ಬ್ರೇಕಿಂಗ್ ನ್ಯೂಸ್
ಕರ್ನಾಟಕ

ತಿಂಗಳ ಮಗುವಿನಿಂದಲೇ ಹೆಲ್ಮೆಟ್ ಕಡ್ಡಾಯ ಆಗುತ್ತಾ ? : ಬೇಜಾವಾಬ್ದಾರಿ ತೋರುತ್ತಿರುವ ದ್ವಿಚಕ್ರ ವಾಹನ ಸವಾರರು

ಬೆಂಗಳೂರು : Tulu Times | ವಾಹನ ಚಾಲಕರಿಂದ ನಿಯಮ ಉಲ್ಲಂಘನೆ ಆಗುತ್ತಲೇ ಇರುತ್ತದೆ. ಇದರಲ್ಲಿ ಮುಖ್ಯವಾಗಿ,‌ ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಸೀಟ್ ಬೆಲ್ಟ್ ಹಾಕದೆ ಕಾರಿನ ಚಾಲನೆ, ಹೆಚ್ಚಾದ ವೇಗದ ಮಿತಿ, ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು, ಸಿಗ್ನಲ್ ಜಂಪ್ ಮಾಡುವುದು, ಸರಿಯಾದ ದಾಖಲೆಗಳು ಇಲ್ಲದೆ ವಾಹನವನ್ನು ಓಡಿಸುವುದು, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವುದು ಹಾಗೂ ಮೊಬೈಲ್ ಫೋನ್ ಬಳಸಿಕೊಂಡು ವಾಹನದ ಚಾಲನೆ ಮಾಡೋದು ಇತ್ಯಾದಿ ನಿಯಮಗಳನ್ನು ಚಾಲಕರು ಎಷ್ಟೇ ವಾಹನ ಇಲಾಖೆಯಿಂದ ಸೂಚನೆಗಳು ಬಂದರೂ ಇದನ್ನ ತಲೆಗೆ ಹಾಕಿಕೊಂಡಂತೆ ಕಾಣುವುದಿಲ್ಲ.

ಮಕ್ಕಳ ಬಗ್ಗೆ ತೀವ್ರ ನಿಗಾ ;

ಅಪಘಾತಗಳು ಹೆಚ್ಚಾದಂತೆ ಈ ರೂಲ್ಸ್ ಬ್ರೇಕಿಂಗ್ ಕೂಡ ಹೆಚ್ಚಾಗುತ್ತದೆ. ಹಾಗಾಗಿ, ಹೆಲ್ಮೆಟ್ ಧರಿಸುವ ವಿಷಯದಲ್ಲಿ ಮಕ್ಕಳಿಗೂ ಕೂಡ ವಾಹನ ಇಲಾಖೆಯಿಂದ ಕಡ್ಡಾಯ ಸೂಚನೆಗಳು ಬಂದಿದೆ. ಅಲ್ಲದೇ ಒಂಬತ್ತರಿಂದ ನಾಲ್ಕು ವರ್ಷದೊಳಗಿನ ಮಕ್ಕಳಿಗೂ ಕೂಡ ಹೆಲ್ಮೆಟ್ ಕಡ್ಡಾಯವಾಗಿ ಮಾಡಲೂಬಹುದು ಎಂದು ಹೇಳಲಾಗಿದೆ. ಯಾಕೆಂದರೆ ಎಲ್ಲರ ಜೀವ ಕೂಡ ಮುಖ್ಯ. ಅಪಘಾತಗಳು ಮುಖ್ಯವಾಗಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಮಕ್ಕಳನ್ನು ಕೂಡ ದ್ವಿಚಕ್ರ ವಾಹದಲ್ಲಿ ಕುಳ್ಳಿರಿಸಿಕೊಂಡು ಹೋಗುವ ಕಾರಣ,‌ ಮಕ್ಕಳ ಬಗ್ಗೆ ತೀವ್ರ ನಿಗಾ ಮುಖ್ಯವಾಗಿರುತ್ತದೆ. ಹಾಗಾಗಿ,‌ ವಾಹನ ಸವಾರರು ಹಿಂಬದಿ ಮಕ್ಕಳನ್ನು ಕೂರಿಸಿಕೊಂಡು ಪ್ರಯಾಣಿಸುವ ಸಂದರ್ಭದಲ್ಲಿ ಗರಿಷ್ಠ ವೇಗದ ಮಿತಿಯನ್ನು ನಿಗದಿಪಡಿಸುವ ಹಾಗೂ ಈ ಸಂದರ್ಭ ಮಕ್ಕಳಿಗೆ ಹೆಲ್ಮೆಟ್ ಅನ್ನು ಕಡ್ಡಾಯಗೊಳಿಸುವ ಕೇಂದ್ರ ಮೋಟಾರ್ ವಾಹನ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ.

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹೆಲ್ಮೆಟ್ ಗಳು ಲಭ್ಯ ;

ಆರು ತಿಂಗಳ ಒಳಗಾಗಿ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ನಿಯಮಗಳನ್ನ ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತಾಗಿ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದು 9 ತಿಂಗಳಿಂದ 4 ವರ್ಷದ ವಯೋಮಾನದ ಮಕ್ಕಳು ಕೂಡ ಹೆಲ್ಮೆಟ್ ಧರಿಸುವುದು ಅನಿವಾರ್ಯ. ಹೀಗಾಗಿ ಯಾರು ಕೂಡ ನಿರ್ಲಕ್ಷ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹೆಲ್ಮೆಟ್ ಗಳು ಲಭ್ಯವಿದ್ದು ಎಲ್ಲರೂ ಕೂಡ ಹೆಲ್ಮೆಟ್ ಅನ್ನು ಖರೀದಿಸಿ ಅದರಲ್ಲೂ ಕೂಡ ಬೆಂಗಳೂರಿನ ಪೋಷಕರು ಮಕ್ಕಳಿಗೆ ಹೆಲ್ಮೆಟ್ ಕೊಡಿಸೋದ್ರಲ್ಲಿ ಹಿಂದೆ ಉಳಿದಿದ್ದು, ಅನಾಹುತಗಳಿಗೆ ಮುನ್ನ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Is wearing a helmet mandatory for babies? : Two-wheeler riders – ತುಳು ಟೈಮ್ಸ್

ಇದನ್ನೂ ಓದಿ :ಇಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ..!

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page