ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪಿರಿಯಡ್ಸ್ ಟೈಮ್‌ ನಲ್ಲಿ‌ ನಿಮ್ಮ ಆಹಾರ ಕ್ರಮ ಹೇಗಿರಬೇಕು..?

ಆರೋಗ್ಯ: Tulu Times | ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಟೈಮಲ್ಲಿ ಆಹಾರ ವ್ಯವಸ್ಥೆ ಸರಿಯಾಗಿರಬೇಕು, ಇಲ್ಲದಿದ್ದರೆ ವಿಪರೀತವಾದಂತಹ ಹೊಟ್ಟೆ ನೋವು ಶುರುವಾಗುತ್ತದೆ, ಹಲವಾರು ಜನ ಹೆಣ್ಣು ಮಕ್ಕಳು ಪಿರಿಯಡ್ಸ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಇಂಥವರು ಕೆಲವೊಂದು ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕು.

ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ತೀವ್ರ ಹೊಟ್ಟೆ ನೋವು ಕೈಕಾಲು ನೋವು ಇರುತ್ತದೆ. ಇದರಿಂದ ಹೇಗಪ್ಪಾ ಹೊರಗೆ ಬರುವುದು ಅಂತ ನಮ್ಮ ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಆಲೋಚನೆ ಮಾಡುತ್ತಾರೆ. ಇಂತಹ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಲು ಮತ್ತು ಈ ಸಮಯದಲ್ಲಿ ಯಾವ ರೀತಿಯಾದಂತಹ ಆಹಾರವನ್ನು ಸೇವಿಸಬೇಕು ಎನ್ನುವುದನ್ನು ಆರೋಗ್ಯ ತಜ್ಞರ ಹತ್ತಿರ ಸಲಹೆ ಪಡೆಯಲೇಬೇಕು. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಆಹಾರ ಸೇವನೆ ಹೇಗಿರಬೇಕು ಎನ್ನುವುದನ್ನು ನೋಡೋಣ..

ಪ್ರತಿಯೊಬ್ಬ ಹೆಣ್ಣಿಗೂ ಒಂದು ಸಮಯದವರೆಗೆ ಪ್ರತಿ ತಿಂಗಳು ಬಂದೆ ಮುಟ್ಟು ಬಂದೇ ಬರುತ್ತದೆ. ಈ ಸಮಯದಲ್ಲಿ ಆಯಾಸ ತಲೆ ಸುತ್ತುವಿಕೆ ಕಿರಿಕಿರಿ ಇವೆಲ್ಲವೂ ಕೂಡ ಸಾಲಾಗಿ ಕಂಡುಬರುತ್ತದೆ. ದೈನಂದಿನ ಕೆಲಸಗಳನ್ನು ಕೂಡ ನಿರ್ವಹಿಸಲು ಸಾಕಾಗಿರುತ್ತದೆ. ಋತುಚಕ್ರದ ಸಮಯದಲ್ಲಿ ತುಂಬಾ ದಣಿವಾಗಿ ಶಕ್ತಿ ಕಡಿಮೆ ಇದ್ದು ಯಾವ ಕೆಲಸ ಮಾಡುವುದಕ್ಕೂ, ಕಷ್ಟವಾಗುತ್ತದೆ.

ಮುಟ್ಟಿನ ಸಮಯದಲ್ಲಿ ನೆಲ್ಲಿಕಾಯಿಯನ್ನು ಸೇವಿಸುವುದು ಒಳ್ಳೆಯದು. ಇದರಿಂದ ವಿಟಮಿನ್ ಸಿ ನಿಮ್ಮ ದೇಹಕ್ಕೆ ಸಿಗುತ್ತದೆ. ಜೊತೆಗೆ ನಿಮ್ಮ ದೇಹದ ಹಾರ್ಮೋನುಗಳ ಸಮತೋಲನವನ್ನು ಇದು ಕಾಪಾಡುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ. ನಿಮ್ಮ ದೇಹದ ಚರ್ಮ ಹಾಗೂ ಕೂದಲನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವಲ್ಲಿ ನೆಲ್ಲಿಕಾಯಿ ಸಹಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆ 2ರಿಂದ 3 ಕರ್ಜೂರ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ಹೆಚ್ಚಾಗುತ್ತದೆ. ಕಬ್ಬಿಣದ ಅಂಶದ ಕೊರತೆಯೂ ನಿವಾರಣೆಯಾಗುತ್ತದೆ. ರಕ್ತ ಹೀನತೆ ದೌರ್ಬಲ್ಯ ಮತ್ತು ಮುಟ್ಟಿನ ಆಯಾಸವನ್ನು ಇದು ಕಡಿಮೆ ಮಾಡುತ್ತದೆ.

ದೇಹದಲ್ಲಿನ ನೋವನ್ನು ಕಡಿಮೆ ಮಾಡಲು ಎಳ್ಳು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೇಶಿಯಂ ಇರುವುದರಿಂದ ಸ್ನಾಯುಗಳನ್ನು ಬಲಪಡಿಸುವುದಕ್ಕೆ ಇದು ಸಹಕಾರಿಯಾಗುತ್ತದೆ. ಒಟ್ಟಿಗೆ 15 ದಿವಸಗಳ ಮುಂಚೆ ನೀವು ಹುರಿದ ಎಳ್ಳನ್ನು ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ಬರುವಂತಹ ನೋವು ಕಡಿಮೆಯಾಗುತ್ತದೆ.

What should your diet be like during your periods?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page