ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಾರ್ಮಿಕ ಗರ್ಭಿಣಿ ಮಹಿಳೆಯರಿಗೆ ಇಲಾಖೆಯಿಂದ ಸಹಾಯಧನ…!

ಕರ್ನಾಟಕ ಸರ್ಕಾರ : Tulu Times | ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆಯಿಂದ ಗರ್ಭಿಣಿ ಸ್ತ್ರೀಯರಿಗೆ ಸೌಲಭ್ಯ ನೀಡಲು ಮುಂದಾಗಿದೆ. ನೋಂದಾಯಿತ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಕಾರ್ಮಿಕ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದ್ದು, ಅರ್ಹರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಮೊದಲ ಎರಡು ಹೆರಿಗೆಗೆ ಮಂಡಳಿಯು ಸಹಾಯಧನ ನೀಡುತ್ತದೆ ;

ನೋಂದಾಯಿತ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಮಂಡಳಿಯು ಸಹಾಯಧನ ನೀಡುತ್ತದೆ. ಒಂದು ವೇಳೆ ಈಗಾಗಲೇ ನೋಂದಾಯಿತ ಮಹಿಳಾ ಕಾರ್ಮಿಕಳಿಗೆ ಎರಡು ಮಕ್ಕಳಿದ್ದರೆ, ಅವರು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುವುದಿಲ್ಲ. ಮಗುವಿನ ಜನನದ ದಿನಾಂಕದಿಂದ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು ಎಂದು ಪ್ರಕಟಣೆ ಹೊರಡಿಸಿದೆ. ಕಾರ್ಮಿಕ ಮಹಿಳೆಯರಿಗೆ ಸಕಲ ಸೌಲಭ್ಯಗಳು ಹೆಚ್ಚಾಗಿಯೇ ಸಿಗಬೇಕು, ಜೊತೆಗೆ ಅವರ ಕಾಳಜಿ ಕೂಡಾ ಮುಖ್ಯ ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸರ್ಕಾರದಿಂದ ಈ ಆಯೋಜನೆಯಿಂದ ಹಲವು ಮಹಿಳೆಯರಿಗೆ ಪ್ರಯೋಜನಕಾರಿಯಾಗಬಹುದು. Subsidy from the department for working pregnant women – ತುಳು ಟೈಮ್ಸ್‌ 

ಇದನ್ನೂ ಓದಿ :Bengaluru: ಬೆಂಗಳೂರಿನಲ್ಲಿ ಹಾಳಾದ ಗುಂಡಿ ವೀಕ್ಷಿಸಿ ವಿನೂತನ ಪ್ರತಿಭಟನೆ!

……

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B7DSbRcw80Q?si=d6Bwq3WJM3jFU2OR

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page