ಕರ್ನಾಟಕ : Tulu Times | ಟಿಇಟಿ ಯು ಶಿಕ್ಷಕರಾಗಿ ನೇಮಕವಾಗಲು ಅಭ್ಯರ್ಥಿಗಳ ಅರ್ಹತೆ ಪರಿಶೀಲಿಸುವ ಒಂದು ರಾಜ್ಯ ಮಟ್ಟದ ಪರೀಕ್ಷೆ. ಶಾಲೆಗಳಲ್ಲಿ, ವಿಶೇಷವಾಗಿ ಪ್ರಾಥಮಿಕ (1–5ನೇ ತರಗತಿ) ಮತ್ತು ಉನ್ನತ ಪ್ರಾಥಮಿಕ (6–8ನೇ ತರಗತಿ) ತರಗತಿಗಳ ಶಿಕ್ಷಕರ ನೇಮಕಾತಿಗೆ ಅಗತ್ಯ ಕನಿಷ್ಠ ಅರ್ಹತೆಯನ್ನು ನಿಗದಿಪಡಿಸಲು ಈ ಪರೀಕ್ಷೆ ನಡೆಸಲಾಗುತ್ತದೆ.
ಶಿಕ್ಷಣ ಕ್ಷೇತ್ರವು ನಮ್ಮ ದೇಶದ ಅಭಿವೃದ್ಧಿಯ ಆಧಾರಸ್ತಂಭ. ಭವಿಷ್ಯದ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಂತಹ ಮಹತ್ವದ ಜವಾಬ್ದಾರಿ ಹೊರುವವರಿಗೆ ಗುಣಮಟ್ಟದ ಆಯ್ಕೆ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಭಾರತದಲ್ಲಿ ಟಿಇಟಿ ಪರೀಕ್ಷೆ ಯನ್ನು ಪರಿಚಯಿಸಲಾಗಿದೆ. ಶಿಕ್ಷಕ ವೃತ್ತಿಗೆ ಪ್ರವೇಶಿಸಲು ಬಯಸುವ ಪ್ರತಿಯೊಬ್ಬರೂ ಈ ಪರೀಕ್ಷೆಯನ್ನು ತೇರ್ಗಡೆ ಆಗುವುದು ಕಡ್ಡಾಯ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) 2025 ರ ಪ್ರವೇಶ ಪತ್ರವನ್ನು ಕರ್ನಾಟಕದ DSE ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, KARTET 2025 ಪರೀಕ್ಷೆಯನ್ನು ಡಿಸೆಂಬರ್ 7 ರಂದು ನಡೆಸಲಾಗುವುದು. ಇದರಲ್ಲಿ ಮುಖ್ಯವಾಗಿ, ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ https://schooleducation.karnataka.gov.in/cacell/en ಭೇಟಿ ನೀಡಿ.
ಮೊದಲಿಗೆ KARTET ಹಾಲ್ ಟಿಕೆಟ್ 2025 ಡೌನ್‌ಲೋಡ್ ಮಾಡಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. ಹಾಲ್ ಟಿಕೆಟ್ ಪರದೆಯ ಮೇಲೆ ಕಾಣಿಸುತ್ತದೆ. ಪರೀಕ್ಷಾ ದಿನದ ಬಳಕೆಗಾಗಿ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಇನ್ನು ಆರ್.ಟಿ.ಇ ಕಾಯ್ದೆ 2ನೇ ವಿಭಾಗದಲ್ಲಿ ಷರತ್ತು (ಎನ್) ನಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೆ ಅರ್ಹತೆ ಪಡೆಯಲು NCTE ಯಿಂದ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸೂಕ್ತ ಸರ್ಕಾರದ ಮೂಲಕ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿ.ಇ.ಟಿ.) ಉತ್ತೀರ್ಣರಾಗಿರಬೇಕು. TET exam to be held on December 7: Scheduled with minimum qualification – ತುಳು ಟೈಮ್ಸ್
ಇದನ್ನೂ ಓದಿ :ಹನುಮ ಜಯಂತಿಯಂದು ಅಂಜನಿಪುತ್ರನ ಕೃಪೆಗೆ ಪಾತ್ರರಾಗೋದು ಹೇಗೆ..?
=========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/yek8Z0SdHr4?si=NcsSSQN6v83BB_Eh











