ಆರೋಗ್ಯ : Tulu Times | ವಿಪರೀತ ಆಯಾಸವಾದಾಗ ನಾವು ಒ.ಆರ್. ಎಸ್ ಹುಡಿಯನ್ನು ನೀರಿಗೆ ಹಾಕಿ ಕುಡಿಯುತ್ತೇವೆ. ಕೆಲವೊಮ್ಮೆ ಹದಗೆಟ್ಟ ಆರೋಗ್ಯದ ಚಿಂತೆಯಲ್ಲಿ ಸಿಕ್ಕಿದ ಒ.ಆರ್.ಎಸ್ ಹುಡಿಯನ್ನು ಖರೀದಿಸುತ್ತೇವೆ. ಹಾಗೂ ಇದೀಗ ಲಿಕ್ವಿಡ್ ರೀತಿಯಲ್ಲೂ ಮಾರುಕಟ್ಟೆಯಲ್ಲಿ, ಮೆಡಿಕಲ್ ಶಾಪ್ ಗಳಲ್ಲಿ ಒ.ಆರ್ . ಎಸ್ ನ್ನು ನೋಡಬಹುದು. ಆದರೆ, ಇದರಲ್ಲಿ ಕೆಲವೊಂದು ಎನರ್ಜಿ ಡ್ರಿಂಕ್ಸ್ ಗಳ ಮೇಲೆಯೂ ಈ ರೀತಿ ಬರೆದು ಮಾರಾಟ ಮಾಡುವುದನ್ನು ಈ ಹಿಂದೆಯೇ ತಡೆಹಿಡಿಯಬೇಕೆಂದು ಆದೇಶಿಸಲಾಗಿತ್ತು. ಅದರ ಬಗ್ಗೆ ನಿಗಾ ವಹಿಸಿದ ಕಂಪೆನಿಯು ಇನ್ನೂ ಅದೇ ರೀತಿ ಮಾರಾಟದಲ್ಲಿ ಜನರಿಗೆ ಗೊಂದಲಕ್ಕೀಡು ಮಾಡಿ, ಹಣ್ಣಿನ ರಸಗಳ ಮೇಲೂ ಒ.ಆರ್.ಎಸ್ ಎಂದು ತಪ್ಪಾಗಿ ನಮೂದಿಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ವರದಿಯಾಗಿದೆ.
ಅಕ್ಟೋಬರ್ 14 ಮತ್ತು 15 ರಂದು ಒ.ಆರ್.ಎಸ್. ಹೆಸರಿನಲ್ಲಿ ಇಂತಹ ಪಾನೀಯಗಳ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಅವುಗಳ ಮಾರಾಟ ಮುಂದುವರೆದಿದೆ. ಇದರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಫ್.ಎಸ್.ಎಸ್.ಎ.ಐ. ಘಟಕಗಳಿಗೆ ಸೂಚನೆ ನೀಡಲಾಗಿದೆ.
ಒ.ಆರ್.ಎಸ್. ಎಂದು ನಮೂದಿಸುವುದನ್ನು ನಿಲ್ಲಿಸಬೇಕು ;
ಒ.ಆರ್.ಎಸ್. ಹೆಸರಲ್ಲಿ ರಿಟೇಲ್ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಪೇಯಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ತಿಳಿಸಲಾಗಿದೆ. ಆಹಾರ ಉದ್ಯಮದಲ್ಲಿ ತೊಡಗಿರುವವರು ತಮ್ಮ ಉತ್ಪನ್ನಗಳ ಮೇಲೆ ಎಂದು ಒ.ಆರ್.ಎಸ್. ಎಂದು ನಮೂದಿಸುವುದನ್ನು ನಿಲ್ಲಿಸಬೇಕು ಎಂದು ಈ ಹಿಂದೆ ಎಫ್.ಎಸ್.ಎಸ್.ಎ.ಐ. ಸೂಚನೆ ನೀಡಿದೆ. ಈ ರೀತಿ ನಮೂದಿಸುವುದು ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುತ್ತದೆ ಎಂದು ಹೇಳಿತ್ತು. ಮೆಡಿಕಲ್ ಶಾಪ್ ಗಳಲ್ಲಿ ಒ.ಆರ್.ಎಸ್. ಹೆಸರಿನಲ್ಲಿ ಮಾರಾಟವಾಗುತ್ತಿರುವ ಹಣ್ಣಿನ ರಸಗಳು ಎನರ್ಜಿ ಡ್ರಿಂಕ್ ಗಳು ಮತ್ತು ಸಿಹಿ ಪೇಯಗಳನ್ನು ಕೂಡಲೇ ತೆರವುಗೊಳಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್.ಎಸ್.ಎಸ್.ಎ.ಐ.) ನಿರ್ದೇಶನ ನೀಡಿದೆ. ಆನ್ಸೆನ್ ಮಾರಾಟ ಮಳಿಗೆಗಳಲ್ಲಿಯೂ ಇವುಗಳನ್ನು ಮಾರಾಟ ಮಾಡದಂತೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ.
ORS is banned in energy drinks and fruit juice – ತುಳು ಟೈಮ್ಸ್
ಇದನ್ನೂ ಓದಿ :ಪ್ರಸ್ತುತ ಶೈಕ್ಷಣಿಕ ವರ್ಷದಿಂದ 4,056 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿ
==========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B7DSbRcw80Q?si=U42XMUvT9of7QRAN











