ಬ್ರೇಕಿಂಗ್ ನ್ಯೂಸ್
ಕಡಬ

KADABA:ಅಲಂಕಾರಿನಲ್ಲಿ ಕದ್ದರೋ ಕದ್ದರು ಟಿ.ವಿ ಕದ್ದರೂ!

KADABA ತಾಲೂಕು ಆಲಂಕಾರಿನಲ್ಲಿ ಟಿ.ವಿ ಕದ್ದ ಘಟನೆ ನಡೆದಿದೆ.ಅಂಗನವಾಡಿ ಕೇಂದ್ರದಲ್ಲಿ ಇರಿಸಲಾಗಿದ್ದ ಟಿ.ವಿಯನ್ನು ರಾತ್ರಿ ಬೆಳಗಾಗುವುದರೊಳಗೆ ಕಳ್ಳರು ಕದ್ದು ಪರಾರಿಯಾಗಿದ್ದಾರೆ.ಬೆಳಗ್ಗೆ ನೋಡುವಾಗ ಅಂಗನಾವಾಡಿಯ ಹಿಂಬದಿಯ ಬಾಗಿಲು
ಮುರಿದು ಕಳ್ಳತನ ಮಾಡಿದ್ದು ಗೊತ್ತಾಗಿದೆ.

ಶಿಶು ಅಭಿವೃದ್ಧಿ ಇಲಾಖೆಯ ಮುಖಾಂತರ ಅಲಂಕಾರಿನ ಅಂಗನವಾಡಿಗೆ ಸಮ್ ಸಂಗ್ ಕಂಪನಿಯ ಅಲ್ಟ್ರಾ ಎಚ್.ಡಿ 4K 108 ಸೆ.ಮೀ ನ ಟಿ.ವಿಯನ್ನು ನೀಡಲಾಗಿತ್ತು.ಬಿಡುವಿನ ಮನರಂಜನೆ ಮಕ್ಕಳಿಗೆ ಮಾಹಿತಿಗೆ ಈ ಟಿ.ವಿ ಅನೂಕೂಲ ಮಾಡಿತ್ತು.ಅಂಗನವಾಡಿಯ ಈ ಟಿ.ವಿ ಮೇಲೆ ಕಳ್ಳರ ಕಣ್ಣುಬಿದ್ದು ಸ್ಟೆಪ್ಲೈಜರ್ ಕೂಡ ಬಿಡದೆ ಎಗರಿಸಿದ್ದಾರೆ.

ಅಂಗನವಾಡಿ ಶಿಕ್ಷಕಿ ಸಹಾಯಕಿ ಚಂದ್ರಿಕಾರವರು ಅಂಗನವಾಡಿಗೆ ಬೀಗ ಹೋಗಿದ್ದರು ಮರುದಿನ ನಿನ್ನೆ ಮುಂಜಾನೆ ಅಂಗನವಾಡಿ ಓಪನ್ ಮಾಡಿದಾಗ ಟಿ.ವಿ ಕಳ್ಳತನವಾಗಿರುವುದು ಗೊತ್ತಾಗಿದೆ. ಒಟ್ಟು 47000 ಮೌಲ್ಯದ ವಸ್ತುಗಳ ಕಳ್ಳತನವಾಗಿದೆ.
ಕಳ್ಳರ ಪತ್ತೆಗಾಗಿ ಅಂಗನವಾಡಿ ಶಿಕ್ಷಕಿ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. (http://Kadaba)ಇನ್ಸ್ ಪೆಕ್ಟರ್ ಅಭಿನಂದನ್ ಪೊಲೀಸರು,ಬೆರಳಚ್ಚು ತಜ್ಞರು,ಶ್ವಾನದಳದವರು ಆಗಮಿಸಿ ತನಿಖೆ ನಡೆಸಿದ್ದಾರೆ.

ಅಂಗನವಾಡಿಯಲ್ಲಿದ್ದ ಟಿ.ವಿ ಕಳ್ಳತನ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂತಹ ಕಳ್ಳರನ್ನು ಪೊಲೀಸರು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ARUN KUMAR PUTTILA:ಸಂಸಾರವೇ ಬೇಡ ಅಂದುಕೊಂಡಿದ್ರು!

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 5

You cannot copy content of this page