ಬ್ರೇಕಿಂಗ್ ನ್ಯೂಸ್
ದೇಶ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಹೃದಯಾಘಾತದಿಂದ ನಿಧನ…!

 ಕೊಲ್ಕತ್ತಾ : Tulu Times | ಹಠಾತ್ ಹೃದಯಾಘಾತ ಸಂಭವಿಸುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ವಯಸ್ಸಿನ ಭೇದವಿಲ್ಲ. ಯಾರಿಗೆ ಬೇಕಾದರೂ ಹೃದಯಾಘಾತವಾಗಬಹುದು. ಇಲ್ಲೊಬ್ಬ ವ್ಯಕ್ತಿಗೆ ವಿಮಾನದಲ್ಲಿ ಪ್ರಯಾಣ ಶುರು ಮಾಡುವಾಗಲೇ ಹೃದಯ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿರುವ ಸುದ್ದಿ ವರದಿಯಾಗಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿರುವ ಸಂದರ್ಭ ಎದೆ ನೋವು ;

ವ್ಯಾಂಕೋವರ್ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 70 ವರ್ಷದ ದಲ್ಬೀರ್ ಸಿಂಗ್ ಮೃತ ಪ್ರಯಾಣಿಕರಾಗಿದ್ದು, ಕೊಲ್ಕತ್ತಾ ಮೂಲಕ ದೆಹಲಿಗೆ ಹೊರಟಿದ್ದರೆನ್ನಲಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಸಂದರ್ಭ ಒಮ್ಮಿಂದೊಮ್ಮೆಲೇ ಎದೆ ನೋವು ಕಾಣಿಸಿಕೊಂಡಿತ್ತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸೇರಿದಂತೆ ತುರ್ತು ಚಿಕಿತ್ಸೆಗೋಸ್ಕರ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ರೋಗಿಯನ್ನು ಇಳಿಸಲಾಯಿತು. ದಲ್ಬೀರ್ ಸಿಂಗ್ ರನ್ನು ರಾತ್ರಿ 9:15 ರ ಸುಮಾರಿಗೆ ವಿಮಾನದಿಂದ ಇಳಿಸಿ, ನಂತರ ವಿಮಾನವು ರಾತ್ರಿ 10 ಹತ್ತಕ್ಕೆ ಉಳಿದ 176 ಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟಿತು.

ದಲ್ಬೀರ್ ಸಿಂಗ್ ರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯಕೀಯ ಸಿಬ್ಬಂದಿ ಅವರು ಮೃತಪಟ್ಟಿರುವುದು ಖಚಿತ ಪಡಿಸಿದ ನಂತರ, ಪೊಲೀಸರು ಕುಟುಂಬಕ್ಕೆ ಮಾಹಿತಿಯನ್ನು ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ವರದಿಯಾಗಿದೆ. A passenger traveling on a plane died of a heart attack –  ತುಳು ಟೈಮ್ಸ್‌

ಇದನ್ನೂ ಓದಿ :ಶ್ರೀನಿವಾಸ ಕಲ್ಯಾಣೋತ್ಸವದ ಬ್ಯಾನರ್‌ ಹಾನಿ – ಪುತ್ತಿಲ ಪರಿವಾರದಿಂದ ಪ್ರಾರ್ಥನೆ

================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/PDFUjSkFTZA?si=SV8x2vbnKJEXRI8p

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page