ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸದ್ದಿಲ್ಲದೇ ಎಂಗೇಜ್​ಮೆಂಟ್​ ಆದ ಗಿಚ್ಚಿ ಗಿಲಿಗಿಲಿ ಜೋಡಿ..! ವೈರಲ್‌ ಆಯ್ತು ಫೋಟೋ

ಸಿನಿಮಾ: Tulu Times | ಕನ್ನಡ ಸಿನಿ ಜರ್ನಿಗಳಲ್ಲಿ ಕೆಲವು ಲವ್‌ ಸ್ಟೋರಿಗಳು ಗೊತ್ತಿಲ್ಲದೆ ನಡೆದು ಹೋಗುತ್ತವೆ. ಅದೇ ರೀತಿ ಇದೀಗ, ಗಿಚ್ಚಿ ಗಿಲಿಗಿಲಿ ಶೋನ ಇನ್ನೊಂದು ಜೋಡಿ ಸದ್ದಿಲ್ಲದೆ ಎಂಗೇಜ್‌ ಮೆಂಟ್ ಮಾಡಿಕೊಂಡಿದ್ದಾರೆ.  ಮಾನಸಾ ಹಾಗೂ ಶಿವು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: RSS ಅಪಹಾಸ್ಯ ಮಾಡುವ ಟಿ-ಶರ್ಟ್ ಧರಿಸಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ ಕಾಮಿಡಿಯನ್!

ಈ ಜೋಡಿಯ ಬಗ್ಗೆ ಈ ಹಿಂದೆಯೂ ಗಾಸಿಪ್‌ ಕೇಳಿಬರುತ್ತಲೇ ಇತ್ತು, ಆದ್ರೆ ಇವರಿಬ್ಬರು ಎಲ್ಲೂ ಹೇಳಿಕೊಂಡಿರಲಿಲ್ಲ. ಕಾಮಿಡಿ ನಟರಾದ  ಶಿವಕುಮಾರ್ ಮತ್ತು ಮಾನಸಾ ಗುರುಸ್ವಾಮಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಎಐ ಯುಗದಲ್ಲಿರುವ ನಾವು ಯಾವುದು ಸತ್ಯ, ಯಾವುದು ಸುಳ್ಳು ಎಂದು ತಿಳಿಯುವುದೇ ಬಹಳ ಕಷ್ಟ. ಆದರೆ ಇದು ನಿಜವಾಗಿದೆ. ಈಗಾಗಲೇ ಗಿಚ್ಚಿ ಗಿಲಿಗಿಲಿ ಷೋ, ಮಜಾಭಾರತ ರಿಯಾಲಿಟಿ ಷೋಗಳ ಜೋಡಿ ಜಗಪ್ಪ, ಸುಷ್ಮಿತಾ ಗೌಡ ಅವರ ಮದುವೆಯಾಗಿದೆ. ಇನ್ನು ಸರಿಗಮಪ ಖ್ಯಾತಿಯ ಪೃಥ್ವಿ ಭಟ್‌, ಅಭಿಷೇಕ್‌…  ಜೋಡಿಗಳು ಮದುವೆಯಾಗಿದೆ.  ಮಾನಸಾ ಗುರುಸ್ವಾಮಿ  ನೀ ಇರಲು ಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಇವರು ಕೂಡ ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಲವ್ವಲ್ಲಿ ಬಿದ್ದು ಒದ್ದಾಡುತ್ತಿದ್ದೀರಾ..? ದಯವಿಟ್ಟು ಗಮನವಿಟ್ಟು ಓದಿ!

ಈ ಜೋಡಿಗಳು  ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್‌ ಮೆಂಟ್‌ ಗೆ  ಹಲವಾರು ಸೆಲೆಬ್ರಿಟಿಗಳು ಆಗಮಿಸಿ ಶುಭಹಾರೈಸಿದ್ದಾರೆ. ಈ ಜೋಡಿಗಳಿಬ್ಬರು ಒಟ್ಟಿಗೆ ನಟಿಸಿ, ನೇಮ್ ಫೇಮ್ ಗಳಿಸಿದ್ದರು. ನಾವಿಬ್ಬರೂ ಫ್ರೆಂಡ್ಸ್ ಅಂತ ಎಲ್ಲ ಕಡೆ ಓಡಾಡಿಕೊಂಡು ಇದ್ದರು. ನಮ್ಮ ನಡುವೆ ಏನಿಲ್ಲ, ಏನಿಲ್ಲ ಅಂತಾನೇ ಎಲ್ಲ ಕಡೆ ಹೇಳುತ್ತಿದ್ದರು. ಹುಡುಗಿ ಎದುರು ಹುಡುಗ ಮಂಡಿಯೂರಿ ಕುಳಿತು ರಿಂಗ್ ಅನ್ನು ತೊಡಿಸಿದ್ದಾರೆ.  ಈ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.

The Gichi Gili Gili couple got engaged without any noise..! The photo went viral-ತುಳುಟೈಮ್ಸ್

ಇದನ್ನೂ ಓದಿ: ಉಜಿರೆಯ ಸುರ್ಯ ಸದಾಶಿವ ರುದ್ರ ದೇವಸ್ಥಾನದ ಪವಾಡಗಳು ಅಚ್ಚರಿ ಮೂಡಿಸುತ್ತೆ..!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page