ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಿಮ್ಮ ಮನೆಯ ಒಳಗಡೆ ಕೆಂಬೂತ ಪಕ್ಷಿ ಹಾರಿಕೊಂಡು ಬಂತಾ..? ಹಾಗಾದ್ರೆ ನೀವು ಅದೃಷ್ಟವಂತರು!

ಲೈಫ್‌ ಸ್ಟೈಲ್:‌ Tulu Times | ಸಾಂಪ್ರದಾಯದಲ್ಲಿ ವಿಭಿನ್ನ ಬಗೆಯ ನಂಬಿಕೆಗಳಿವೆ. ಹಲವಾರು ಶಾಸ್ತ್ರ ಹಾಗೂ ಅದನ್ನು ಪಾಲಿಸುವಂತಹ ಬಹುದೊಡ್ಡ ವರ್ಗವಿದೆ. ಇದರ ಸಾಲಿನಲ್ಲಿ ಸಂಪ್ರದಾಯಗಳನ್ನು ಪಾಲಿಸುವವರು ಕೆಲವೊಂದು ವಿಭಿನ್ನವಾದ ಅಂತಹ ನಂಬಿಕೆಗಳನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲಿ ಮನೆಯ ಒಳಗಡೆ ಕೆಂಬೂತ ಪಕ್ಷಿಗಳು ಹಾರಿಕೊಂಡು ಬಂದರೆ ಏನು ಅರ್ಥ ನೋಡೋಣ..

ಮನೆಯ ಒಳಗಡೆ ಪಕ್ಷಿಗಳು ಗೂಡು ಕಟ್ಟಿದರೆ ಶಕುನ ಅಂತ ಹೇಳಲಾಗುತ್ತೆ. ಅದರಲ್ಲೂ ಕೂಡ ಮನೆಯ ಒಳಗಡೆ ಕೆಲವೊಂದು ಪಕ್ಷಿಗಳು ಬಂದರೆ ಅದನ್ನು ಶುಭ ಶಕುನ ಅಂತ ಹೇಳುತ್ತಾರೆ. ನಿಮ್ಮ ಮನೆಯ ಒಳಗಡೆ ಕೆಂಬೂತ ಪಕ್ಷಿ ಹಾರಿಕೊಂಡು ಬಂದರೆ, ಭಾರತೀಯ ಸಂಸ್ಕೃತಿ ಮತ್ತು ವಾಸ್ತು ಶಾಸ್ತ್ರದಲ್ಲಿ ಇದನ್ನು ಶುಭ ಶಕುನ ಅಂತ ಹೇಳುತ್ತಾರೆ. ಕೆಂಬೂತ ಪಕ್ಷಿ ಮನೆಗೆ ಬರುವುದರ ಬಗ್ಗೆ ಭಾರತೀಯ ಸಂಸ್ಕೃತಿ ಮತ್ತು ವಾಸ್ತು ಶಾಸ್ತ್ರದಲ್ಲಿ ವಿಭಿನ್ನ ನಂಬಿಕೆಗಳಿವೆ. ಅನೇಕ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಇದು ಶುಭ ಸೂಚಕವಾಗಿದೆ ಎನ್ನುತ್ತಾರೆ.

ಇದನ್ನೂ ಓದಿ:‌ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ..ಬೆಳ್ಳಿ ಬೆಲೆ ಏರಿಕೆ!

ಕೆಂಬೂತ ಪಕ್ಷಿ ಮನೆಗೆ ಬಂದರೆ ಅದಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ನಂಬಿಕೆಗಳನ್ನು ನೋಡೋದಾದ್ರೆ,  ಅದೃಷ್ಟ ಮತ್ತು ಸಮೃದ್ಧಿ ತರುತ್ತದೆ. ಹಲವು ನಂಬಿಕೆಗಳಲ್ಲಿ, ಕೆಂಬೂತ ಪಕ್ಷಿಯು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಧನಾತ್ಮಕ ಶಕ್ತಿ ಮನೆಯೊಳಗೆ ತುಂಬುತ್ತದೆ. ಈ ಪಕ್ಷಿಯು ಮನೆಗೆ ಬಂದರೆ, ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಪರಿಸರವು ಶಾಂತಿಯುತವಾಗಿರುತ್ತದೆ ಎಂಬ ಭಾವನೆ ಇದೆ. ಶಕುನ ಶಾಸ್ತ್ರದ ಪ್ರಕಾರ, ಈ ಪಕ್ಷಿಯ ಆಗಮನವು ಒಳ್ಳೆಯ ಘಟನೆಗಳು ನಡೆಯುವುದರ ಮುನ್ಸೂಚನೆಯಾಗಿದೆ ಎನ್ನಲಾಗುತ್ತದೆ. ಈ ನಂಬಿಕೆಗಳು ಕೇವಲ ಸಾಂಪ್ರದಾಯಿಕ ಮತ್ತು ಪ್ರಾದೇಶಿಕವಾಗಿದ್ದು, ವೈಜ್ಞಾನಿಕವಾಗಿ ಯಾವುದೇ ಆಧಾರಗಳಿಲ್ಲ. ಪಕ್ಷಿಗಳು ಆಹಾರ ಅಥವಾ ಆಶ್ರಯ ಅರಸಿ ಮನೆ ಅಥವಾ ಸುತ್ತಮುತ್ತಲಿನ ಪ್ರದೇಶಗಳಿಗೆ ಬರುವುದು ಸಹಜ ಪ್ರಕ್ರಿಯೆಯಾಗಿದೆ. ಹೀಗಾಗಿ ನಂಬುವ ಮಂದಿ ಇದನ್ನೆಲ್ಲ ಫಾಲೋ ಮಾಡುತ್ತಾರೆ.

Did a greater councal bird fly into your house? Then you’re in luck!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page