ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪಪ್ಪಾಯಿ ಹಣ್ಣನ್ನು ಯಾವ ಸಮಯದಲ್ಲಿ ತಿಂದರೆ ದೇಹಕ್ಕೆ ಉತ್ತಮ…?

ಆರೋಗ್ಯ : Tulu Times |ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟಪಟ್ಟು ತಿನ್ನುವ ಹಣ್ಣು ‘ಪಪ್ಪಾಯಿ’. ಈ ಹಣ್ಣಿನಲ್ಲಿ ಬಹಳ ಪೋಷಕಾಂಶವಿದ್ದು, ಇದರ ಸೇವನೆಯಿಂದ ಅನೇಕ‌ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಆದರೆ ಇದನ್ನು ರಾತ್ರಿ ವೇಳೆ ತಿಂದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ವೈದ್ಯರು ಹೇಳುತ್ತಾರೆ.

ಹೌದು…! ಮಲಗುವ ಮುನ್ನ ನಾವು ಸೇವನೆ ಮಾಡುವ ಆಹಾರದಲ್ಲಿ ಪಪ್ಪಾಯಿಯನ್ನು ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇಂತಹ ಅಭ್ಯಾಸ ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಪಪ್ಪಾಯಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ನಾರಿನಂಶಗಳು ಸಮೃದ್ಧವಾಗಿದ್ದು ಈ ಹಣ್ಣನ್ನು ಮಲಗುವ ಮುನ್ನ ಸೇವನೆ ಮಾಡುವುದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ, ತೂಕ ಹೆಚ್ಚಳ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.

ಪಪ್ಪಾಯಿಯಲ್ಲಿ ಪಪೈನ್ ಎಂಬ ಕಿಣ್ವವಿದ್ದು, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ರಾತ್ರಿ ಊಟದ ನಂತರ ಪಪ್ಪಾಯಿ ತಿಂದರೆ, ಅದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಮಾತ್ರವಲ್ಲ ಇದು ಗ್ಯಾಸ್, ಆಮ್ಲೀಯತೆ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳಿಂದಲೂ ಪರಿಹಾರವನ್ನು ನೀಡುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಫೈಬರ್ ಅಧಿಕವಾಗಿದ್ದು, ಇದು ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ತಡರಾತ್ರಿಯಲ್ಲಿ ಏನನ್ನಾದರೂ ತಿನ್ನುವ ಬಯಕೆ ಕೂಡ ಕಡಿಮೆಯಾಗುತ್ತದೆ. ಮಾತ್ರವಲ್ಲ ಈ ಹಣ್ಣಿನ ಸೇವನೆ ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುವುದರ ಜೊತೆಗೆ ಕೊಬ್ಬನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.

ಪಪ್ಪಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿದ್ದು, ಇದು ಚರ್ಮಕ್ಕೆ ಒಳಗಿನಿಂದ ಹೊಳಪು ನೀಡುತ್ತದೆ. ಅದಕ್ಕಾಗಿ ಮಲಗುವ ಮುನ್ನ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ದೇಹದಿಂದ ವಿಷವನ್ನು ತೆಗೆದು ಹೊರಹಾಕಲು ಸಹಾಯ ಮಾಡುತ್ತದೆ, ಮಾತ್ರವಲ್ಲ ಇದರ ನಿಯಮಿತ ಸೇವನೆ ಮೊಡವೆಗಳು ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಗಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಪಪ್ಪಾಯಿ ಸೇವನೆ ಬಹಳ ಒಳ್ಳೆಯದು.

When is it best to eat papaya fruit? – ತುಳು ಟೈಮ್ಸ್

ಇದನ್ನೂ ಓದಿ :ಬೀಟ್ರೋಟ್ ನಿಂದ ತುಟಿಯ ತ್ವಚೆಯನ್ನು ಕಾಪಾಡಿಕೊಳ್ಳುವುದು ಹೇಗೆ…?

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/XB6d0r1sbnY?si=j9Wb0a_OmgkdFIQs

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page