ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮಗಷ್ಟೇ ತಿಳಿದಿರೋದು..ಚಿಂತೆ ಯಾಕೆ? ಹ್ಯಾಪಿ ಆಗಿರಿ!

ಲೈಫ್ ಸ್ಟೈಲ್:‌ Tulu Times |  ಜೀವನ ಅಂದ್ರೆ ಹಾಗೇನೆ ಅಲ್ವ ವಿಭಿನ್ನ ಬಗೆಯ ವ್ಯಕ್ತಿತ್ವಗಳ ಜೊತೆ ಪ್ರತಿದಿನ ಬದುಕುವಂತಹ ಒಂದು ಸುಮಧುರ ಕ್ಷಣ. ವಿವಿಧ ಬಗೆಯ ವ್ಯಕ್ತಿತ್ವಗಳ ಜೊತೆಗೆ ಪ್ರತಿದಿನ ನಾವು ಮಾತನಾಡುತ್ತೇವೆ. ಪ್ರತಿದಿನ ಜೀವನದ ಬಗ್ಗೆ ಚರ್ಚೆ ಮಾಡುತ್ತೇವೆ. ಹಾಗಾದ್ರೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಇನ್ನೊಬ್ಬರು ಕೆಟ್ಟದಾಗಿ ಅಥವಾ ಕೀಳಾಗಿ ನಿಮ್ಮನ್ನು ಅಲ್ಲಗೆಳೆಯುವಂತ ಜನಗಳಿದ್ದರೆ ಅಂತವರಿಂದ ನೀವು ಹೇಗೆ ದೂರವಾಗಲು ಬಯಸುತ್ತೀರಾ..? ನೋಡೋಣ.

ಇನ್ನೊಬ್ಬರ ತಪ್ಪು ಮಾತ್ರ ನಿಮಗೆ ಕಾಣಿಸುತ್ತಾ..?

ನಮ್ಮಲ್ಲಿ ಬಹುತೇಕ ಜನ ಇನ್ನೊಬ್ಬರ ತಪ್ಪುಗಳನ್ನು ಎತ್ತಿ ಹಿಡಿಯುವಂತಹ ಕೆಲಸವನ್ನೇ ಜಾಸ್ತಿಯಾಗಿ ಮಾಡುತ್ತಾರೆ. ಇದರಿಂದ ತನ್ನ ತಪ್ಪೇನು..? ತಾನು ಏನು ಮಾತನಾಡುತ್ತಿದ್ದೀನಿ..? ಎನ್ನುವುದರ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಇನ್ನು ಸಾಕಷ್ಟು ಜನ ಅವರ ವ್ಯಕ್ತಿತ್ವ ಅಥವಾ ಅವರ ವೈಯಕ್ತಿಕ ಬದುಕು, ಸಂಪೂರ್ಣವಾಗಿ ಹಾಳಾಗಿದ್ದರು ಇನ್ನೊಬ್ಬರ ಲೈಫ್ ಬಗ್ಗೆ ಪ್ರತಿಕ್ಷಣ ಚಿಂತಿಸುತ್ತಾ ಇರುತ್ತಾರೆ. ಇಂತವರಿಂದ ಒಂದು ತಿಳಿಯಲೇಬೇಕು ಏನಂದ್ರೆ, ಅಂತಹ ಮನಸ್ಥಿತಿಯ ಜನರ ಜೊತೆಗೆ ಸೇರುವುದು ಬಹಳ ಡೇಂಜರ್ ಅಂತ.

ಪ್ರತಿಯೊಬ್ಬರಿಗೂ ವೈಯಕ್ತಿಕ ನಿಲುವು ಇರುತ್ತೆ..!

ಪ್ರತಿಯೊಬ್ಬ ಮನುಷ್ಯರು  ಕೂಡ ತನ್ನದೇ ಆದಂತಹ ವೈಯಕ್ತಿಕ ನಿಲುವುಗಳನ್ನು ಹೊಂದಿರುತ್ತಾರೆ. ತನ್ನದೇ ಆದಂತಹ ಯೋಚನೆಗಳನ್ನು ಇಟ್ಟುಕೊಂಡಿರುತ್ತಾರೆ. ಹಾಗಾಗಿ, ತನ್ನದೇ ಒಂದು ಸರ್ಕಲ್ ಅನ್ನು ತನಗೆ ಇಷ್ಟ ಬಂದಂತೆ ಕಟ್ಟುನಿಟ್ಟಾಗಿ ರೂಢಿಸಿಕೊಂಡಿರುತ್ತಾರೆ. ಆದರೆ, ಇನ್ನೊಬ್ಬರು ಆ ವ್ಯಕ್ತಿಯ ಬದುಕಿನಲ್ಲಿ ಬಂದು ಬೇರೆ ರೀತಿಯಾದಂತಹ ಮಾತುಗಳಿಂದ ಆತನನ್ನು ಚೇಂಜ್ ಮಾಡಬಹುದು. ಹೀಗಾಗಿ ಇಂಥವರಿಂದ ದೂರವಿರುವುದು ಬಹಳನೇ ಒಳ್ಳೆಯದು. ಪ್ರತಿಯೊಬ್ಬರ ವ್ಯಕ್ತಿತ್ವ ವಿಭಿನ್ನವಾಗಿರುತ್ತೆ.

ನಿಮ್ಮ ಭಾವನೆಗಳಿಗೆ ನೀವೇ  ಜವಾಬ್ದಾರರು..!

ಇನ್ನೊಬ್ಬರ ಲೈಫ್ ಸ್ಟೈಲ್ ಯಾವತ್ತೂ ನಿಮ್ಮದಲ್ಲ. ನೀವು ಹೇಗೆ ಅಂತ ಖಂಡಿತವಾಗ್ಲೂ ನಿಮಗಷ್ಟೇ ಗೊತ್ತಿರುವುದು. ನಿಮ್ಮ ಮನಸ್ಥಿತಿಯನ್ನು ಇನ್ನೊಬ್ಬರ ಮನಸ್ಥಿತಿಯ ಹಾಗೆ ಚೇಂಜ್ ಮಾಡಿಕೊಳ್ಳುವುದು ಅಷ್ಟೊಂದು ಸೂಕ್ತವಲ್ಲ. ಯಾಕೆಂದರೆ, ನೀವು ಯಾವತ್ತೂ ನೀವಾಗಿರಲು ಇದರಿಂದ ಸಾಧ್ಯವಿಲ್ಲ. ಹಾಗಾಗಿ ಯಾವತ್ತೂ ನಿಮ್ಮ ವ್ಯಕ್ತಿತ್ವವನ್ನು ನೀವು ಕಳೆದುಕೊಳ್ಳಬೇಡಿ!  ನಿಮಗಷ್ಟೇ ಗೊತ್ತು ನಿಮ್ಮ ವ್ಯಕ್ತಿತ್ವ. ಸಾಕಷ್ಟು ಜನ ಇನ್ನೊಬ್ಬರಿಗೆ ಬುದ್ಧಿವಾದ ಅಥವಾ ಉಪದೇಶಗಳನ್ನು ಕೊಡುವವರೇ ಹೆಚ್ಚಾಗಿರುತ್ತಾರೆ. ಇಂತವರಿಗೆ ಅವರ ತಪ್ಪುಗಳು.. ಅವರ ಸಮಸ್ಯೆಗಳು.. ಅವರಿಗೆಯೇ ತಿಳಿದಿರುವುದಿಲ್ಲ. ಪ್ರತಿ ಬಾರಿ ಇನ್ನೊಬ್ಬರ ಬಗ್ಗೆ ಚಿಂತನೆ ಮಾಡುತ್ತಿರುತ್ತಾರೆ. ನಿಮ್ಮ ವ್ಯಕ್ತಿತ್ವವನ್ನು ನೀವೇ ಕಲರ್ಫುಲ್ ಆಗಿ ಬದಲಾಯಿಸಿಕೊಳ್ಳಬೇಕು. ನಿಮ್ಮ ಜೀವನಕ್ಕೆ ನೀವೇ ಜವಾಬ್ದಾರರು.. ನಿಮ್ಮ ಲೈಫ್ ಸ್ಟೈಲ್ ಗು ನೀವೇ ಜವಾಬ್ದಾರು.. ಹೀಗಾಗಿ, ಇನ್ನೊಬ್ಬರು ಏನೋ ಚುಚ್ಚಿ ಮಾತನಾಡಿದ್ರೂ ಅಂತ ಅದನ್ನೇ ಚಿಂತನೆ ಮಾಡುತ್ತಿರುವುದು ನಿಮ್ಮ ಮೂರ್ಖತನ.

Only you know your personality..why worry? Be happy!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page