ರಷ್ಯಾ: Tulu Times | ಮುಂದಿನ ತಿಂಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದು, ಅತೀ ದೊಡ್ಡ ಆಫರ್ ನೀಡುತ್ತೇವೆ ಎಂದು ಹೇಳಿದ್ದು, ಭಾರತಕ್ಕೆ ಬೇಕಾದ್ದನ್ನು ನೀಡುತ್ತೇವೆ ಎಂದು ಘೋಷಣೆ ಮಾಡಿದೆ.
ರಷ್ಯಾ ಅಧ್ಯಕ್ಷರ ಭಾರತ ಭೇಟಿಗೆ ಭರ್ಜರಿ ವೇದಿಕೆ ಸಿದ್ಧವಾಗುತ್ತಿದ್ದು, ರಷ್ಯಾ ಭಾರತಕ್ಕೆ ಮಹತ್ವದ ಮಿಲಿಟರಿ ಪ್ರಸ್ತಾವನೆ ನೀಡಿದೆ.ವಿಶ್ವದ ಯಾವುದೇ ರಾಷ್ಟ್ರ ಮಾಡದ ‘ಸಾಹಸವನ್ನು ರಷ್ಯಾ ಮಾಡಿದೆ.
ಇದನ್ನೂ ಓದಿ: ತುಳುನಾಡಿನ ದೈವಗಳಿಗೆ ಮತ್ತೆ ಸಿನಿಮಾದಿಂದ ಅಪಚಾರ: ನಿಲ್ಲೋದು ಯಾವಾಗ?
ಹೌದು..ರಷ್ಯಾದ ಈ ಆಫರ್ ಭಾರತೀಯ ವಾಯು ಶಕ್ತಿಯ ಭವಿಷ್ಯವನ್ನು ಮರು ರೂಪಿಸಬಲ್ಲದು ಎಂದು ಹೇಳಲಾಗುತ್ತಿದೆ.
ರಷ್ಯಾ ಭಾರತಕ್ಕೆ ಮಹತ್ವದ ಮಿಲಿಟರಿ ಪ್ರಸ್ತಾವನೆ ನೀಡಿದೆ. ರಷ್ಯಾ ದೇಶದ ಭವಿಷ್ಯದ ಯುದ್ಧ ವಿಮಾನಗಳ ಅವಶ್ಯಕತೆಗಳನ್ನು ಬೆಂಬಲಿಸಲು ದೆಹಲಿಗೆ ಹೊಸ ಐದನೇ ತಲೆಮಾರಿನ Su-57 ಸ್ಟೆಲ್ತ್ ಫೈಟರ್ ಜೆಟ್‌ಗಾಗಿ ತಂತ್ರಜ್ಞಾನಕ್ಕೆ ಅನಿಯಂತ್ರಿತ ಪ್ರವೇಶದ ಅವಕಾಶ ನೀಡಿದೆ.
ಇದನ್ನೂ ಓದಿ: “ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ” ಕುರಿತು ಬಿಜೆಪಿ ವಿಡಿಯೋ ಬಿಡುಗಡೆ!
‘ಆರಂಭದಲ್ಲಿ ರಷ್ಯಾದಲ್ಲಿ ಉತ್ಪಾದಿಸಲಾದ Su-57 ಯುದ್ಧ ವಿಮಾನಗಳನ್ನು ಪೂರೈಸುವುದು ಮತ್ತು ಉತ್ಪಾದನೆಯನ್ನು ಹಂತಗಳಲ್ಲಿ ಭಾರತಕ್ಕೆ ವರ್ಗಾಯಿಸುವುದು ಪ್ರಸ್ತಾವನೆಯಾಗಿದೆ.ರಷ್ಯಾದ ಸರ್ಕಾರಿ ಸ್ವಾಮ್ಯದ ರಕ್ಷಣಾ ಸಮೂಹ ರೋಸ್ಟೆಕ್‌ನ ಸಿಇಒ ಸೆರ್ಗೆಯ್ ಚೆಮೆಜೋವ್ ಈ ಬಗ್ಗೆ ಮಾತನಾಡಿದ್ದು,ಮಾಸ್ಕೋ ತನ್ನ ಸಿಂಗಲ್-ಎಂಜಿನ್ ಸ್ಟೆಲ್ತ್ ಫೈಟರ್ ವಿಮಾನವಾದ Su-75 ಚೆಕ್‌ಮೇಟ್ ಅನ್ನು ಭಾರತಕ್ಕೂ ನೀಡಬಹುದು ಎಂದು ವರದಿ ಮಾಡಿದೆ.
ಇದನ್ನೂ ಓದಿ: ವಾಹನ ಸವಾರರಿಗೆ ಗುಡ್ ನ್ಯೂಸ್..! ಶೇ.50ರಷ್ಟು ಭಾರೀ ರಿಯಾಯಿತಿ ಯಾಕೆ..?
ಇನ್ನು ಬ್ರಿಟನ್‌ನ ಸಮುದ್ರ ಗಡಿಗೆ ನುಗ್ಗಿದ ರಷ್ಯಾದ ಗೂಢಚಾರಿಕೆ ಹಡಗು ‘ಯಾಂಟರ್’ ನುಗ್ಗಿ ಸೇನಾ ವಿಮಾನಗಳ ಮೇಲೆ ಲೇಸರ್ ಕಿರಣ ಹರಿಸಿ ದಾಳಿ ಮಾಡಿದೆ ಎಂದು ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ ಹೇಳಿದ್ದಾರೆ. ರಷ್ಯಾದ ಈ ಕ್ರಮ ಖಂಡಿಸಿರುವ ಹೀಲಿ, ನಾವು ರಷ್ಯಾದೊಂದಿಗೆ ಯುದ್ಧಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾದ ರಾಯಭಾರ ಕಚೇರಿ ಆರೋಪ ನಿರಾಕರಿಸಿದ್ದು, ಹೀಲಿಯವರ ಹೇಳಿಕೆಗಳು ಪ್ರಚೋದನಾಕರಿಯಾಗಿವೆ ಎಂದು ಹೇಳಿದೆ.
We will give India what it needs: Russia’s declaration! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











