ಆರೋಗ್ಯ : Tulu Times | ವಿಶ್ವ ಏಡ್ಸ್ ದಿನವನ್ನಾಗಿ ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಹೆಚ್ ಐವಿ/ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದು, ಸೋಂಕಿತರೊಂದಿಗೆ ಐಕ್ಯತೆ ತೋರಿಸುವುದು ಮತ್ತು ಸೋಂಕಿನಿಂದ ಮೃತಪಟ್ಟವರನ್ನು ಸ್ಮರಿಸುವ ದಿನವಾಗಿರುತ್ತದೆ. HIV ಸೋಂಕು ಮುಂದುವರಿದಾಗ, ದೇಹದ ರೋಗ ನಿರೋಧಕ ಶಕ್ತಿ ಬಹಳ ಕಡಿಮೆಯಾಗುತ್ತದೆ. ಇದರಿಂದ ದೇಹಕ್ಕೆ ಸಾಮಾನ್ಯ ಸೋಂಕುಗಳು, ಕ್ಯಾನ್ಸರ್ ಗಳು, ತೀವ್ರ ರೋಗಗಳು ತಗುಲುತ್ತವೆ. ಈ ಅಂತಿಮ ಹಂತವನ್ನೇ ಏಡ್ಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಉತ್ತಮ ಚಿಕಿತ್ಸೆಯ ಅನಿವಾರ್ಯತೆಯಿರುತ್ತದೆ.
ಪ್ರತಿ ವರ್ಷ ಒಂದು ಜಾಗೃತಿ ವಿಷಯ ಘೋಷಿಸಲಾಗುತ್ತದೆ. 2024-25 ರ ಮುಖ್ಯ ತತ್ವ: ಸಮುದಾಯಗಳು ಮುನ್ನಡೆಸಲಿ ಎಂಬುದಾಗಿದೆ. ಅಂದ್ರೆ, ಹೆಚ್ ಐವಿ ನಿಯಂತ್ರಣ ಮತ್ತು ಜಾಗೃತಿಯಲ್ಲಿ ಸಮುದಾಯಗಳ ಪಾತ್ರವನ್ನು ಒತ್ತಿ ಹೇಳುತ್ತದೆ. ಇದು ಮುಖ್ಯವಾಗಿ, ರಕ್ಷಣೆ ಇಲ್ಲದೆ ಲೈಂಗಿಕ ಸಂಪರ್ಕ, ಸೋಂಕಿತ ವ್ಯಕ್ತಿಯ ರಕ್ತದ ಮೂಲಕ, ಬಳಸಿದ ಸೂಜಿ/ಸಿರಿಂಜ್ ಹಂಚಿಕೊಂಡಾಗ, ಹೆತ್ತ ತಾಯಿಯಿಂದ ಮಗುವಿಗೆ ಇತ್ಯಾದಿ ರೀತಿಯಲ್ಲಿ ಹರಡಬಹುದಾಗಿದೆ.
ಕೆಲವೊಮ್ಮೆ ಇದರ ಹರಡುವಿಕೆಯ ಭಯ ಕೆಲವರಲ್ಲಿ ಇರುತ್ತದೆ. ಉದಾಹರಣೆಗೆ ; ಈ ಸೋಂಕಿತ ವ್ಯಕ್ತಿಯ ಕೈ ಹಿಡಿದರೆ, ಮುಟ್ಟಿದರೆ, ಆಹಾರ/ಪಾತ್ರೆಗಳು ಹಂಚಿಕೊಂಡರೆ ಹರಡುವುದಿಲ್ಲ. ಆದ್ರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪ್ರಾರಂಭಿಸಿದರೆ ಸೋಂಕಿತರು ಸಾಧಾರಣ ಜೀವನ ನಡೆಸಬಹುದು. ಆದ್ದರಿಂದ, ವೈರಸ್ ಮಟ್ಟ ತುಂಬಾ ಕಡಿಮೆಯಾದರೆ ಇತರರಿಗೆ ಹರಡುವ ಭೀತಿ ಕೂಡ ಕಡಿಮೆಯಾಗುತ್ತದೆ. World AIDS Day December 0 1: Let communities lead – ತುಳು ಟೈಮ್ಸ್
ಇದನ್ನೂ ಓದಿ :ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಸಭೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=uR-Fro929bU1qXNb











