ತರಕಾರಿ : Tulu Times |ಟೊಮ್ಯಾಟೊ ಇಲ್ಲದೆ ಯಾವುದೇ ಆಹಾರ ರುಚಿಸೋದೇ ಇಲ್ಲ ಎನ್ನುವಷ್ಟರಮಟ್ಟಿಗೆ ನಾವು ಟೊಮ್ಯಾಟೊ ವನ್ನು ಅವಲಂಬಿತವಾಗಿರುತ್ತೇವೆ. ತರಕಾರಿಯಲ್ಲಿ ಪ್ರತೀ ಸಾಂಬಾರು ಪದಾರ್ಥಕ್ಕೂ ಟೊಮ್ಯಾಟೊ ಬೇಕು. ಕೆಲವೊಮ್ಮೆ ಮುಖದ ಕಾಂತಿಗೂ ಟೊಮ್ಯಾಟೊ ತುಂಬಾ ಉತ್ತಮ ಎಂದು ಹಲವು ಲೇಖನಗಳಲ್ಲಿಯೂ ಬರೆದಿರುವ ಕಾರಣ, ಟೊಮ್ಯಾಟೊ ವನ್ನು ಇಷ್ಟಪಡದವರು ಕಡಿಮೆ ಎಂದೇ ಹೇಳಬಹುದು.
ಆದರೆ ಈ ಚಳಿಗಾಲದ ಸಮಯದಲ್ಲಿ ಮಾಡಿಕೊಳ್ಳೋ ಬಿಸಿಬಿಸಿ ರಸಂನಲ್ಲೂ ಇದರ ಪಾತ್ರವೇ ದೊಡ್ಡದು. ವೆಜ್, ನಾನ್‌ವೆಜ್ ಅಂತಾ ಎಲ್ಲಾ ಬಗೆಯ ಅಡುಗೆಯಲ್ಲೂ ಮೇಲುಗೈ ಸಾಧಿಸಿರುವ ತರಕಾರಿ ಅಂದ್ರೆ ಅದು ಟೊಮೆಟೊ. ಇದೀಗ ಅದೇ ಟೊಮೆಟೊ ದರ ಈಗ ಮುಗಿಲು ಮುಟ್ಟಿದೆ. ಇನ್ನೊಂದೆಡೆ ಸಿಲಿಕಾನ್ ಸಿಟಿ ಜನರು ನುಗ್ಗೆಕಾಯಿ ಸಹವಾಸ ಬೇಡ ಅಂತಿದ್ದಾರೆ.ಇದರ ಜೊತೆಯಲ್ಲಿ ಉಳಿದಂತೆ ಅವರೆಕಾಯಿ, ಬೀನ್ಸ್, ತೊಂಡೆಕಾಯಿ, ಕ್ಯಾರೆಟ್, ಹಸಿಮೆಣಸಿನಕಾಯಿ ಸೇರಿದಂತೆ ಇತರೆ ಬಹುತೇಕ ತರಕಾರಿಗಳು ನೂರರ ಗಡಿಯಲ್ಲೇ ಇವೆ.
ಈಗಾಗಲೇ ಟೊಮೆಟೊ ಬೆಲೆ ಅರ್ಧ ಶತಕ ಬಾರಿಸಿದ್ದು, ಉಳಿದ ತರಕಾರಿಗಳು ನಿಧಾನವಾಗಿ ಶತಕ ಬಾರಿಸುತ್ತಿದೆ. ಬೆಂಗಳೂರಿಗೆ ಈ ಹಿಂದೆ ಪ್ರತಿದಿನ 100 ಟನ್ ನುಗ್ಗೆಕಾಯಿ ಸಪ್ಲೈ ಆಗ್ತಿತ್ತು. ಆದರೆ ಇದೀಗ ವಾತಾವರಣ ಬದಲಾವಣೆಯಿಂದ ನುಗ್ಗೆಕಾಯಿ ಬೆಳೆ ಸರಿಯಾಗಿ ಬಂದಿಲ್ವಂತೆ, ಇದರಿಂದ ಪ್ರತಿದಿನ ನಗರಕ್ಕೆ 30 ರಿಂದ 40 ಟನ್ ಮಾತ್ರ ನುಗ್ಗೆಕಾಯಿ ಸಪ್ಲೈ ಆಗ್ತಿದ್ಯಂತೆ.ಇತ್ತ ಒಂದು ಕೆಜಿ ನುಗ್ಗೆಕಾಯಿ 500 ರಿಂದ 600 ರುಪಾಯಿ ಆಗಿರುವ ಕಾರಣ ಗೃಹಿಣಿಯರು ನುಗ್ಗೆಕಾಯಿ ಸಹವಾಸ ಬೇಡ ಅಂತಿದ್ದಾರೆ.
ಕ್ರಮೇಣ ತರಕಾರಿಯ ಬೆಲೆ ಏರಿಕೆಯು ಹೋಟೆಲ್ ಉದ್ಯಮಕ್ಕೂ ಹೊಡೆತ ಬೀಳಬಹುದಾಗಿದೆ. The price of tomatoes, which have become a staple in cooking, has increased – ತುಳು ಟೈಮ್ಸ್
ಇದನ್ನೂ ಓದಿ :ಕಾಪು: ಗೂಡ್ಸ್ ಟೆಂಪೋ ಅಪಘಾತ..ಸ್ಥಳದಲ್ಲಿಯೇ ಐವರು ಮೃತ್ಯು !
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=YidEwN1tcxy0SzfO











