭ್ಯ ವ್ಯವಸ್ಥೆಯಡಿ ಸೇವಾದಾರರಾದ ಮೂಲಕ ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಣ ಮಾಡಿ, ಸಂಬಂಧಪಟ್ಟ ರಾಜ್ಯದ ಅಧೀನ ಕಛೇರಿಗಳಿಗೆ ರವಾನಿಸಲಾಗುವುದು. ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಮಾರ್ಟ್ ಕಾರ್ಡಿನಲ್ಲಿ ಮುದ್ರಿತವಾಗಿರುವ ಮಾಹಿತಿಯನ್ನು ಪರಿಶೀಲಿಸಿ ಸ್ಪೀಡ್ ಪೋಸ್ಟ್ ಮೂಲಕ ಸಂಬಂಧಪಟ್ಟವರಿಗೆ ರವಾನಿಸಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಮೈಕ್ರೊ ಚಿಪ್ ಹೊಂದಿರುವ ಆರ್‌ಸಿ ಸ್ಮಾರ್ಟ್ ಕಾರ್ಡಿನಲ್ಲಿ ವಾಹನ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ನೋಂದಣಿ ಸಿಂಧುತ್ವ, ಮಾಲೀಕತ್ವ ಕ್ರಮ ಸಂಖ್ಯೆ, ಎಂಜಿನ್ ಸಂಖ್ಯೆ, ಮಾಲೀಕರ ಹೆಸರು, ಮಾಲೀಕರ ವಿಳಾಸ, ಇಂಧನ ಹೊರಸೂಸುವಿಕೆ ಮಾನದಂಡಗಳು, ಉತ್ಪಾದನೆಯ ತಿಂಗಳು ವರ್ಷ, ಸಿಲಿಂಡರ್‌ಗಳ ಸಂಖ್ಯೆ, ಆಕ್ಸಲ್ ಸಂಖ್ಯೆ, ತಯಾರಕರ ಹೆಸರು, ಮಾದರಿ ಹೆಸರು, ಬಣ್ಣ, ಆಸನ ಸಾಮರ್ಥ್ಯ, ನಿಲ್ಲುವ ಸಾಮರ್ಥ್ಯ, ಸ್ಲೀಪರ್ ಸಾಮರ್ಥ್ಯ, ಹೊರೆಯಿಲ್ಲದ ತೂಕ, ಹೊರೆ ತೂಕ, ಒಟ್ಟು ಸಂಯೋಜನೆಯ ತೂಕ, ಘನ ಸಾಮರ್ಥ್ಯ, ವೀಲ್ ಬೇಸ್, ಮಾಲೀಕರ ಹೆಸರುಗಳು ಮುದ್ರಿತವಾಗುತ್ತದೆ. ಚಾಲನಾ ಪರವಾನಗಿ (ಡಿಎಲ್) ಸ್ಮಾರ್ಟ್ ಕಾರ್ಡುಗಳನ್ನು ಡಿಸೆಂಬರ್ 15 ರೊಳಗೆ ಕೇಂದ್ರಿಕೃತ ಮುದ್ರಣ ಸೌಲಭ್ಯದಡಿ ಎನ್‌ಐಸಿ ಸಾಫ್ಟ್ ವೇರ್ ಇಂಟಿಗ್ರೇಷನ್ ಮಾಡಿ ಮುದ್ರಿಸಿ ಲೈಸೆನ್ಸ್ ದಾರರಿಗೆ ವಿತರಿಸಲಾಗುವುದು ಎಂದು ಸಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. Smart cards for drivers too: Transport Department’s new plan – ತುಳು ಟೈಮ್ಸ್
ಇದನ್ನೂ ಓದಿ :ನಟ ದರ್ಶನ್ ಗ್ಯಾಂಗ್ ಗೆ ಮತ್ತೊಂದು ಶಾಕ್..! ಏನಾಯ್ತು ಗೊತ್ತಾ?
=========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/OSYN1bbCWKE?si=N8HV-1yysemC7NmS











